Pager Attack: ಲೆಬಾನ್-ಸಿರಿಯಾದ ಮೇಲೆ ಊಹೆಗೂ ನಿಲುಕದ ದಾಳಿ, ಏಕಕಾಲಕ್ಕೆ 4,000 ಪೇಜರ್ ಸ್ಪೋಟ- ಪೇಜರ್ ಅಂದ್ರೆ ಏನು? ಸ್ಪೋಟಿಸಿದ್ದು ಹೇಗೆ?
Pager Attack: ಲೆಬನಾನ್ (Lebanon) ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ (Hezbollah) ಸಂಘಟನೆ ಸದಸ್ಯರ ಮೇಲೆ ರಹಸ್ಯ ದಾಳಿ ನಡೆದು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಉಗ್ರರು ಸಂವಹನಕ್ಕಾಗಿ ಬಳಸುತ್ತಿದ್ದ ಪೇಜರ್ (Pager) ಸಾಧನವೇ ಸ್ಫೋಟಗೊಂಡು ಕನಿಷ್ಟ 8 ಮಂದಿ ಸಾವನ್ನಪ್ಪಿ 2 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದರು. ಈ ಬೆನ್ನಲ್ಲೇ ಇದೀಗ ಮತ್ತೆ ಲೆಬನಾನ್, ಸಿರಿಯಾದಲ್ಲಿ (Lebanon Pager Explosions) ಬುಧವಾರ ಯಾರೂ ಊಹೆ ಮಾಡದ ಸಿನಿಮಾ ಶೈಲಿಯಲ್ಲಿ ದಾಳಿಗಳು ನಡೆದಿದೆ. ಎರಡು ದೇಶಗಳಲ್ಲಿ ಒಂದೇ ದಿನ, ಒಂದೇ ಕ್ಷಣದಲ್ಲಿ ಸಾವಿರಾರು ಪೇಜರ್‌ಗಳು ಏಕಾಏಕಿ ಸ್ಫೋಟಗೊಂಡಿವೆ.
ಹೌದು, ಪೇಜರ್‌ಗಳು ಸ್ಫೋಟಗೊಂಡ (Pager Explosions) ಬೆನ್ನಲ್ಲೇ ಲೆಬನಾನ್‌ನಲ್ಲಿ (Lebanon) ಈಗ ಏಕಕಾಲದಲ್ಲಿ ವಾಕಿಟಾಕಿಗಳು (Walkie Talkie )ಸ್ಫೋಟಗೊಂಡಿವೆ. ಲೆಬನಾನ್‌ನ ಸಶಸ್ತ್ರ ಗುಂಪು ಹಿಜ್ಬುಲ್ಲಾ ಸದಸ್ಯರು ಸಂವಹನಕ್ಕೆ ಬಳಸುತ್ತಿದ್ದ ಸಾಧನಗಳು ಬುಧವಾರ ಮಧ್ಯಾಹ್ನ ಏಕಾಏಕಿಯಾಗಿ ಸ್ಫೋಟಗೊಂಡಿವೆ ಎಂದು ವರದಿಯಾಗಿದೆ. 4000 ಅಧಿಕ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡ 24 ಗಂಟೆಗಳ ನಂತರ ಈ ಸ್ಫೋಟ ಸಂಭವಿಸಿದೆ.
