spider: ಮಹಿಳೆಯ ಕಿವಿಯಿಂದ ಹೊರಬಂದ ಜೇಡ! ವೈರಲ್ ವಿಡಿಯೋ ಇಲ್ಲಿದೆ

Share the Article

Spider: ಕಿವಿಯ ಪಕ್ಕ ಸೊಳ್ಳೆ ಬಂದು ಶಬ್ಧ ಮಾಡಿದರೆ ಒಂದು ಕ್ಷಣವೂ ಸಹಿಸಿಕೊಳ್ಳಲು ಆಗಲ್ಲ. ಭಯದಲ್ಲಿ ಕಿವಿಯಲ್ಲಿ ಪರದಾಡುತ್ತೇವೆ. ಹಾಗಿರುವಾಗ ಈ ಮಹಿಳೆಯೊಬ್ಬರ ಕಿವಿಯಿಂದ ಜೇಡವೊಂದು (spider) ಹೊರಬಂದಿದೆ. ಹೌದು, ಮಹಿಳೆಯೊಬ್ಬರ ಕಿವಿಯಿಂದ ಜೇಡವೊಂದು ಹೊರಬಂದ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಡಿಯೋವನ್ನು @homienewsinc ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮಹಿಳೆಗೆ ಕಿವಿಗೆ ಎಣ್ಣೆ ಮಾದರಿಯ ಔಷಧ ಹಾಕುತ್ತಿರೋದನ್ನು ನೋಡಬಹುದು. ಔ‍ಷದ ಕಿವಿಯೊಳಗೆ ಎಣ್ಣೆ ಹೋಗುತ್ತಿದ್ದಂತೆ ಮಹಿಳೆಗೆ ನೋವು ಆಗುತ್ತದೆ. ಆಕೆ ಜೋರಾಗಿ ಕಿರುಚಿಕೊಳ್ಳುತ್ತಾ ಏನಾದ್ರೂ ಹೊರಗೆ ಬರುತ್ತಿದೆಯಾ ಎಂದು ಕೇಳುತ್ತಾಳೆ. ಆಗ ಎಣ್ಣೆ ಹಾಕುತ್ತಿದ್ದ ವ್ಯಕ್ತಿ, ಓ ಶಿಟ್ ಜೇಡ ಅಂತ ಹೇಳುತ್ತಾರೆ. ನಂತರ ಕಿವಿಯಿಂದ ಹೊರ ಬಂದ ಜೇಡ, ಮಹಿಳೆ ತಲೆಯ ಮೇಲೆ ಹಾದು ಹೋಗುತ್ತದೆ.

ಇದೀಗ ಈ ವಿಡಿಯೋ 5 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಓರ್ವ ಮಹಿಳೆ, ನಾನಾಗಿದ್ದಾರೆ ಇದಕ್ಕಿಂತ ಜೋರಾಗಿ ಕಿರುಚಿಕೊಳ್ಳುತ್ತಿದ್ದೆ ಎಂದು ಕಮೆಂಟ್ ಮಾಡಿದ್ದಾರೆ.

ವಿಡಿಯೋ ಇಲ್ಲಿದೆ

 

View this post on Instagram

 

A post shared by HomieNewsInc (@homienewsinc)

Leave A Reply