Smallest Airport: ವಿಶ್ವದಲ್ಲೇ ಅತೀ ಚಿಕ್ಕ ಏರ್ಪೋರ್ಟ್- ಇಲ್ಲಿ ವಿಮಾನ ಹತ್ತಲು ಮರದ ಕೆಳಗೆ ಕೂತು ಕಾಯಬೇಕು !!

Share the Article

Smallest Airport: ವಿಮಾನ ನಿಲ್ದಾಣ ಅಥವಾ ಏರ್ಪೋರ್ಟ್ ಅಂದ ತಕ್ಷಣ ನಮಗೆ ನೆನಪಾಗುವುದೇ ನೂರಾರು ಎಕರೆ ವಿಶಾಲ ಜಾಗ, ದೊಡ್ಡ ದೊಡ್ಡ ಟರ್ಮಿನಲ್ ಗಳು, ಐಷಾರಾಮಿ ಎನಿಸುವ ವೇಟಿಂಗ್ ಪ್ರದೇಶ, ಊಹೆಗೂ ನಿಲುಕದ ಸೌಕರ್ಯಗಳು ಕಣ್ಣಮುಂದೆ ಬರುತ್ತವೆ. ಏನೋ ಹೊರಲೋಕದಲ್ಲಿ ಇರುವಂತೆ ಭಾಸವಾಗುತ್ತದೆ. ಆದರೆ ಮರದ ಕೆಳಗೆ ಕೂತು ವಿಮಾನಕ್ಕಾಗಿ ಕಾಯೋದು ನಿಮಗೆ ಗೊತ್ತಾ? ಇನ್ನೂ ಆಶ್ಚರ್ಯವೆಂದರೆ ಅದು ಕೂಡ ಒಂದು ಏರ್ಪೋರ್ಟ್ ಅನ್ನೋದು !!

ಹೌದು, ನಾವು ಹೇಳ ಹೊರಟಿರುವುದು ಪ್ರಪಂಚದಲ್ಲೇ ಅತೀ ಚಿಕ್ಕ ವಿಮಾನ ನಿಲ್ದಾಣದ(Smallest Airport) ಬಗ್ಗೆ. ಇಲ್ಲಿ ಜನ ಮರದ ಕೆಳಗೆ ಕೂತು ವಿಮಾನಕ್ಕಾಗಿ ಕಾಯುತ್ತಾರೆ. ಯಸ್, ಕೊಲಂಬಿಯಾದ(Columbia) ಅಗುವಾಚಿಕಾ ಎಂಬ ಸ್ಥಳದಲ್ಲಿ ಹಕಾರಿಟಮಾ ವಿಮಾನ ನಿಲ್ದಾಣವಿದೆ. ವಿಮಾನ ನಿಲ್ದಾಣದ ಗಾತ್ರದಿಂದಾಗಿ ಅದು ಪ್ರಸಿದ್ಧವಾಗಿದೆ.

ಅಂದಹಾಗೆ ಇಲ್ಲಿ ವಿಮಾನ ಹೊರಡಲು 20 ನಿಮಿಷಗಳು ಬಾಕಿ ಇರುವಾಗ ಬೋರ್ಡಿಂಗ್ ಪ್ರಕ್ರಿಯೆಗಳು ಶುರುವಾಗುತ್ತವೆ.ಅಲ್ಲಿ ಲಗೇಶ್​ ಪರಿಶೀಲಿಸಲು ಸ್ಕ್ಯಾನ್​ ಕೂಡ ಇಲ್ಲ, ಕೈಯಲ್ಲಿ ಪರಿಶೀಲಿಸಲಾಗುತ್ತದೆ. ಇಲ್ಲಿ ಸ್ಕ್ಯಾನರ್ ಯಂತ್ರ ಇರಿಸಲೂ ಕೂಡ ಸ್ಥಳವಿಲ್ಲ. ಜನರು ವಿಮಾನ ನಿಲ್ದಾಣಕ್ಕೆ ಬಂದರೆ ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕು.

ಈ ವಿಮಾನ ನಿಲ್ದಾಣದಲ್ಲಿ ಐಷಾರಾಮಿ ಕಾಯುವ ಕೊಠಡಿ ಇಲ್ಲ, ಬದಲಿಗೆ ಮಾವಿನ ಮರದ ಕೆಳಗೆ ನಿರ್ಮಿಸಲಾದ ಬೆಂಚುಗಳ ಮೇಲೆ ಜನರು ಕಾಯುತ್ತಾರೆ. ಪುರುಷರು ಮತ್ತು ಮಹಿಳೆಯರಿಗೆ ತಲಾ ಒಂದು ಕಾಯುವ ಕೊಠಡಿ ಇದೆ. ಇಲ್ಲಿ ವಿಮಾನವು ಚಿಕ್ಕದಾಗಿದ್ದರೂ, ಆಸನಗಳು ಸಾಕಷ್ಟು ಆರಾಮದಾಯಕವಾಗಿವೆ.

Leave A Reply