ಪೇಜರ್ ಸ್ಫೋಟದಲ್ಲಿ ಓರ್ವ ಬಾಲಕಿ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುಮಾರು 2,750 ಜನರು ಗಾಯಗೊಂಡಿದ್ದಾರೆ. ಅವರಲ್ಲಿ 200ಕ್ಕೂ ಹೆಚ್ಚು ಜನರ ಮುಖ, ಕೈ ಮತ್ತು ಹೊಟ್ಟೆಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ. ವ್ಯಾಪಕ ಭೀತಿಯ ನಡುವೆ ಲೆಬನಾನ್ ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರಗಳ ಮೂಲಕ ಆಂಬ್ಯುಲೆನ್ಸ್‌ಗಳು ಧಾವಿಸುತ್ತಿರುವುದನ್ನು ರಾಯಿಟರ್ಸ್ ಪತ್ರಕರ್ತರೊಬ್ಬರು ನೋಡಿದ್ದಾರೆ. ಆರಂಭಿಕ ಸ್ಫೋಟ ಸಂಭವಿಸಿದ 30 ನಿಮಿಷಗಳ ನಂತರವೂ ಸ್ಫೋಟಗಳು ನಡೆಯುತ್ತಿದ್ದವು ಎಂದು ಸ್ಥಳೀಯ ನಿವಾಸಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅಂದಹಾಗೆ ದಾಳಿಗಳ ಹಿಂದೆ ಇಸ್ರೇಲ್ ಕೈವಾಡವಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಎಚ್ಚರಿಕೆ ನೀಡಿದೆ. ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಲೆಬನಾನ್ ದೂರು ನೀಡಿದೆ. ತಮ್ಮ ವಿರುದ್ಧದ ಆರೋಪಗಳನ್ನು ಇಸ್ರೇಲ್ ಇಲ್ಲಿಯವರೆಗೆ ತಳ್ಳಿಹಾಕಿಲ್ಲ. ನಿಗೂಢ ಕಾರ್ಯಚರಣೆಗೆ ಹೆಸರಾದ ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್, ಹೆಜ್ಬುಲ್ಲಾ ಸ್ವಂತ ಟೆಲಿಕಾಂ ನೆಟ್‌ವರ್ಕ್ ಹ್ಯಾಕ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಪೇಜರ್ ಎಂದರೇನು?:
ಸೆಲ್ ಫೋನ್‌ಗಳು ಬರುವ ಮೊದಲು ಮಾಹಿತಿ ತಿಳಿಸಲು ಪೇಜರ್‌ಗಳನ್ನು ಬಳಸಲಾಗುತ್ತಿತ್ತು. ಸೆಲ್ ಫೋನ್ ಗಾತ್ರದಷ್ಟೇ ಇರುವ ಈ ಪೇಜರ್‌ಗಳಿಂದ ಅಗತ್ಯ ಸಂದೇಶ ತಲುಪಿಸಬಹುದು. ಮೊದಲನೆಯದಾಗಿ, ನಾವು ಪೇಜರ್ ಕೇಂದ್ರಕ್ಕೆ ಕರೆ ಮಾಡಬೇಕು ಮತ್ತು ನಾವು ಯಾರಿಗೆ ಯಾವ ವಿಷಯದ ಬಗ್ಗೆ ತಿಳಿಸಬೇಕು ಎಂದು ಹೇಳಬೇಕು. ಆ ಕೇಂದ್ರದ ಪ್ರತಿನಿಧಿಯೊಬ್ಬರು ಸಂಬಂಧಪಟ್ಟ ವ್ಯಕ್ತಿಯ ಪೇಜರ್‌ಗೆ ಸಂದೇಶ ಕಳುಹಿಸುತ್ತಾರೆ. ಸಂದೇಶ ನೋಡಿದ ಬಳಿಕ ಆ ವ್ಯಕ್ತಿ ಸಾರ್ವಜನಿಕ ದೂರವಾಣಿ ಬೂತ್‌ನಿಂದ ಅಗತ್ಯವಿರುವವರಿಗೆ ಕರೆ ಮಾಡಿ ಮಾತನಾಡುತ್ತಾರೆ. ಇದನ್ನು ಪೇಜರ್ ಎನ್ನುತ್ತಾರೆ.
ಪೇಜರ್ ಬಳಸಿದ್ದು ಯಾಕೆ?
ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾ ನಾಯಕರ ಮೇಲೆ ಗುರಿಯಿಟ್ಟು ಇಸ್ರೇಲ್ ದಾಳಿ ನಡೆಸುತ್ತಿತ್ತು. ಸ್ಮಾರ್ಟ್‌ಫೋನ್ ಬಳಕೆಯಿಂದ ನಮ್ಮ ಮಾಹಿತಿಗಳು ಸೋರಿಕೆಯಾಗಿ ಇಸ್ರೇಲ್ ದಾಳಿ ಮಾಡುತ್ತಿದೆ ಎಂದು ಅರಿತ ಹಿಜ್ಬುಲ್ಲಾ ಫೋನ್ ಬಳಸದೇ ಸಂವಹನಕ್ಕಾಗಿ ಪೇಜರ್ ಬಳಸುತ್ತಿತ್ತು. ಈಗ ಅದೇ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ.
ಸ್ಫೋಟ ಹೇಗೆ ಆಗಿರಬಹುದು?
ಈ ಸ್ಫೋಟ ಹೇಗೆ ನಡೆದಿದೆ ಎನ್ನುವುದಕ್ಕೆ ಯಾರೂ ನಿಖರವಾದ ಕಾರಣ ನೀಡಿಲ್ಲ. ತಜ್ಞರು ಒಂದೊಂದು ಮಾಧ್ಯಮದಲ್ಲಿ ಒಂದೊಂದು ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರುಗಳನ್ನು ನೀಡಿದ ವಿವರಗಳನ್ನು ಇಲ್ಲಿ ಒಟ್ಟಾಗಿ ಕ್ರೋಢಿಕರಿಸಿ ತಿಳಿಸಲಾಗಿದೆ.