Home News CM Siddaramaiah: ದರ್ಶನ್ ರಾಜಾತಿಥ್ಯದ ಹಿಂದೆ ಈ ಸಚಿವರ ಕೈವಾಡ ? ಮಂತ್ರಿಗೆ ಫೋನ್ ಮಾಡಿ...

CM Siddaramaiah: ದರ್ಶನ್ ರಾಜಾತಿಥ್ಯದ ಹಿಂದೆ ಈ ಸಚಿವರ ಕೈವಾಡ ? ಮಂತ್ರಿಗೆ ಫೋನ್ ಮಾಡಿ ಸಿದ್ದರಾಮಯ್ಯ ಕ್ಲಾಸ್

CM Siddaramaiah

Hindu neighbor gifts plot of land

Hindu neighbour gifts land to Muslim journalist

CM Siddaramaiah : ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಇದೀಗ ಬಳ್ಳಾರಿ ಜೈಲಿಗೆ(Ballary Jail) ಶಿಫ್ಟ್ ಮಾಡಲಾಗಿದೆ. ಈ ಬೆನ್ನಲ್ಲೇ ದರ್ಶನ್ ಗೆ ರಾಜಾತಿಥ್ಯ ನೀಡಿರುವ ಹಿಂದೆ ಮಂತ್ರಿಗಳೊಬ್ಬರ ಕೈವಾಡ ಇದೆ ಎನ್ನಲಾಗಿದೆ. ಇದಕ್ಕೆ ಸಿದ್ದರಾಮಯ್ಯ(CM Siddaramaiah) ಮಾಡಿರೋ ಫೋನ್ ಕಾಲ್ ಕೂಡ ಸಾಕ್ಷಿಯಾಗಿದೆ.

ಹೌದು, ನಟ, ಸದ್ಯ ಆರೋಪಿ ದರ್ಶನ್‌ಗೆ(Darshan) ವಿಶೇಷ ಅತಿಥ್ಯ ಸಿಗಲು ಪ್ರಭಾವಿ ಸಚಿವರ‌ ಮೌಖಿಕ ಆದೇಶ ಕಾರಣ ಮೂಲಗಳಿಂದ ತಿಳಿದು ಬಂದಿತ್ತು. ಸಚಿವರು ದರ್ಶನ್‌ಗೆ ವಿಶೇಷ ಸೌಲಭ್ಯ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಜೈಲು ಸಿಬ್ಬಂದಿ ಸಹ ದರ್ಶನ್‌ ಖ್ಯಾತ ನಟನಾಗಿರುವ ಕಾರಣ ಜೈಲಿನ ನಿಯಮಗಳನ್ನು ಪಾಲಿಸಿರಲಿಲ್ಲ ಎನ್ನಲಾಗಿತ್ತು. ಈ ಬೆನ್ನಲ್ಲೇ ಈ ಪ್ರಕರಣ ಸಂಬಂಧ ಸಿದ್ದರಾಮಯ್ಯ ಫೋನ್ ಮಾಡಿ ಸಚಿವರೊಬ್ಬರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಯಸ್, ದರ್ಶನ್ (Darshan) ಐಶಾರಾಮಿ ಜೈಲುವಾಸದ ಹಿಂದೆ ಸಚಿವರೊಬ್ಬರ ಹೆಸರು ಕೇಳಿ ಬಂದಿದ್ದಕ್ಕೆ ಗರಂ ಆಗಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಸಚಿವರೊಬ್ಬರಿಗೆ ಫೋನ್ ಮಾಡಿ ‘ನೋಡಪ್ಪ ಇಂತಹ ವಿಚಾರಕ್ಕೆ ಹೋಗಬೇಡ. ಸಚಿವ ನಾಗೇಂದ್ರನಿಗೆ ಏನಾಯ್ತು, ನಿನಗೂ ಅದೇ ರೀತಿ ಆದ್ರೆ ಏನ್ಮಾಡ್ತೀಯಾ? ಇದರ ಹಿಂದೆ ನಿನ್ನ ಪಾತ್ರ ಇದ್ದರೆ ನಾಗೇಂದ್ರ ಹೋದಂತೆ ನೀನು ಹೋಗಬಹುದು ಹುಷಾರ್’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಎಂ ಪ್ರಶ್ನೆಗೆ, ಇಲ್ಲ ಸರ್, ಖಂಡಿತ ನನ್ನದೇನು ಇಲ್ಲ. ಅದಕ್ಕೂ ಯಾವುದೇ ಸಂಬಂಧ ಇಲ್ಲ. ಸುಮ್ಮನೇ ಯಾರೋ ಏನು ಮಾತನಾಡುತ್ತಾರೆ ಎಂದು ಉತ್ತರಿಸಿದ್ದಾರೆ. ಈ ಉತ್ತರಕ್ಕೆ ಮತ್ತೆ ಸಿಟ್ಟಾದ ಸಿಎಂ, ನಿನ್ನ ಪಾತ್ರ ಇದ್ಯೋ ಇಲ್ವೋ ಗೊತ್ತಿಲ್ಲ. ಆದರೆ ಒಂದ್ ಹೇಳ್ತೀನಿ. ಇಂತಹವರ ಸಹವಾಸ ಮಾಡಿದ್ರೆ, ನಾಗೇಂದ್ರನಿಗೆ ಆದಂತೆ ಆಗಬಹುದು, ಹುಷಾರಾಗಿರು ಎಂದು ಎಚ್ಚರಿಸಿದ್ದಾರೆ.

ಎಂತಹ ದುರ್ವಿದಿ, ದುರಂತ ಇದು. ರಾಜ್ಯದ ಜನರ ಪ್ರತಿನಿಧಿ, ರಾಜ್ಯದ ಮಂತ್ರಿ ಜನರ ಹಿತವನ್ನು ಕಾಪಾಡಬೇಕಾದ ಸಚಿವ ಜೈಲಲ್ಲಿರೋ ಒಬ್ಬ ಕೈದಿಗೆ ರಾಜಾತಿಥ್ಯ ನೀಡಲು ಸೂಚಿಸುತ್ತಾರೆ ಎಂದರೆ ಇದು ನಾಚಿಕೆಗೇಡಿನ ಸಂಗತಿ ಅಲ್ವೇ? ಸಿದ್ದರಾಮಯ್ಯನವರೇ ನೀವು ಕ್ಲಾಸ್ ತೆಗೆದುಕೊಳ್ಳುವುದು ಅಲ್ಲ, ಆ ನಾಲಾಯಕ್ಕು ಮಂತ್ರಿ ಯಾರೆಂದು ಬಹಿರಂಗಪಡಿಸಿ. ಮಾಧ್ಯಮಗಳಿಗೆ ತಿಳಿಸಿ. ಜೀವನದಲ್ಲಿ ಮಂತ್ರಿಪದವಿಗೆ ಏರಬಾರದು ಆ ಮನುಷ್ಯ. ಎಲ್ಲರೂ ಹಾಗೆ ಗ್ರಹಚಾರ ಬಿಡಿಸುತ್ತಾರೆ. ಫೋನು ಮಾಡಿ ಒಳಒಳಗೇ ಎಲ್ಲಾ ಮುಖಿಸಿದರೆ ಸಾಲದು.