Gang Rape: ಬೈಕ್‌ನಲ್ಲಿ ಹೋಗುವಾಗ ಕೆಸೆರೆರೆಚಿದ್ದಕ್ಕೆ ವಿದ್ಯಾರ್ಥಿನಿಯಿಂದ ಅವಮಾನ; ಆಮೇಲೆ ನಡೆದಿದ್ದೇ ಭೀಕರ ಗ್ಯಾಂಗ್‌ ರೇಪ್‌

Share the Article

Gang Rape: ಬೈಕ್‌ನಲ್ಲಿ ಹೋಗುವ ಸಂದರ್ಭದಲ್ಲಿ ಕೆಸರು ತಾಗಿದ್ದಕ್ಕೆ ವಿದ್ಯಾರ್ಥಿನಿಯೋರ್ವಳು ಅವಮಾನ ಮಾಡಿದ್ದು, ಈ ಕಾರಣದಿಂದ ವ್ಯಕ್ತಿ ಹಾಗೂ ಆತನ ಸ್ನೇಹಿತರು ಸೇರಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌ ಮಾಡಿದ ಘಟನೆಯೊಂದು ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.

ಕಾಲೇಜು ವಿದ್ಯಾರ್ಥಿನಿಯೋರ್ವಳು ಸೆ.22 ರಂದು ಮೊಬೈಲನ್ನು ಅಂಗಡಿಗೆ ರಿಪೇರಿಗೆಂದು ಹೋಗುತ್ತಿದ್ದಾಗ ಆಕೆಯನ್ನು ಅಪಹರಣ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ.

ಆರೋಪಿ ಕಿಶನ್‌ಲಾಲ್‌ ವಿಚಾರಣೆ ಸಂದರ್ಭದಲ್ಲಿ ನಾನು ಬೈಕ್‌ನಲ್ಲಿ ಕೆಸರು ಇರುವ ರಸ್ತೆಯಲ್ಲಿ ಹೋಗುತ್ತಿದ್ದು, ರಸ್ತೆ ಬದಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕೆಸರು ತಾಗಿತ್ತು. ಆಗ ಆಕೆ ಅಷ್ಟೆಲ್ಲಾ ಜನರ ನಡುವೆ ನನಗೆ ಅವಮಾನ ಮಾಡಿದ್ದಾಗಿ ಆರೋಪಿ ಹೇಳಿದ್ದು, ಇದರಿಂದ ನನಗೆ ಮುಜುಗರ ಉಂಟಾಗಿತ್ತು ಎಂದು ವಿಚಾರಣೆಯಲ್ಲಿ ಹೇಳಿದ್ದಾನೆ. ಇದರಿಂದ ಈತ ಕೋಪಗೊಂಡಿದ್ದು, ಸಂತ್ರಸ್ತ ಯುವತಿಗೆ ತಕ್ಕ ಪಾಠ ಕಲಿಸಬೇಕೆಂದು ನಿರ್ಧಾರ ಮಾಡಿದ್ದು. ಕಿಶನ್‌ ಲಾಲ್‌ ಮತ್ತು ಆತನ ಸ್ನೇಹಿತ ಸಂತಲಾಲ್‌ ಆಕೆಯನ್ನು ಅಪಹರಣ ಮಾಡಿದ್ದು, ಪೊದೆಗಳ ಹಿಂದೆ ಕರೆದೊಯ್ದಿದ್ದು ಅಪ್ಪಿ ಗ್ಯಾಂಗ್‌ ರೇಪ್‌ ಮಾಡಿದ್ದಾರೆ.

ನಂತರ ವಿದ್ಯಾರ್ಥಿನಿ ಪೋಷಕರಿಗೆ ಈ ವಿಷಯ ತಿಳಿಸಿದ್ದು, ದೂರು ದಾಖಲು ಮಾಡಿದ್ದಾರೆ. ಇದೀಗ ಪೊಲೀಸರು ವಿದ್ಯಾರ್ಥಿನಿ ದೂರು ದಾಖಲು ಮಾಡಿ, ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

Leave A Reply