Home Crime Bike drop to Muslim girl: ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ ಹಿಂದೂ ಯುವಕ, ಪ್ರಕರಣ...

Bike drop to Muslim girl: ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ ಹಿಂದೂ ಯುವಕ, ಪ್ರಕರಣ ದಾಖಲು

Bike drop to Muslim girl

Hindu neighbor gifts plot of land

Hindu neighbour gifts land to Muslim journalist

Bike drop to Muslim girl: ಮುಸ್ಲಿಂ ಮಹಿಳೆಗೆ ಹಿಂದೂ ಯುವಕ ಡ್ರಾಪ್ ಕೊಟ್ಟ ಘಟನೆ ನಡೆದಿದ್ದು, ಈಗ ವಿಷ್ಣು ಎಂಬವರು ಎಂಬುವರು ಮಾಲೂರು ತಾಲ್ಲೂಕಿನ ಕೋಲಾರ ಟೌನ್ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಕೋಲಾರದ ಶಿವರಿಪಟ್ಟಣದ ಅನ್ಯ ಧರ್ಮಕ್ಕೆ ಸೇರಿದ ಮಹಿಳೆಯನ್ನು ಬೈಕ್ ನಲ್ಲಿ ಡ್ರಾಪ್ ಮಾಡಿದ್ದಕ್ಕಾಗಿ ವ್ಯಕ್ತಿಯೋರ್ವನಿಗೆ ಇಬ್ಬರು ಅಪರಿಚಿತರು ಬೆದರಿಕೆ ಹಾಕಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಆಗಸ್ಟ್ 18 ರಂದು ಈ ಘಟನೆ ನಡೆದಿದ್ದು, ಕೋಲಾರದ ಶಿವರಿಪಟ್ಟಣದ ವಿಷ್ಣು ಎಂಬುವರು ಸೋಮವಾರ ಮಾಲೂರು ತಾಲ್ಲೂಕಿನ ಕೋಲಾರ ಟೌನ್ ಪೊಲೀಸರಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ವಿಷ್ಣು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ವಿಷ್ಣುಗೆ ಮಹಿಳೆಯ ಪರಿಚಯವಿದ್ದು, ಆಕೆ ತನ್ನ ಕ್ಲಾಸ್ ಮೇಟ್ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೋಲಾರದಲ್ಲಿ ಆಕೆಯನ್ನು ನೋಡಿದಾಗ ಅಂತರಗಂಗೆಯಲ್ಲಿ ತನ್ನ ಸ್ನೇಹಿತರಿದ್ದು, ಅಲ್ಲಿಗೆ ಡ್ರಾಪ್ ಮಾಡುವಂತೆ ಮಹಿಳೆ ಕೇಳಿಕೊಂಡಿದ್ದಾಳೆ. ನಂತರ ಅಲ್ಲಿಗೆ ತಲುಪಿದಾಗ ಅಲ್ಲಿ ಯಾರು ಇರಲಿಲ್ಲ. ಮತ್ತೆ ಅವರನ್ನು ಡ್ರಾಪ್ ಮಾಡುವಾಗ ಮುಸ್ಲಿಂ ಹುಡುಗರು ಇಬ್ಬರು ಅಪರಿಚಿತರು ಬೆದರಿಕೆ ಹಾಕಿದ್ದಾರೆ. ತದನಂತರ ಬಸ್ ನಿಲ್ದಾಣದಲ್ಲಿ ಆಕೆಯನ್ನು ಬಿಟ್ಟು ಬಂದಿದ್ದಾಗಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.