Sunitha Wiliams : 8 ದಿನಕ್ಕೆಂದು ಬಾಹ್ಯಾಕಾಶಕ್ಕೆ ಹಾರಿದ್ದ ಸುನೀತಾ ವಿಲಿಯಮ್ಸ್‌ ಇನ್ನು ಮರಳೋದು 6 ತಿಂಗಳ ಬಳಿಕ – ಅಲ್ಲಿವರೆಗೂ ಅವರ ಆಹಾರ ವ್ಯವಸ್ಥೆ ಹೇಗೆ?

Sunitha Wiliams : ಕೇವಲ 8 ದಿನಕ್ಕೆಂದು ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದ ನಾಸಾ ಗಗನಯಾತ್ರಿಗಳಾದ ಬ್ಯಾರಿ ವಿಲ್ಮೋರ್‌(Barry Wilmore) ಹಾಗೂ ಸುನೀತಾ ವಿಲಿಯಮ್ಸ್‌(Sunitha Williams) ಇನ್ನು ಮರಳಿ ಭೂಮಿಗೆ ಬರುವುದು 2025ರ ಫೆಬ್ರವರಿಯಲ್ಲಿ ಎಂದು ನಾಸಾ ತಿಳಿಸಿದೆ.

ಹೌದು, ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಸಹೋದ್ಯೋಗಿ ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ನಾಸಾ ಹೇಳುವ ಪ್ರಕಾರ ಅವರಿನ್ನು ಮರಳೋದು ಬರೋಬ್ಬರಿ 6 ತಿಂಗಳ ಬಳಿಕ. ಹಾಗಿದ್ರೆ ಅಲ್ಲಿವರೆಗೂ ಅವರ ಆಹಾರ ಕ್ರಮ ಹೇಗಿರುತ್ತೆ ಗೊತ್ತಾ ?

ಆಹಾರ ವ್ಯವಸ್ಥೆ ಹೇಗೆ?
ಸದ್ಯ ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಉಳಿಯಲಿರುವ ಗಗನ ಯಾನಿಗಳಿಗೆ ಆಹಾರ ಪೂರೈಕೆ ಹೇಗೆ ಸಾಧ್ಯ ಎನ್ನುವುದರ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದೆ. ಇದಕ್ಕೆ ನಾಸಾ ಮಾಸ್ಟರ್‌ ಪ್ಲ್ಯಾನ್‌ ಸಹ ಮಾಡಿಕೊಂಡಿದೆ. ಹೌದು. ಮಾನವ ಸಹಿತ ನೌಕೆಯ ಉಡ್ಡಯನ ಸಾಧ್ಯವಾಗದೇ ಇದ್ದರೂ, ಸರಕು ಸಾಗಾಣೆಗೆ ಇರುವ ನೌಕೆಗಳು ಬಾಹ್ಯಾಕಾಶ ಕೇಂದ್ರಕ್ಕೆ ಆಗಾಗ್ಗೆ ಹೋಗಿಬರುತ್ತವೆ. ಅದರ ಮೂಲಕವೇ ಸುನೀತಾ ಹಾಗೂ ವಿಲ್ಮೋರ್‌ ಅವರಿಗೆ ಆಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲು ನಾಸಾ ನಿರ್ಧರಿಸಿದೆ.

ಏನಿದು ಎದುರಾದ ಸಮಸ್ಯೆ?
ಬೋಯಿಂಗ್‌ ಸ್ಟಾರ್‌ಲೈನರ್‌ನ ಗಗನಯಾತ್ರಿಗಳ ಪರೀಕ್ಷಾ ಮಿಷನ್‌ ಬಾಹ್ಯಾಕಾಶದಲ್ಲಿ ಕೇವಲ 8 ದಿನಗಳ ಯೋಜನೆ ಆಗಿತ್ತು. ಆದರೀಗ ಸ್ಟಾರ್‌ಲೈನರ್‌ನ ಪ್ರೊಪಲ್ಶನ್‌ ಸಿಸ್ಟಮನ್‌ನಲ್ಲಿ ಆದ ಸಮಸ್ಯೆಯಿಂದಾಗಿ ಇದು ಭೂಮಿಗೆ ಯಶಸ್ವಿಯಾಗಿ ಮರಳುವುದು ಅನುಮಾನ ಎನ್ನಲಾಗಿದೆ. ಒಂದು ವಾರದ ಅವಧಿಗೆಂದು ಹೋದ ಅವರು ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಉಳಿಯಲಿದ್ದಾರೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಹಾಗೇನಾದರೂ ವಾಪಾಸ್ ಆದಲ್ಲಿ ಆಗಸದ ಮಧ್ಯೆಯೇ ಸುಟ್ಟು ಭಸ್ಮವಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್‌ಲೈನರ್‌ನ ಕಾರ್ಯಾಚರಣೆಯನ್ನು ಬದಲಾಯಿಸಲು ನಾಸಾ ನಿರ್ಧರಿಸಿದೆ.

