Wolf attack: ತೋಳಗಳ ಸಂಘಟಿತ ದಾಳಿಗೆ 9 ಜನ ಬಲಿ

Wolf attack: ಹುಲಿ ಚಿರತೆ ಉಂಟಾದ ಪ್ರಾಣಿಗಳು ಊರಿಗೆ ಬಂದು ದಾಳಿ ಇಡುವುದು ಕಂಡಿದ್ದೇವೆ. ಆದರೆ ಇದೀಗ ನಾಯಿ ಜಾತಿಗೆ ಸೇರಿದ ಪ್ರಾಣಿಗಳು ಕಾಡಿನಿಂದ ನಾಡಿಗೆ ದಾಂಗುಡಿ ಇಡುತ್ತಿವೆ. ಉತ್ತರ ಪ್ರದೇಶ ರಾಜ್ಯದ ಬೆಹಾರೈಚ್ ಜಿಲ್ಲೆಯಲ್ಲಿ ತೋಳಗಳ ಅಟ್ಟಹಾಸ ಮಿತಿಮೀರಿದ್ದು ಈವರೆಗೆ 8 ಮಕ್ಕಳು ಹಾಗೂ ಓರ್ವ ಮಹಿಳೆಯನ್ನು ಸೇರಿ ಒಟ್ಟು 9 ಜನರು ತೋಳ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಬೆಹಾರೈಚ್ ಜಿಲ್ಲೆಯ ಗ್ರಾಮ ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿ ದಾಳಿ ನಡೆಸುತ್ತಿರುವ ತೋಳಗಳು ಓರ್ವ ಬಾಲಕನನ್ನು ಎಳೆದೊಯ್ಯುವ ಸಂದರ್ಭದಲ್ಲಿ ಗ್ರಾಮಸ್ಥರು ರಕ್ಷಿಸಿದ್ದಾರೆ. ತೋಳಗಳು ಮುಖ್ಯವಾಗಿ ಮಕ್ಕಳನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿದ್ದು, ಇದು ಆ ಪ್ರದೇಶದಲ್ಲಿ ಮಕ್ಕಳನ್ನು ಹೊರಬಿಡಲು ಪೋಷಕರು ಹಿಂಜರಿಯುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ತೋಳಗಳು ಗುಂಪು ಗುಂಪಾಗಿ ಸಂಚರಿಸಿ ಸಂಘಟಿತವಾಗಿ ದಾಳಿ ಮಾಡುತ್ತವೆ.

ತೋಳ ದಾಳಿ ಬಗ್ಗೆ ಯುಪಿ ಸರ್ಕಾರದ ಗಮನಕ್ಕೆ ಬಂದಿದ್ದು, ನರಭಕ್ಷಕ ತೋಳಗಳನ್ನು ಸೆರೆ ಹಿಡಿಯಲು ಆಪರೇಷನ್ ಭೇಡಿಯಾ ಎಂಬ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಅಂದಹಾಗೆ ಭೇಡಿಯಾ ಅಂದರೆ ಹಿಂದಿಯಲ್ಲಿ ತೋಳ.

Leave A Reply

Your email address will not be published.