Bank account: ಬ್ಯಾಂಕ್ ಗ್ರಾಹಕರ ಗಮನಕ್ಕೆ! ಈ ಒಂದು ಕೆಲಸ ಮಾಡದಿದ್ದರೆ ನಿಮ್ಮ ಅಕೌಂಟ್ ಕ್ಲೋಸ್ ಆಗುತ್ತೆ
Bank account: ಪ್ರಸ್ತುತ ಬಹುತೇಕರು ಬ್ಯಾಂಕ್ ಮೂಲಕ ವ್ಯವಹಾರ ನಡೆಸುತ್ತಾರೆ. ಆದ್ರೆ ಕೆಲವರು ಬ್ಯಾಂಕ್ ವ್ಯವಹಾರ ನಡೆಸದೆ ಖಾತೆ ಮಾತ್ರ ತೆರೆದಿರುತ್ತಾರೆ. ಅಂತಹವರಿಗೆ ಇಲ್ಲಿ ಮುಖ್ಯವಾದ ಮಾಹಿತಿ ನೀಡಲಾಗಿದೆ.
ಮುಖ್ಯವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ (PNB ಬ್ಯಾಂಕ್) ಖಾತೆ ಇದ್ದರೆ, ಅಂತಹ ಗ್ರಾಹಕರು ಅಥವಾ ಖಾತೆದಾರರಿಗೆ ಬ್ಯಾಂಕ್ ಎಚ್ಚರಿಕೆ ನೀಡಿದೆ. ಹೌದು, ಒಂದು ವೇಳೆ ನೀವು ಈ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ವಹಿವಾಟು ನಡೆಸಿಲ್ಲ ಎಂದಲ್ಲಿ ನಿಮ್ಮ ಅಕೌಂಟ್ (Bank account) ನ್ನು ಕ್ಲೋಸ್ ಮಾಡಲಾಗುತ್ತೆ. ಅವರ ಖಾತೆಯಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ವಹಿವಾಟು ನಡೆದಿಲ್ಲ ಎಂದರೆ ಅಂತಹ ಖಾತೆಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದೆ.
ಅದಕ್ಕಾಗಿ ಈ ಕೆಲಸವನ್ನು ಆದಷ್ಟು ಬೇಗ ಮಾಡಿ. ಮೊದಲು ನಿಮ್ಮ ಖಾತೆಯಲ್ಲಿ ವಹಿವಾಟುಗಳು ನಡೆಯುತ್ತಿವೆ ಎಂದು ಖಚಿತಪಡಿಸಿಕೊಳ್ಳಿ. ಈ ಹಿಂದೆಯೂ ಬ್ಯಾಂಕ್ ಈ ಬಗ್ಗೆ ಗ್ರಾಹಕರಿಗೆ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಆದರೆ ಈ ಬಾರಿ ಬ್ಯಾಂಕ್ ಯಾವುದೇ ಗಡುವನ್ನು ನಿಗದಿಪಡಿಸಿಲ್ಲ. ಈ ಕುರಿತು ಬ್ಯಾಂಕ್ ಹಲವು ಬಾರಿ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ, ಆದರೆ ಇಷ್ಟಾದರೂ ಇನ್ನೂ ಅನೇಕ ಖಾತೆಗಳಲ್ಲಿ ವಹಿವಾಟು ನಡೆದಿಲ್ಲ. ಇದರಿಂದಾಗಿ ಬ್ಯಾಂಕ್ ಮತ್ತೆ ಎಚ್ಚರಿಕೆ ರವಾನಿಸಿದೆ.
ಈ ಮಾಹಿತಿಯನ್ನು ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮೇ 1, 2024, ಮೇ 16, 2024, ಮೇ 24, 2024, ಜೂನ್ 1, 2024 ಮತ್ತು ಜೂನ್ 30, 2024 ರಂದು ಹಂಚಿಕೊಳ್ಳಲಾಗಿದೆ. ಸದ್ಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಯಾವುದೇ ಪ್ರಕಟಣೆ ನೀಡದೆ ಅಂತಹ ಎಲ್ಲಾ ಖಾತೆಗಳನ್ನು ಮುಚ್ಚಲಾಗುವುದು ಎಂದು ಈಗಾಗಲೇ ಸ್ಪಷ್ಟಪಡಿಸಿದೆ.
ಆದರೆ ಈ ಮೊದಲೇ ಡಿಮ್ಯಾಟ್ ಖಾತೆಗಳಿಗೆ ಲಿಂಕ್ ಮಾಡಲಾದ ಖಾತೆಗಳನ್ನು ಮುಚ್ಚಲಾಗುವುದಿಲ್ಲ. ಜೊತೆಗೆ 25 ವರ್ಷದೊಳಗಿನ ಗ್ರಾಹಕರನ್ನು ಹೊಂದಿರುವ ವಿದ್ಯಾರ್ಥಿ ಖಾತೆಗಳು, ಅಪ್ರಾಪ್ತ ವಯಸ್ಕರ ಖಾತೆಗಳು, SSY/PMJJBY/PMSBY/APY ಮುಂತಾದ ಯೋಜನೆಗಳಿಗಾಗಿ ತೆರೆಯಲಾದ ಖಾತೆಗಳನ್ನು ಸಹ ಸ್ಥಗಿತಗೊಳಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಆದ್ದರಿಂದ ನಿಮ್ಮ ಖಾತೆಯನ್ನು ಸಕ್ರಿಯವಾಗಿಡಲು ನೀವು ಬಯಸಿದಲ್ಲಿ, ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮತ್ತು ತಕ್ಷಣ KYC ಮಾಡಿಸಿಕೊಳ್ಳುವುದು ಸೂಕ್ತ.