Bihar: ಕಾಲಿ 2 ಲಕ್ಷ ಹಣ ಕೊಟ್ಟು IPS ಅಧಿಕಾರಿ ಆದ 18 ಯುವಕ !! ಅರೆ.. ಏನಿದು ಊಹಿಸಲಾಗದ ಸುದ್ದಿ?
Bihar: ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು, ಅದನ್ನು ಈ ಸರ್ಕಾರಗಳು ನಿಯಂತ್ರಿಸದೆ ಸುಮ್ಮನಿರುವುದು ದುರಾದೃಷ್ಟಕರ. ಅದರಲ್ಲೂ ಸರ್ಕಾರಿ ಹುದ್ದೆಗಳಿಗಾಗಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ಲಂಚಪಡೆಯುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂದು ಹೆಚ್ಚಿನ ಸರ್ಕಾರಿ ಕೆಲಸಗಳು ಲಂಚದ ಮೂಲಕವೇ ಸಿಗುತ್ತಿರುವಾಗ ಲೋಕಸೇವಾ ಆಯೋಗದ ಪರೀಕ್ಷೆ, ಹುದ್ದೆಗಳು ಇಂದಿಗೂ ಪ್ರಾಮಾಣಿಕವಾಗಿ ನಡೆಯುತ್ತಿರುವುದು ಶ್ಲಾಘನೀಯ. ಆದರೀಗ ವೈರಲ್ ಆದ ಒಂದು ಸುದ್ದಿ ಕೇಳಿದರೆ ಇದಕ್ಕೂ ಈ ಅನಿಷ್ಟ ಲಂಚ, ಭ್ರಷ್ಟಾಚಾರ ಕಾಲಿಟ್ಟಿತಾ? ಎಂದು ಆಶ್ಚರ್ಯಪಡುತ್ತೀರಿ. ಆದರೆ ಇದರ ಅಸಲಿ ಕಥೆಯೇ ಬೇರೆ ಇದೆ. ಅದನ್ನು ತಿಳಿದರೆ ನೀವೇ ಬಿದ್ದು ಬಿದ್ದು ನಗುತ್ತೀರಿ.
ಬಿಹಾರದ(Bihara) ಜಮುಯಿ ನಗರದಲ್ಲಿ 18 ವರ್ಷದ ಯುವಕನೊಬ್ಬ IPS ಸಮವಸ್ತ್ರ ಧರಿಸಿ, ತಾನು IPS ಅಧಿಕಾರಿ ಎಂದು ಹೇಳುತ್ತಾ ಫೋಸ್ ಕೊಟ್ಟುಕೊಂಡು ಓಡಾಡುತ್ತಿದ್ದ. ಆತನ ಲೆಕ್ಕಾಚಾರದಲ್ಲಿ ಆತ ನಿಜಕ್ಕೂ IPS ಆಫೀಸರ್. ಇದಕ್ಕಾಗಿ ಆತ ಓದಲಿಲ್ಲ, ಪರೀಕ್ಷೆ ಬರೆಯಲಿಲ್ಲ, ಟ್ರೈನಿಂಗ್ ಹೋಗಲಿಲ್ಲ. ಬದಲಿಗೆ ಬರೀ 2 ಲಕ್ಷ ಕೊಟ್ಟು IPS ಆಫೀಸರ್ ಆಗಿದ್ದ. ಈ ಯುವಕ ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ತನ್ನ ಗ್ರಾಮದಲ್ಲಿ ಬಡಾಯಿ ಕೊಚ್ಚಿಕೊಳ್ಳುವಾಗ ಅಲ್ಲಿನ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮಿಥಿಲೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬಯಲಾಗಿದೆ.
