Home Crime Dakshina Kannada: ಸುಳ್ಯದಲ್ಲಿ ಹಿಂದೂ ಯುವತಿ ನಾಪತ್ತೆ- ವಿದೇಶಕ್ಕೆ ಓದಲು ಹೋಗುವೆ ಎಂದು ಪೋಷಕರ ನಂಬಿಸಿ...

Dakshina Kannada: ಸುಳ್ಯದಲ್ಲಿ ಹಿಂದೂ ಯುವತಿ ನಾಪತ್ತೆ- ವಿದೇಶಕ್ಕೆ ಓದಲು ಹೋಗುವೆ ಎಂದು ಪೋಷಕರ ನಂಬಿಸಿ ಮುಸ್ಲಿಂ ಯುವಕನೊಂದಿಗೆ ಪರಾರಿ !!

Hindu neighbor gifts plot of land

Hindu neighbour gifts land to Muslim journalist

Dakshina Kannada: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಹೋಗುತ್ತೇನೆಂದು ಹೇಳಿ ಮನೆಯಿಂದ ತೆರಳಿದ್ದ ಹಿಂದೂ ಹುಡುಗಿಯೊಬ್ಬಳು ನಾಪತ್ತೆಯಾದ ಪ್ರಕರಣ ದ.ಕ ಜಿಲ್ಲೆಯ(Dakshina Kannada) ಸುಳ್ಯ ತಾಲೂಕು ಕೊಲ್ಲಮೊಗ್ರು ಗ್ರಾಮದಲ್ಲಿ ನಡೆದಿತ್ತು. ಆದರೀಗ ಈ ಪ್ರಕರಣಕ್ಕೆ ಸಿನಿಮೀಯ ರೀತಿಯಲ್ಲಿ ಟ್ವಿಸ್ಟ್ ಸಿಕ್ಕಿದೆ.

ಹೌದು, ಈ ಹಿಂದೂ ಯುವತಿಯ ‘ವಿದೇಶಕ್ಕೆ ಓದಲು ಹೋಗುವೆ’ ಎಂಬ ನೆಪದ ಲೆಕ್ಕಾಚಾರ ಬಯಲಾಗಿದ್ದು, ಆಕೆ ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಲು‌ ಯತ್ನಿಸಿದ್ದಾಳೆಂಬ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ ಇದಕ್ಕಾಗಿ ಆಕೆ ಮಾಡಿದ ಪ್ಲ್ಯಾನ್ ಕಂಡು ಪೋಷಕರೇ ಬೆಚ್ಚಿಬಿದ್ದಿದ್ದಾರೆ.

ಏನಿದು ಪ್ರಕರಣ?
ಸವಣೂರಿನ ಕಾಲೇಜೊಂದರಲ್ಲಿ ಪಿಯುಸಿ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳುವ ನೆಪವೊಡ್ಡಿದ 18ರ ಯುವತಿ ದೀಕ್ಷಾ(Deeksha) ಮನೆಯಲ್ಲಿ ಪೋಷಕರನ್ನು ಕಥೆ ಕಟ್ಟಿ ನಂಬಿಸಿ ಕಳೆದ ಆಗಸ್ಟ್ 25 ರಂದು ಮನೆ ಬಿಟ್ಟಿದ್ದಳು.ತನ್ನ ಜೊತೆ ಕಲಿತ ಇಬ್ಬರು ಸ್ನೇಹಿತೆಯರು ಬೆಂಗಳೂರಿನಲ್ಲಿದ್ದು, ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ತನ್ನನ್ನು ಕಳಿಸಿಕೊಡುವುದಾಗಿ ಬಂದಿರುವುದಾಗಿಯೂ ಪೋಷಕರಿಗೆ ನಂಬಿಸಿದ್ದಳು. ಅವಿದ್ಯಾವಂತರಾದ ದೀಕ್ಷಾ ತಂದೆ ತಾಯಿ ಮಗಳು ಹೇಳುವ ಕತೆಯನ್ನು ನಿಜವೆಂದೇ ನಂಬಿದ್ದರು.

ಅದರಂತೆ ವಿಮಾನ ನಿಲ್ದಾಣದವರೆಗೂ ಗೆಳತಿಯರ ಜೊತೆ ಹೋದ ದೀಕ್ಷಾ ಏರ್ಪೋರ್ಟ್ ಒಳಗೆ ಹೋಗುತ್ತಿದ್ದಂತೆ ಗೆಳತಿಯರು ವಾಪಾಸ್ ಬಂದಿದ್ದರು. ವಿಚಿತ್ರ ಏನೆಂದರೆ ದೀಕ್ಷಾ ತನ್ನ ಗೆಳತಿಯರಿಗೆ ತನಗೆ ಅಪ್ಪ ಅಮ್ಮ ಇಲ್ಲವೆಂದೇ ಕಥೆ ಕಟ್ಟಿ ಅವರಿಂದ ಹಣದ ಸಹಾಯ ಪಡೆದಿದ್ದಳು ಎಂಬ ಮಾಹಿತಿಯೂ ಲಭಿಸಿದೆ.

