Tirumala: ತಿಮ್ಮಪ್ಪನ ಭಕ್ತರಿಗೆ ಮತ್ತೊಂದು ಬಿಗ್ ಶಾಕ್ – ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆ !!

Tirumala: ದೇಶದೆಲ್ಲೆಡೆ ಈಗ ತಿರುಪತಿ ಲಡ್ಡು ವಿವಾದದ್ದೇ ಚರ್ಚೆಗಳು. ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನೆಣ್ಣೆ ಸೇರಿದಂತೆ ಇನ್ನಿತರ ಕಲಬೆರಕೆ ಪದಾರ್ಥಗಳನ್ನು ಬಳಸಲಾಗಿದೆ ಎನ್ನುವ ವಿಚಾರದಿಂದ ಎಲ್ಲರೂ ಶಾಕ್‌ ಆಗಿದ್ದಾರೆ. ವಿಶ್ವ ವಿಖ್ಯಾತ ತಿರಪತಿ ತಿಮ್ಮಪ್ಪನ ಲಡ್ಡು(Tirupati Laddu) ಪ್ರಸಾದದ ಈ ವಿವಾದ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಬೆನ್ನಲ್ಲೇ ತಿಮ್ಮಪ್ಪನ ಭಕ್ತರಿಗೆ ಮತ್ತೊಂದು ಶಾಕ್ ಎದುರಾಗಿದೆ.

ತಿರುಮಲ(Tirumala) ತಿಮ್ಮಪ್ಪನ ಲಡ್ಡು ಪ್ರಸಾದದ ವಿಚಾರವಾಗಿ ಮತ್ತೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಅದೇನೆಂದರೆ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಕಾಣಿಸಿಕೊಂಡಿದೆ. ಹೌದು, ಖಮ್ಮಂ ಜಿಲ್ಲೆಯ ಗ್ರಾಮಾಂತರ ಮಂಡಲ ವ್ಯಾಪ್ತಿಯ ಗೊಲ್ಲಗುಡೆಂ ಪಂಚಾಯತ್ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೊಂತು ಪದ್ಮಾವತಿ ಅವರು ಸೆಪ್ಟೆಂಬರ್ 19 ರಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹಿಂತಿರುಗುವಾಗ ತನ್ನ ಸಂಬಂಧಿಕರು ಮತ್ತು ನೆರೆಹೊರೆಯವರೊಂದಿಗೆ ಹಂಚಿಕೊಳ್ಳಲು ಶ್ರೀವಾರಿ ಲಡ್ಡು ಪ್ರಸಾದವನ್ನು ತಂದಿದ್ದರು. ಭಾನುವಾರ (ಸೆಪ್ಟೆಂಬರ್ 22) ಪ್ರಸಾದ ಹಂಚಲು ಲಡ್ಡು ತೆಗೆದು ನೋಡಿದಾಗ ಅದರಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾಗಿದೆ !!

ಅತ್ಯಂತ ಪವಿತ್ರವಾದ ಲಡ್ಡೂವಿನಲ್ಲಿ ಗೋಡಂಬಿ, ಒಣದ್ರಾಕ್ಷಿ, ಬಾದಾಮಿ ಬರುತ್ತಿರುವುದನ್ನು ನೋಡಿದ ಪದ್ಮಾವತಿಗೆ ಅದೇ ಸಮಯಕ್ಕೆ ಗುಟ್ಕಾ ಪ್ಯಾಕೆಟ್ ಕಂಡು ಆಶ್ಚರ್ಯವಾಗಿದೆ. ಈ ವಿಷಯವನ್ನು ತಮ್ಮ ಕುಟುಂಬಸ್ಥರಿಗೆ ತಿಳಿಸಿ, ಆ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ.. ಲಡ್ಡೂ ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಕಲಬೆರಕೆ ಆಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಡುವೆ ಗುಟ್ಕಾ ಪ್ಯಾಕೆಟ್ ಕಾಣಿಸಿಕೊಂಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಇದೀಗ ಗುಟ್ಕಾ ಪ್ಯಾಕೇಟ್ ಎಲ್ಲಿಂದ ಬಂತು ಎನ್ನುವ ಪ್ರಶ್ನೆ ಮೂಡಿದೆ. ಲಡ್ಡುಗಳನ್ನು ತಯಾರಿಸುವಾಗ ಯಾರಾದರೂ ಗುಟ್ಕಾ ಉಪಯೋಗಿಸಿರಬಹುದು, ಆ ವೇಳೆ ಆ ಪ್ಯಾಕೆಟ್ ಬಿತ್ತಾ? ಅಥವಾ ತಯಾರಕರೇ ನಿರ್ಲಕ್ಷ್ಯದಿಂದ ಲಡ್ಡುವಿನಲ್ಲಿ ಗುಡ್ಕಾ ಪ್ಯಾಕೇಟ್ ಹಾಕಿದ್ರಾ ಎನ್ನುವ ಅನುಮಾನ ಮೂಡಿದೆ. ಅಲ್ಲದೆ ಲಡ್ಡು ತಯಾರಿಸುವ ಸ್ಥಳದಲ್ಲಿ ಯಾರು ಗುಟ್ಕಾ ಬಳಸುತ್ತಾರೆ ಎನ್ನುವ ಪ್ರಶ್ನೆ ಕೂಡ ಸೃಷ್ಟಿಯಾಗಿದೆ.

ತಿರುಮಲದಲ್ಲಿ ಗುಟ್ಕಾಗಳು, ಮದ್ಯಪಾನ, ಧೂಮಪಾನ ಮತ್ತು ಮಾಂಸವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಹೇಗೆ ಬಂತು? ಎಂಬುವ ಪ್ರಶ್ನೆ ಕೂಡ ಎದುರಾಗಿದೆ. ಇದು ಅಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಯ ಮೇಲೆ ಅನುಮಾನವನ್ನು ಹೆಚ್ಚಿಸಿದೆ. ಹೀಗೆ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಸಿಕ್ಕಿರುವುದು ಇದೇ ಮೊದಲಲ್ಲ. 2012ರಲ್ಲೂ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಕಾಣಿಸಿಕೊಂಡಿತ್ತು ಎಂಬುದು ಗಮನಾರ್ಹ. ಒಟ್ಟಿನಲ್ಲಿ ಇದೀಗ ತಿರುಪತಿ ಲಡ್ಡು ತಯಾರಿಕೆ ಗುಣಮಟ್ಟದ ಬಗ್ಗೆ ಸಾಕಷ್ಟು ಅನುಮಾನಗಳನ್ನು ಹೆಚ್ಚಿಸಿದೆ.

Leave A Reply

Your email address will not be published.