ಹೌದು, ಇಲ್ಲಿನ ವಂಚಕರು ಐಪಿಎಸ್ ಅಧಿಕಾರಿಯನ್ನಾಗಿ ಮಾಡುವುದಾಗಿ ನಂಬಿಸಿ 2 ಲಕ್ಷ ರೂಪಾಯಿ ತೆಗೆದುಕೊಂಡು ಈ ಯುವಕನೊಬ್ಬನಿಗೆ ಮೋಸ ಮಾಡಿದ್ದಾರೆ. ವರದಿಗಳ ಪ್ರಕಾರ ಮನೋಜ್ ಸಿಂಗ್ ಎಂಬ ವಂಚಕ 18 ವರ್ಷದ ಮಿಥಿಲೇಶ್ ಮಾಂಝಿ ಎಂಬಾತನನ್ನು ಐಪಿಎಸ್ ಅಧಿಕಾರಿ ಮಾಡುವುದಾಗಿ ಪುಸಲಾಯಿಸಿ 2 ಲಕ್ಷ ರೂಪಾಯಿ ಹಣ ಪಡೆದು, ನಕಲಿ ಪಿಸ್ತೂಲ್ ಮತ್ತು ಯೂನಿಫಾರ್ಮ್ ನೀಡಿ ವಂಚನೆ ಮಾಡಿದ್ದಾನೆ.
ಈ ಬಗ್ಗೆ ಮಾತನಾಡಿರುವ ಬಂಧಿತ ಮಿಥಿಲೇಶ್, ಇತ್ತೀಚೆಗೆ ನಾನು ಜಲಪಾತ ವೀಕ್ಷಿಸಲು ಪ್ರವಾಸಕ್ಕೆ ಹೋದಾಗ ಅಲ್ಲಿ ಒಬ್ಬರನ್ನು ಭೇಟಿಯಾದೆ. ಅವರ ಮಾಟದ ಮಾತುಗಳನ್ನು ಕೇಳಿ ಮರುಳಾದೆ. ಕಡಿಮೆ ಹಣದಲ್ಲಿ ಐಪಿಎಸ್ ಅಧಿಕಾರಿಯನ್ನಾಗಿ ಮಾಡುತ್ತೇನೆ ಎಂದು ನಂಬಿಸಿದರು. ಅವರು ಆಡಿದ ಮಾತುಗಳನ್ನು ಕೇಳಿ ನಾನು ಕೂಡ ನಿಜವೆಂದು ನಂಬಿದೆ ಮತ್ತು ಒಳಗೊಳಗೆ ಖುಷಿಪಡುತ್ತಿದೆ. ನನಗೆ ಎಲ್ಲರೂ ಗೊತ್ತಿದೆ ಮತ್ತು ಸುಲಭವಾಗಿ ಕೆಲಸ ಕೊಡಿಸುತ್ತೇನೆಂದು ನಂಬಿಸಿದರು. ಅದಕ್ಕಾಗಿ ಎರಡು ದಿನದಲ್ಲಿ 2 ಲಕ್ಷ ರೂ. ಹಣ ಹೊಂದಿಸುವಂತೆ ಹೇಳಿದರು. ಇದಾದ ಬಳಿಕ ನಾನು ಸಂಬಂಧಿಕರ ಬಳಿ ಒತ್ತಾಯ ಮಾಡಿ ಎರಡು ಲಕ್ಷ ಸಾಲ ರೂ. ಪಡೆದು ವಂಚಕನಿಗೆ ನೀಡಿದೆ. ಇದಾದ ಬಳಿಕ ವಂಚಕರು ಸಮವಸ್ತ್ರದ ಜತೆಗೆ ನಕಲಿ ಪಿಸ್ತೂಲ್ ನೀಡಿದರು ಎಂದು ಮಿಥಿಲೇಶ್ ಹೇಳಿದ್ದಾನೆ.
ಸದ್ಯ ಬಂಧಿತ ಯುವಕ ಮಿಥಿಲೇಶ್‌ನಿಂದ ಪಲ್ಸರ್ ಬೈಕ್, ಪಿಸ್ತೂಲ್ ಹಾಗೂ ಯೂನಿಫಾರ್ಮ್ ವಶಕ್ಕೆ ಪಡೆಯಲಾಗಿದೆ. ಈ ವಂಚನೆಯಿಂದ ಒಂದು ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ.
A Police Sub-inspector arrested fake IPS officer in Jamui (The 18-year-old youth was going around wearing uniform and trying to act as an IPS when he was detained) Bihar
pic.twitter.com/1C4vWwLDIE— Ghar Ke Kalesh (@gharkekalesh) September 20, 2024