Kolkata doctor rape-murder case: ನಾನು ಹೋಗುವ ಮುನ್ನವೇ ಆಕೆ ಸತ್ತಿದ್ದಳು! ಆರೋಪ ಒಪ್ಪಿಕೊಂಡ ಸಂಜಯ್ ಯೂಟರ್ನ್ ಹೇಳಿಕೆ

Share the Article

Kolkata doctor rape-murder case: ಕೋಲ್ಕತ್ತಾದ ಆರ್​ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಮಹಿಳಾ ಸ್ನಾತಕೋತ್ತರ ತರಬೇತಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ (Kolkata doctor rape-murder case)  ಪ್ರಮುಖ ಆರೋಪಿ ಸಂಜಯ್ ರಾಯ್‌ ಎಂಬ ಆರೋಪಿ ತನ್ನ ಬ್ಲೂಟೂತ್‌ಅನ್ನು ಕೃತ್ಯ ಎಸಗಿದ ಸ್ಥಳದಲ್ಲೇ ಬಿಟ್ಟು ಹೋಗಿದ್ದರಿಂದ ಆತ ಪೋಲೀಸರ ಬಲೆಗೆ ಸಿಕ್ಕಿಕೊಂಡಿದ್ದನು. ಈ ಅತ್ಯಾಚಾರ, ಕೊಲೆ ಮಾಡಿದ್ದು ನಾನೇ ಎಂದು ಈಗಾಗಲೇ ಒಪ್ಪಿಕೊಂಡಿರುವ ಸಂಜಯ್ ರಾಯ್ ಇದೀಗ ಯೂಟರ್ನ್​ ಹೊಡೆದಿದ್ದು, ಪಾಲಿಗ್ರಾಫ್ ಪರೀಕ್ಷೆ ನಡೆಸಿದಾಗ ತಾನು ಯಾವುದೇ ಕೊಲೆ, ಅತ್ಯಾಚಾರ ಮಾಡಿಲ್ಲ ನಾನು ನಿರಪರಾಧಿ ಎಂದು ಹೇಳಿದ್ದಾನೆ.

ಹೌದು, ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆಗೆ ಸಂಬಂಧಿಸಿದಂತೆ ಆರೋಪಿ ಸಂಜಯ್​ ರಾಯ್​ಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಯಿತು. ಆ ಸಂದರ್ಭದಲ್ಲಿ ತಾನು ಯಾವುದೇ ಕೊಲೆ, ಅತ್ಯಾಚಾರ ಮಾಡಿಲ್ಲ ನಾನು ನಿರಪರಾಧಿ ಎಂದು ಹೇಳಿದ್ದಾನೆ. ನಾನು ಸೆಮಿನಾರ್ ಹಾಲ್​ಗೆ ಹೋಗುವ ಮುನ್ನವೇ ಆಕೆ ಸಾವನ್ನಪ್ಪಿದ್ದಳು ಎಂದು ಹೇಳಿಕೆ ಕೊಟ್ಟಿದ್ದಾನೆ.

ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನಲ್ಲಿ ಸಿಬಿಐ ಅಧಿಕಾರಿಗಳು ಆರೋಪಿ ಸಂಜಯ್ ರಾಯ್ ಅವರ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಈತ ಸುಳ್ಳು ಹಾಗೂ ಅನುಮಾನಾಸ್ಪದ ಉತ್ತರಗಳನ್ನು ಗಮನಿಸಿದೆ. ಅಲ್ಲದೆ ಸಂಜಯ್ ರಾಯ್ ಆ ವೇಳೆ ಆತಂಕಗೊಂಡಿದ್ದ, ಸಿಬಿಐ ಹಲವು ಸಾಕ್ಷ್ಯಗಳನ್ನು ಮುಂದಿಟ್ಟರೂ ಆತ ಸಮರ್ಥನೆ ನೀಡುತ್ತಲೇ ಇದ್ದ ಎಂಬುದು ತಿಳಿದುಬಂದಿದೆ.

ಅದಲ್ಲದೆ ಅತ್ಯಾಚಾರ ಮತ್ತು ಕೊಲೆಯ ಘಟನೆಯ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಸಂಜಯ್ ರಾಯ್ ಜೈಲು ಸಿಬ್ಬಂದಿಗೆ ಹೇಳಿದ್ದ. ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಪಾಲಿಗ್ರಾಫ್ ಪರೀಕ್ಷೆಗೆ ಒಪ್ಪಿಕೊಂಡೆ ಎಂದು ಆರೋಪಿ ಹೇಳಿದ್ದ. ಒಟ್ಟಿನಲ್ಲಿ ಆರೋಪಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದಾನೆ, ಅದಲ್ಲದೆ ಆರೋಪಿಯು ತನ್ನ ಮುಖದ ಮೇಲೆ ಉಂಟಾದ ಗಾಯಗಳು ಮತ್ತು ಅಪರಾಧದ ಸಮಯದಲ್ಲಿ ಕಟ್ಟಡದಲ್ಲಿ ಇದ್ದ ಬಗ್ಗೆ ಯಾವುದೇ ಸಮಂಜಸ ಉತ್ತರವನ್ನು ನೀಡಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply