Pavitra Gowda: ‘ಡಿ’ ಗ್ಯಾಂಗ್’ಗೆ ರೇಣುಕಾ ಸ್ವಾಮಿ ತಗಲಾಕೊಂಡದ್ದು ಹೇಗೆ? ಅಸಲಿ ಸತ್ಯ ಬಿಚ್ಚಿಟ್ಟ ಪವಿತ್ರ ಗೌಡ

Pavitra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukswamy Murder Case) ಹಿನ್ನೆಲೆ ಪೊಲೀಸರು ಸಲ್ಲಿಸಿರುವ ಸಾವಿರ ಸಾವಿರ ಪುಟಗಳ ಚಾರ್ಜ್‌ಶೀಟ್‌ನಿಂದ ಒಂದೊಂದಾಗಿ ವಿಷಯಗಳು ಹೊರಬರುತ್ತಿವೆ. ಸ್ವತಃ ದರ್ಶನ್, ಪವಿತ್ರ ಗೌಡ ಹೇಳಿಕೆಗಳೂ ಇಲ್ಲಿ ಯತಾವತ್ತಾಗಿ ಉಲ್ಲೇಖವಾಗಿವೆ. ಒಂದೊಂದು ವಿಚಾರ ಹುಬ್ಬೇರಿಸುವಂತಿದೆ. ಅಂತೆಯೇ ಇದೀಗ ಕಿಲ್ಲಿಂಗ್ ಗ್ಯಾಂಗ್ ಅಥವಾ ಡಿ ಗ್ಯಾಂಗ್ ಗೆ ರೇಣುಕಾ ಸ್ವಾಮಿ ಹೇಗೆ ತಗಲಾಕ್ಕೊಂಡ ಎಂಬುದನ್ನು ಪವಿತ್ರ ಗೌಡ ವಿವರವಾಗಿ ವಿವರಿಸಿದ್ದಾಳೆ. ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಪವಿತ್ರ ಗೌಡಳ ಹೇಳಿಕೆ:
‘2013ರಲ್ಲಿ ನಾನು ವೈಯಕ್ತಿಕ ಹಾಗೂ ಮಾಡೆಲಿಂಗ್‌ ವಿಚಾರ ಹಂಚಿಕೊಳ್ಳಲು ನನ್ನದೇ ಇನ್‌ಸ್ಟಾಗ್ರಾಮ್‌ ಖಾತೆ ತೆರೆದಿದ್ದೆ. ಈ ಖಾತೆಯನ್ನು ನನ್ನ ಐಫೋನ್‌ ಮ್ಯಾಕ್ಸ್‌-14 ಮೊಬೈಲ್‌ನಿಂದಲೇ ನಿರ್ವಹಣೆ ಮಾಡುತ್ತಿದ್ದೆ. ಈ ಫೋನನ್ನು ದರ್ಶನ್‌ ಅವರೇ ಕೊಡಿಸಿದ್ದರು. ನನಗೆ ಹಲವಾರು ಫಾಲೋವರ್ಸ್ ಇದ್ದರು. ಖಾತೆ ಪಬ್ಲಿಕ್‌ ಆಗಿದ್ದರಿಂದ ನೆಟ್ಟಿಗರು ನೇರವಾಗಿ ಮೆಸೇಜ್‌ ಮಾಡುತ್ತಿದ್ದರು. ಇನ್‌ಬಾಕ್ಸ್‌ ತೆರೆದು ನೋಡಿದಾಗ ಕೆಲವರು ಅಸಭ್ಯ ರೀತಿಯ ಮೆಸೇಜ್‌ ಕಳಿಸಿರುತ್ತಿದ್ದರು. ಅಂತಹ ನೆಟ್ಟಿಗರ ಪ್ರೊಫೈಲ್‌ಗಳನ್ನು ಬ್ಲಾಕ್‌ ಮಾಡುತ್ತಿದ್ದೆ. ಕೆಲವೊಮ್ಮೆ ಈ ರೀತಿ ಅಸಹ್ಯಕರ ಮೆಸೇಜ್‌ಗಳು ಬಂದಾಗ ಸ್ಕ್ರೀನ್‌ ಶಾಟ್‌ ತೆಗೆದು ದರ್ಶನ್‌ ಅವರಿಗೂ ತೋರಿಸುತ್ತಿದ್ದೆ.

ದರ್ಶನ್‌ ಅವರು 2024ರ ಮೇ 19ರಂದು ವಿಜಯಲಕ್ಷ್ಮಿ ಅವರೊಂದಿಗೆ ನನಗೆ ತಿಳಿಸದೇ ದುಬೈಗೆ ಹೋಗಿ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದರು. ಆವತ್ತಿನಿಂದ ನಾನು ದರ್ಶನ್‌ ಅವರೊಂದಿಗೆ ಜಗಳ ಮಾಡಿಕೊಂಡು ಮಾತನಾಡುವುದನ್ನು ನಿಲ್ಲಿಸಿದ್ದೆ. ಹೀಗಿರುವಾಗ 2024ರ ಫೆಬ್ರವರಿಯಿಂದ ಕೆ.ಎಸ್‌ ಗೌತಮ್‌ 1990 ಎನ್ನುವ ಇನ್‌ಸ್ಟಾಗ್ರಾಮ್‌ ಖಾತೆಯಿಂದ ಒಬ್ಬ ವ್ಯಕ್ತಿಯು ಬಹಳ ಕೆಟ್ಟದ್ದಾಗಿ ಹಲವು ಅಶ್ಲೀಲ ಸಂದೇಶ, ಫೋಟೋ ಹಾಗೂ ವೀಡಿಯೋಗಳನ್ನು ನಿರಂತರವಾಗಿ ನನ್ನ ಖಾತೆಗೆ ಕಳಿಸುತ್ತಿದ್ದ. ನಾನು ಈ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ.

ನಂತರ ಮೆಸೇಜ್‌ ಕಳಿಸುತ್ತಿದ್ದ ವ್ಯಕ್ತಿಯ ಹುಟುಕಾಟದ ಬಗ್ಗೆ ಪವನ್‌ ಜೊತೆಗೆ ವಿಚಾರ ಮಾಡುತ್ತಿದ್ದೆ. ಅದಕ್ಕೆ ಪವನ್‌ ಚಿತ್ರದುರ್ಗದಲ್ಲಿ ಆತನನ್ನು ಹುಡುಕಲು ದರ್ಶನ್‌ ಅಭಿಮಾನಿಗಳಿಗೆ ಒಪ್ಪಿಸಿದ್ದ. ನಂತರ ರೇಣುಕಾಸ್ವಾಮಿ ಪತ್ತೆಹಚ್ಚಿ ಹಲ್ಲೆ ನಡೆಸಿದ ಬಗ್ಗೆ ಪವಿತ್ರಾಗೌಡ ಹೇಳಿಕೊಂಡಿರುವುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

ಪವಿತ್ರ ಗೌಡ ಕೋಪ ಶಮನಕ್ಕೆ ಕೊಲೆ?
ಪವಿತ್ರ ಗೌಡಳಿಗೆ ಅಶ್ಲೀಲ ಮೆಸೇಜ್ ಕಳುಹಿದ್ದಕ್ಕೆ ರೇಣುಕಾ ಸ್ವಾಮಿ ಕೊಲೆಯಾಗಿದ್ದು ಒಂದೆಡೆ ಸತ್ಯ. ಆದರೆ ಇದು ಕೊಲೆ ಹಂತಕ್ಕೆ ಹೋಗುತ್ತಿರಲಿಲ್ಲ. ದರ್ಶನ್ ಬೈದು, ವಾರ್ನಿಂಗ್ ಕೊಟ್ಟು ಬುದ್ಧಿಹೇಳುತ್ತಿದ್ದರು. ಆದರೆ ಇಷ್ಟು ಮಾಡಿದ್ದರೆ ಪವಿತ್ರಗೌಡಳ ಕೋಪ ಶಮನವಾಗಬೇಕಲ್ಲಾ?… ಏನಪ್ಪಾ ಇದು ಹೊಸ ಕಥೆ ಹೇಳ್ತಿದ್ದಾರೆ ಅನ್ಕೊಳ್ತಿದ್ದೀರಾ.. ಹೌದು, ನಿಜಾಂಶ ಬೇರೆಯೇ ಇದೆ. ಅದೇನೆಂದರೆ ರೇಣುಕಾಸ್ವಾಮಿ ಕೊಲೆಗೂ ಮುನ್ನ ಪವಿತ್ರಾ ಗೌಡಗೆ(Pavitra Gowda) ದರ್ಶನ್ ಮೇಲೆ ಮುನಿಸಿತ್ತು. ದರ್ಶನ್-ಪವಿತ್ರಾ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತಂತೆ. ಇದೆಲ್ಲದರ ಪರಿಹಾರಕ್ಕೆ ಕೊಲೆಯೇ ನಡೆದಿದೆ.

ಮೇ 19ರಂದು ದರ್ಶನ್ (Darshan) ವಿಜಯಲಕ್ಷ್ಮಿ ವೆಡ್ಡಿಂಗ್ ಆ್ಯನಿವರ್ಸರಿ ಇದ್ದು, ದುಬೈನಲ್ಲಿ ದರ್ಶನ್-ವಿಜಯಲಕ್ಷ್ಮಿ ಮದುವೆ ವಾರ್ಷಿಕೋತ್ಸವ (wedding anniversary) ಆಚರಿಸಿಕೊಂಡಿದ್ದರು. ಇದರ ಫೋಟೋ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ವಿಜಯಲಕ್ಷ್ಮೀ ಪೋಸ್ಟ್ ನೋಡಿ ಪವಿತ್ರಾ ಗೌಡ ಸಿಟ್ಟಾಗಿದ್ದರು. ಒಂದು ದಿನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಟ್ವೀಟ್ ಮಾಡಿ, ದರ್ಶನ್ ಹೇಳಿದ್ದ ಕರ್ಮ ರಿಟರ್ನ್ಸ್ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು. ಅಲ್ಲದೆ ದರ್ಶನ್ ಜೊತೆ ಒಂದು ವಾರ ಮಾತು ಬಿಟ್ಟಿದ್ರಂತೆ ಪವಿತ್ರಾ ಗೌಡ. ಈ ಒಂದು ವಾರದ ಮಧ್ಯದಲ್ಲೇ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದಾನೆ. ಮಾತು ಬಿಟ್ಟಿದ್ದರಿಂದ ಈ ಪವಿತ್ರ ಮೇಡಂ ದರ್ಶನ್ಗೆ ರೇಣುಕಾಸ್ವಾಮಿ ವಿಚಾರ ತಿಳಿಸಿರಲಿಲ್ಲ. ತನ್ನ ಮನೆಯ ಕೆಲಸದ ಪವನ್‌ಗೆ ವಿಚಾರವನ್ನು ಪವಿತ್ರಾ ಗೌಡ ತಿಳಿಸಿದ್ದರು. ಪವನ್ ಮೂಲಕ ರೇಣುಕಾಸ್ವಾಮಿ ವಿಚಾರ ದರ್ಶನ್ ಗಮನಕ್ಕೆ ಬಂದಿದೆ.

ಇತ್ತ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಎಂದು ಯೋಚಿಸಿದ ದರ್ಶನ್ ಪವಿತ್ರಳ ಮುನಿಸು ಶಮನ ಮಾಡಿ, ಅವಳ ಜೊತೆ ರಾಜಿ ಆಗಲು ಈ ಎಲ್ಲಾ ಪ್ಲಾನ್ ಮಾಡಿದ್ದಾರೆ. ಬಳಿಕ ಪವಿತ್ರಾಗೌಡಗೆ ಕರೆ ಮಾಡಿ ನಿನಗೊಂದು ಸರ್ಪ್ರೈಸ್ ಇದೆ ಬಾ ಎಂದಿದ್ದ ದರ್ಶನ್, ಪವಿತ್ರಾ ಬಂದ ಬಳಿಕ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಸಿದ್ದಾರೆ. ಬಳಿಕ ಗೆಳತಿಯ ಕೋಪ ಶಮನಕ್ಕೆ, ಮತ್ತೆ ಪ್ರೀತಿ ಗಿಟ್ಟಿಸಲು ಕೊಲೆಯನ್ನೇ ಮಾಡಿದ್ದಾನೆ ಎನ್ನಲಾಗಿತ್ತು. ಒಟ್ಟಿನಲ್ಲಿ ಈಗ ಪವಿತ್ರ ಗೌಡ ಹೇಳಿಕೆಯಿಂದ ಇದು ಸತ್ಯ ಎಂಬುದು ಗೊತ್ತಾಗಿದೆ.

Leave A Reply

Your email address will not be published.