ಅಷ್ಟಕ್ಕೂ ಆಗಿದ್ದೇನು?
ಕಳೆದ ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಜೂನ್ 6 ರಂದು ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. 5 ಥ್ರಸ್ಟರ್‌ಗಳಲ್ಲಿ ದೋಷ ಕಂಡುಬಂದಿದೆ. ಬಟ್ ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದಿದ್ದು ಅವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಗಗನನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ.

ನಾಸಾ ಹೇಳಿದ್ದೇನು?
ಇವರಿಬ್ಬರು ಒಂದೇ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಬರೋದಿಲ್ಲ. ಬೇರೆ ಬೇರೆ ಬಾಹ್ಯಾಕಾಶ ನೌಕೆಯಲ್ಲಿ ಅವರು ಮರಳಬಹುದು ಎಂದುಸ ನಾಸಾ ತಿಳಿಸಿದ್ದು, ಈ ನೌಕೆ ಸ್ಟಾರ್‌ಲೈನರ್‌ ಆಗಿರುವುದು ಕೂಡ ಅನುಮಾನ ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಅಲ್ಲಿಯವರೆಗೂ ಸ್ಟಾರ್‌ಲೈನರ್‌ ನೌಕೆಯನ್ನು ಬಳಸಿಕೊಂಡು ಭೂಮಿಗೆ ವಾಪಾಸ್‌ ಆಗೋದು ಅಸುರಕ್ಷಿತ ಎಂದು ಪರಿಗಣಿಸಿದರೆ, ಈ ಇಬ್ಬರು ಗಗನಯಾತ್ರಿಗಳು 2025ರ ಫೆಬ್ರವರಿಯಲ್ಲಿ ಸ್ಪೇಸ್‌ ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ ಮೂಲಕ ಭೂಮಿಗೆ ಮರಳಬಹುದು ಎಂದು ತಿಳಿಸಿದೆ.

ಅಲ್ಲದೆ ಕಮರ್ಷಿಯಲ್ ಕ್ರ್ಯೂ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ನೀಡಿರುವ ಮಾಹಿತಿ ಪ್ರಕಾರ, ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಬುಚ್ ಮತ್ತು ಸುನಿತಾ ಅವರನ್ನು ಮರಳಿ ತರುವುದು NASAದ ಪ್ರಮುಖ ಆಯ್ಕೆ ಆಗಿದೆ. ಆದರೆ ನಾಸಾ ಸ್ಪೇಸ್‌ಎಕ್ಸ್ ಕ್ರ್ಯೂ-9 ಮಿಷನ್​​ ಉಡಾವಣೆ ವಿಳಂಬ ಆಗಲಿದೆ. ಸೆಪ್ಟೆಂಬರ್ 25ಕ್ಕೆ ಉಡವಾಣೆ ಆಗಲಿದ್ದು, ಆ ಮೂಲಕ ಇಬ್ಬರನ್ನೂ ವಾಪಸ್ ಕರೆತರಲು ಯೋಜಿಸಲಾಗಿದೆ ಎಂದಿದ್ದಾರೆ. 2025ರ ವೇಳೆಗೆ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ತರುವುದು ನಮ್ಮ ಗುರಿ. ನೂತನವಾಗಿ ಉಡಾವಣೆ ಮಾಡುತ್ತಿರುವ ನೌಕೆಯಲ್ಲಿ ಇಬ್ಬರು ಗಗನಯಾನಿಗಳು ಹೋಗಲಿದ್ದಾರೆ. 2025 ಫೆಬ್ರವರಿಯಲ್ಲಿ ನಾಲ್ಕು ಸಿಬ್ಬಂದಿ ವಾಪಸ್ ಆಗಲಿದ್ದಾರೆ ಎಂದಿದ್ದಾರೆ.

1 Comment
  1. Mygreat learning says

    Mygreat learning Good post! We will be linking to this particularly great post on our site. Keep up the great writing

Leave A Reply

Your email address will not be published.