Justice Shreeshanad: ಹೈಕೋರ್ಟ್ ಜಡ್ಜ್ ಶ್ರೀಷಾನಂದರ ಮತ್ತೊಂದು ಅಸಹ್ಯಕರ ಹೇಳಿಕೆ ವಿಡಿಯೋ ವೈರಲ್ !! ತೀವ್ರ ಖಂಡನೆ, CJI ಗೆ ದೂರು

Justice Shreeshanad: ತಮ್ಮ ಮಾತುಗಳು, ತೀರ್ಪುಗಳ ಮೂಲಕವೇ ಫೇಮಸ್ ಆಗುತ್ತಾ ಕನ್ನಡ ಜನಗಳಿಗೆ ಹತ್ತಿರಾಗುತ್ತಿರುವವರೆಂದರೆ ಅದು ಕರ್ನಾಟಕ ಹೈಕೋರ್ಟ್(Karnataka High Court) ನ್ಯಾಯಾಧೀಶಾರಾದ ವೇದವ್ಯಾಸಾಚಾರ್ ಶ್ರೀಷಾನಂದ(Vedavyasacharya Shreeshananda Sai) ಅವರು. ಇತ್ತೀಚೆಗಷ್ಟೆ ಮಾತಿನ ಭರದಲ್ಲಿ ಮುಸ್ಲಿಮರು ಹೆಚ್ಚಿರುವ ಪ್ರದೇಶವನ್ನು ಪಾಕಿಸ್ತಾನ ಎಂದು ಕರೆದು ಟೀಕೆ, ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಬೆನ್ನಲ್ಲೇ ಅವರು ಮಹಿಳಾ ವಕೀಲರೊಬ್ಬರ ವಾದವನ್ನಾಲಿಸುವಾಗ ಅಸಹ್ಯಕರವಾಗಿ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಹೌದು, ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಷಾನಂದ ಅವರು ಪುರುಷ ವಕೀಲ ಧರಿಸಿರುವ ಅಂಡರ್ ಗಾರ್ಮೆಂಟ್ (ಒಳ ಉಡುಪು) ಯಾವುದು ಎಂದೂ ನಾಳೆ ಹೇಳೀರಿ ಎಂದು ಮಹಿಳಾ ವಕೀಲೆಗೆ ಅಪಮಾನಿಸಿರುವ ವಿಡಿಯೋ ವೈರಲ್ ಆಗಿದೆ. ಶ್ರೀಷಾನಂದ ಅವರು ಮತ್ತೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಶ್ರೀಷಾನಂದ ಅವರು, ಪುರುಷ ವಕೀಲನಿಗೆ ‘ನೀವು ಇನ್‌ಕಮ್ ಟ್ಯಾಕ್ಸ್ ಅಸೆಸ್ಸಿಯೇ’ ಎಂದು ಇಂಗ್ಲಿಷ್‌ನಲ್ಲಿ ಕೇಳಿದ್ದಾರೆ. ಆಗ, ತಕ್ಷಣ ಪ್ರತಿಕ್ರಿಯಿಸಿದ ಮಹಿಳಾ ವಕೀಲೆ, “ಹೌದು. ಅವರು ಇನ್‌ಕಮ್ ಟ್ಯಾಕ್ಸ್ ಅಸೆಸ್ಸಿ” ಎಂದು ಹೇಳಿದ್ದಾರೆ. ಮಹಿಳಾ ವಕೀಲೆ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ವೇಯ್ಡ್ ಅಮ್ಮ ನೀವು ಯಾಕೆ ಹೇಳುತ್ತಿದ್ದೀರಿ? ಅವರ ಬಗ್ಗೆ ನಿಮಗೆ ಎಲ್ಲವೂ ತಿಳಿದಿದೆ. ನಾಳೆ ಬೆಳಿಗ್ಗೆ ಅವರು ಯಾವ ಬಣ್ಣದ ಅಂಡ‌ರ್ ಗಾರ್ಮೆಂಟ್ (ಒಳ ಉಡುಪು) ಧರಿಸುತ್ತಾರೆ ಎಂದೂ ನೀವು ಹೇಳುತ್ತೀರಿ” ಎಂದು ಹೇಳಿದ್ದಾರೆ. ಮಹಿಳಾ ವಕೀಲೆಯನ್ನು ಅಪಮಾನಿಸಿದ್ದಾರೆ.

ಸದ್ಯ ಈ ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು ಕೆಲವರು ನ್ಯಾಯಮೂರ್ತಿಯಗಳ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಹಿರಿಯ ವಕೀಲೆ ಇಂದಿರಾ ಜೈಸಿಂಗ್, “ಈ ನ್ಯಾಯಾಧೀಶರ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬೇಕು. ಅವರನ್ನು ಲಿಂಗ ಸಂವೇದನೆ ತರಬೇತಿಗೆ ಕಳುಹಿಸಬೇಕೆಂದು ನಾವು ಭಾರತದ ಮುಖ್ಯ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಪಾಕಿಸ್ತಾನ ಹೇಳಿಕೆ ಎಡವಟ್ಟು:
ಇತ್ತೀಚೆಗೆ ನಡೆದ ವಿಚಾರಣೆಯೊಂದರ ಸಂದರ್ಭದಲ್ಲಿ, ‘ಬೆಂಗಳೂರು ರಸ್ತೆ ಮೇಲುಸೇತುವೆಗೆ ಹೋಗಿ ನೋಡಿ, ಪ್ರತಿ ಆಟೋರಿಕ್ಷಾದಲ್ಲೂ 10 ಮಂದಿಯಿರುತ್ತಾರೆ. ಇಲ್ಲಿ ಕಾನೂನು ಅನ್ವಯಿಸುವುದಿಲ್ಲ. ಯಾಕೆಂದರೆ, ಮೈಸೂರು ಮೇಲ್ಸೇತುವೆಯು ಗೋರಿಪಾಳ್ಯದಿಂದ ಎಡಕ್ಕೆ ಮಾರುಕಟ್ಟೆಗೆ ತೆರಳುತ್ತದೆ. ಇದು ಪಾಕಿಸ್ತಾನದಲ್ಲಿದೆ, ಭಾರತದಲ್ಲಲ್ಲ. ಇದು ವಾಸ್ತವ. ಅಲ್ಲಿಗೆ ಎಷ್ಟೇ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡಿದರೂ, ಅವರನ್ನು ಥಳಿಸಲಾಗುತ್ತೆ” ಎಂದು ವೇದವ್ಯಾಸಾಚಾರ್ ಶ್ರೀಷಾನಂದ ಸಾಯಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ನಂತರ ಅವರು ಕ್ಷಮೆ ಕೂಡ ಕೇಳಿದ್ದರು.

 

Leave A Reply

Your email address will not be published.