UP: ಯೋಗಿ ಮತ್ತು ನಾನು ಪ್ರೇಮಿಗಳು ಎಂದ ಮಹಿಳೆ ಹೇಳಿಕೆಗೆ ಬಿಗ್ ಟ್ವಿಸ್ಟ್ – ಬಯಲಾಯ್ತು ಅಸಲಿ ಸತ್ಯ !!

Share the Article

UP: ಮಹಿಳೆಯೊಬ್ಬಳು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ಬಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adtyanath) ಅವರನ್ನು ನಾನು ಪ್ರೀತಿಸುತ್ತಿದ್ದೇನೆ. ಅವರಿಗೂ ನನ್ನ ಮೇಲೆ ಲವ್ ಇದೆ ಎಂದು ಹೇಳಿ ಸಂಚಲನ ಸೃಷ್ಟಿಸಿದ್ದಳು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಕಾನ್ಪುರ ಮೂಲದ ಹೇಮಾ ಸಕ್ಸೇನಾ(Hema Saxena) ಎಂಬಾಕೆ ‘ಸಿಎಂ ರಾತ್ರಿ ವೇಳೆ ನನಗೆ ಫೋನ್ ಮಾಡುತ್ತಾರೆ, ವೀಡಿಯೊ ಕರೆ ಮಾಡುತ್ತಾರೆ. ಯೋಗಿ ಕಳೆದ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಯೋಗಿ ಇತ್ತೀಚಿಗೆ ನನ್ನ ಹುಟ್ಟುಹಬ್ಬಕ್ಕೆ ಕರೆ ಮಾಡಿ ಶುಭಕೋರಿದ್ದರು. ಅವರು ಹೊರಗೆ ಬಂದು ತನ್ನನ್ನು ಭೇಟಿಯಾಗಬೇಕು’ ಎಂದು ಎಲ್ಲರೂ ಚಕಿತರಾಗುವಂತೆ ಮಾಡಿದ್ದಳು. ಈ ಹೇಳಿಕೆ ಬಗ್ಗೆ ಆಕೆಯ ತಾಯಿಯೇ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಕೆಲವೇ ಹೊತ್ತಲ್ಲಿ ಮಹಿಳೆ ಹೇಳಿಕೆಯ ನಿಜಾಂಶ ಎಲ್ಲರಿಗೂ ತಿಳಿದಿದೆ. ಸ್ವತಃ ಹೇಮಾಳ ತಾಯಿಯೇ ಈ ಬಗ್ಗೆ ಮಾತನಾಡಿ, ಮಗಳು ಹೇಮಾಳ ಮಾನಸಿಕ ಆರೋಗ್ಯ ಸ್ಥಿರವಾಗಿಲ್ಲ, ಅದಕ್ಕಾಗಿಯೇ ಈ ರೀತಿಯ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾಳೆ. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.

Leave A Reply