Whales on sea shore: ಸಮುದ್ರದಾಳದ ತಿಮಿಂಗಿಲ ದಡಕ್ಕೆ ಬರಲು ಕಾರಣ ಏನು?

Share the Article

Whales on sea shore: ತಿಮಿಂಗಿಲಗಳು ಆಳ ಸಮುದ್ರದಲ್ಲಿ ಜೀವಿಸುವ ಜಲಚರಗಳು. ಆದರೆ ಆ ದೈತ್ಯ ದೇಹ ಹೊಂದಿರುವ ತಿಮಿಂಗಿಲಗಳು ಇದ್ದಕ್ಕಿದ್ದ ಹಾಗೆ ಸಮುದ್ರ(Sea) ತೀರದಲ್ಲಿ ಕಾಣಿಸಿಕೊಳ್ಳುತ್ತವೆ. ಇವು ಬಂದು ದಡಕ್ಕೆ ಅಪ್ಪಳಿಸುವುದನ್ನು ನೀವು ಮೊಬೈಲ್(Mobile) ಅಥವಾ ಟಿವಿಯಲ್ಲಿ(TV) ನೋಡಿರಬಹುದು. ಜೀವವಿದ್ದರೂ ತಿಮಿಂಗಿಲಗಳು ಏತಕ್ಕಾಗಿ ದಡಕ್ಕೆ ಬರುತ್ತವೆ ಎಂದು ನಿಮಗೆ ತಿಳಿದಿದೆಯಾ? ಇಲ್ಲವಾದರೆ ಇಲ್ಲಿ ಕೇಳಿ. ತಿಮಿಂಗಿಲಗಳು (Whale) ದಡಕ್ಕೆ ಬರುವ ಅಥವಾ ದಡದತ್ತ ಆಕರ್ಷಿತವಾಗಲು ಹಲವು ಕಾರಣಗಳು ಇವೆ.

ಸಮುದ್ರದಲ್ಲಿ ತಿಮಿಂಗಿಲಗಳು ದಾರಿ ತಪ್ಪಿ ದಡದತ್ತ ಬರುತ್ತವೆ. ಇದು ಮುಖ್ಯವಾಗಿ ಅವುಗಳು ಒಂದು ರೀತಿಯ “ಶಬ್ದ ಮಾಲಿನ್ಯ” ಅಥವಾ “ಸೋನಾರ್” ಮಾಲಿನ್ಯದಿಂದ ತೊಂದರೆ ಪಡುತ್ತಿದ್ದರೆ ಸಂಭವಿಸುತ್ತದೆ. ಮೀನುಗಾರಿಕೆ, ಸಮುದ್ರ ಮಾರ್ಗಗಳಲ್ಲಿ ನಡೆಯುವ ಹಡಗುಗಳ ಚಲನೆಯಿಂದ ಅಥವಾ ಅನ್ಯ ಮಾನವ ಸೃಷ್ಟಿಸಿದ ಶಬ್ದಗಳಿಂದ ದಾರಿ ತಪ್ಪಬಹುದು.

ಕೆಲವು ವೇಳೆ ತಿಮಿಂಗಿಲಗಳು ತನ್ನ ಗುಂಪಿನ ಸದಸ್ಯನನ್ನು ಪಾಲಿಸಿ ದಡಕ್ಕೆ ಬರುತ್ತವೆ. ಗುಂಪಿನ ಒಂದು ತಿಮಿಂಗಿಲ ದಾರಿ ತಪ್ಪಿದ್ದರೆ, ಇತರೆ ತಿಮಿಂಗಿಲಗಳು ಅದನ್ನು ಅನುಸರಿಸಿ ದಾರಿ ತಪ್ಪುವ ಸಾಧ್ಯತೆ ಇದೆ. ದೌರ್ಬಲ್ಯ ಅಥವಾ ಅನಾರೋಗ್ಯ ಇರುವ ತಿಮಿಂಗಿಲಗಳು ದಡದತ್ತ ಬರುತ್ತವೆ. ಇವುಗಳು ದೇಹದಲ್ಲಿ ರೋಗ ಅಥವಾ ಗಾಯ ಹೊಂದಿದಾಗ ಸಮುದ್ರದಲ್ಲಿ ಸರಿಯಾಗಿ ಈಜಲು ಕಷ್ಟಪಟ್ಟು ಅಲೆಯೆ ಹೊಡೆತಕ್ಕೆ ದಡಕ್ಕೆ ಅಪ್ಪಳಿಸುತ್ತದೆ.

ಇವು ಹಲವು ಸಾಧ್ಯ ಕಾರಣಗಳಾಗಿದ್ದರೂ, ನಿಖರವಾಗಿ ಏಕೆ ತಿಮಿಂಗಿಲಗಳು ದಡಕ್ಕೆ ಬರುತ್ತವೆ ಎಂಬುದರ ಮೇಲೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ.

Leave A Reply