ಗೆಳತಿಯರು ವಾಪಸ್ ಹೋಗುತ್ತಿದ್ದಂತೆ ದೀಕ್ಷಾಳು ಸವಣೂರು ಮೂಲದ ಮುಸ್ಲಿಂ ಯುವಕ‌ನ ಜೊತೆಗೆ ವಿಮಾನ ನಿಲ್ದಾಣದಿಂದ ಹೊರಬಂದು ವಾಪಾಸ್ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದಳು‌. ಆದರೆ ಆ ಬಸ್ ನ ನಿರ್ವಾಹಕ ಅನುಮಾನಗೊಂಡು ಆತ ಯುವತಿಯ ಫೋಟೋ ತೆಗೆದು ಹಿಂದೂ ಸಂಘಟನೆಯ ಯುವಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅದು ಪುತ್ತೂರಿನ ಹಿಂದೂ ಸಂಘಟನೆಗಳಿಗೂ ತಲುಪಿತು. ಬಳಿಕ ಯುವತಿಯ ಫೋಟೋ ಹಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಲಾಗಿದ್ದು, ಫೋಟೋದಲ್ಲಿರುವ ಯುವತಿ ಕೊಲ್ಲಮೊಗ್ರಿನ ದೀಕ್ಷಾ ಎಂಬುದು ಗೊತ್ತಾಗುತ್ತಿದ್ದಂತೆ ಆಕೆಯ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು.

ಜಾಣ್ಮೆ ಮೆರೆದ ಸುಬ್ರಹ್ಮಣ್ಯ ಪೋಲೀಸ್:
ತಮ್ಮ ಮಗಳು ವಿದೇಶಕ್ಕೆ ಹೋಗಿಲ್ಲ ಎಂದು ಖಚಿತವಾಗುತ್ತಿದ್ದಂತೆ ದೀಕ್ಷಾ ಪೋಷಕರು ಸುಬ್ರಹ್ಮಣ್ಯ ಪೋಲಿಸ್ ಠಾಣಾಧಿಕಾರಿ ಕಾರ್ತಿಕ್ ಅವರನ್ನು ಸಂಪರ್ಕಿಸಿದ್ದು, ದೀಕ್ಷಾಳ ಮೊಬೈಲ್ ಲೊಕೇಷನ್ ಆಧಾರದಲ್ಲಿ ಆಕೆ ಬೆಂಗಳೂರಿನ ಹೊರವಲಯದಲ್ಲಿ ಇರುವ ಬಗ್ಗೆ ತಿಳಿದುಬಂದಿತ್ತು. ಈ ಸಮಯದಲ್ಲಿ ಜಾಣ್ಮೆ ಮೆರೆದ ಸಬ್ ಇನ್ಸ್‌ಪೆಕ್ಟರ್ ಕಾರ್ತಿಕ್ ಅವರು ಇಲ್ಲಿಂದ ಬೆಂಗಳೂರಿಗೆ 550km ದೂರವಿರುವ ಕಾರಣ ಕೂಡಲೇ ಬೆಂಗಳೂರಿನ ಪೋಲಿಸ್ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದು, ಅಲ್ಲಿ ದೂರು ದಾಖಲಿಸಿಕೊಳ್ಳದೇ ಇದ್ದರೆ ತಾನೇ ಖುದ್ದಾಗಿ ಪ್ರಕರಣ ದಾಖಲಿಸಿಕೊಳ್ಳುವ ಭರವಸೆ ನೀಡಿದ್ದರು. ಆದರೆ ಬಳಿಕ ದೀಕ್ಷಾ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಳು.

ಇನ್ನು ಈ ಬೆಳವಣಿಗೆಗಳ ನಡುವೆ ಬೆಂಗಳೂರಿಗೆ ತೆರಳಿದ ದೀಕ್ಷಾ ಪೋಷಕರು ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ ಕಳೆದ 28ರಂದು ದೂರು ನೀಡಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೋಲಿಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಉಪ್ಪಾರಪೇಟೆ ಪೋಲಿಸ್ ಠಾಣೆಗೆ ಕರೆತಂದಿದ್ದು, ಬಳಿಕ ದೀಕ್ಷಾಳನ್ನು ಸುಬ್ರಹ್ಮಣ್ಯಕ್ಕೆ ಕರೆತರುವ ಮಾಹಿತಿ ಲಭಿಸಿದೆ.