Dr. Bro: ಯೂಟ್ಯೂಬಿನಿಂದ ಬರೋ ಆದಾಯ ಲೈವ್ ನಲ್ಲಿ ರಿವೀಲ್ ಮಾಡಿದ ಡಾ.ಬ್ರೋ!
Dr. Bro: ನಮಸ್ಕಾರ ದೇವ್ರು ಅಂತಾನೇ ವಿಡಿಯೋ ಆರಂಭ ಮಾಡುವ ಗಗನ್ ಅಲಿಯಾಸ್ ಡಾ.ಬ್ರೋ ಹೆಸರಲ್ಲಿ ಕನ್ನಡಿಗರ ಮನಸ್ಸನ್ನ ಗೆದ್ದಿದ್ದಾರೆ. ಯೂಟ್ಯೂಬ್ ನಲ್ಲಂತೂ ಯಾವ ಸ್ಟಾರ್ ಗಳಿಗೂ ಇಲ್ಲದಷ್ಟು ದೊಡ್ಡ ಫಾಲೋವರ್ಸ್ ಹೊಂದಿದ್ದಾರೆ. ಅಲ್ಲದೆ ಮಿಲಿಯನ್ ಗಟ್ಟಲೇ ಸಬ್ಸ್ಕೈಬರ್ ಇದಾರೆ. ಹೌದು, ಡಾ.ಬ್ರೋಗೆ ಅಷ್ಟೊಂದು ಫಾಲೋವರ್ಸ್ ಸುಮ್ಮನೆ ಬಂದಿಲ್ಲ. ಡಾ.ಬ್ರೋ ಅಷ್ಟು ಕಷ್ಟ ವಿಡಿಯೋಗಳನ್ನ ಮಾಡಿ ಹಾಕುತ್ತಾರೆ. ದೇಶ ವಿದೇಶಗಳನ್ನ ಸುತ್ತುತ್ತಾರೆ ಕೂಡಾ… ಸದ್ಯ ಇಷ್ಟೆಲ್ಲಾ ವೀವ್ಸ್ ಕಾಣೋ ಡಾಕ್ಟರ್ ಬ್ರೋ ಯೂಟ್ಯೂಬ್ನಿಂದ ಎಷ್ಟು ಹಣ ಪಡೀತಾರೆ ಅಂತ ಹೇಳ್ತೀವಿ ನೋಡಿ.
ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವವರೆಗೂ ಪರಿಚಿತರಾಗಿರುವ ಡಾಕ್ಟರ್ ಬ್ರೋ ಪಾಕಿಸ್ತಾನ, ಆಫ್ಘಾನಿಸ್ತಾನ, ಚೀನಾ, ತಾಂಜಾನಿಯಾ, ನೇಪಾಳ, ಉಗಾಂಡ, ಥೈಲ್ಯಾಂಡ್, ರಷ್ಯಾ, ದುಬೈನಂತಾ ದೇಶಗಳಲ್ಲಿ ಸುತ್ತಾಡಿ ಅಲ್ಲಿನ ಜನಜೀವನ, ಸಂಸ್ಕೃತಿ ಪರಿಚಯ ಮಾಡಿದ್ದಾರೆ.
ಡಾಕ್ಟರ್ ಬ್ರೋ (Dr. Bro) ಯೂಟ್ಯೂಬ್ ಚಾನೆಲ್ ಶುರುವಾಗಿದ್ದು ಬರೀ 6 ವರ್ಷದ ಹಿಂದೆ.. 2018ರಲ್ಲಿ ಗಗನ್ ಶ್ರೀನಿವಾಸ್ ಡಾಕ್ಟರ್ ಬ್ರೋ ಅಂತ ಯೂಟ್ಯೂಬ್ ಚಾನೆಲ್ ಶುರುಮಾಡಿದ್ರು. ಪ್ರಸ್ತುತ ಗಗನ್ ಅವ್ರ ಮಾತಿನ ಶೈಲಿ, ಊರಿನ ಪರಿಚಯ ಮಾಡಿಕೊಡೋ ಶೈಲಿಗೆ ಇಡೀ ದೇಶವೇ ಫಿದಾ ಆಗಿದೆ. ಡಾಕ್ಟರ್ ಬ್ರೋ ಚಾನೆಲ್ನಲ್ಲಿ ಈಗ ಎರಡೂವರೆ ಮಿಲಿಯನ್ಗೂ ಹೆಚ್ಚಿನ ಜನ ಸಬ್ಸ್ಕ್ರೈಬರ್ಸ್ ಆಗಿದ್ದಾರೆ. ಅವ್ರು ಕಳೆದ 6 ವರ್ಷದಲ್ಲಿ ಹಾಕಿದ್ದು ಕೇವಲ 150 ವಿಡಿಯೋಗಳೇ ಆದ್ರೂ ಅದರಿಂದ ಬಂದ ರೆಸ್ಪಾನ್ಸ್ ಮಾತ್ರ ಅಧ್ಬುತ.
ಇಷ್ಟೆಲ್ಲಾ ಫಾಲೋವರ್ಸ್, ವೀವ್ಸ್ ಇರುವಾಗ ಅವ್ರ ಯೂಟ್ಯೂಬ್ನಿಂದ ಅವ್ರು ಎಷ್ಟು ಹಣ ಸಂಪಾದನೆ ಮಾಡ್ತಾರೆ ಅನ್ನೋದು ಕುತೂಹಲ ಇದ್ದೇ ಇರುತ್ತೆ. ಅದಕ್ಕಾಗಿ ಲೈವ್ ಗೆ ಬಂದಿದ್ದ ಬ್ರೋ, ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬರು ಯೂಟ್ಯೂಬ್ ನಲ್ಲಿ ನಿಮ್ಮ ತಿಂಗಳ ಆದಾಯ ಎಷ್ಟು ಎಂದು ಕೇಳಿದ್ದಾರೆ. ಅದಕ್ಕೆ ಡಾ.ಬ್ರೋ ತಮ್ಮ ಮೊಬೈಲ್ ತೆಗೆದು ಸಂಪಾದನೆಯನ್ನು ತೋರಿಸಿದ್ದಾರೆ.
ಅದರಲ್ಲಿ 2 ಸಾವಿರದ 100 ಡಾಲರ್ ಇತ್ತು. ಅಂದ್ರೆ 1 ಲಕ್ಷದ 76 ಸಾವಿರ ಹಣ. ಈ ತಿಂಗಳು ಬಂದಿರುವ ಹಣ ಇದು. ಆದರೆ ದೇಶ ವಿದೇಶಗಳನ್ನು ಸುತ್ತಲು ಫ್ಲೈಟ್ ಟಿಕೆಟ್ ಖರ್ಚು, ಆಹಾರದ ಖರ್ಚು, ಹಾಗೇ ವಿಡಿಯೋ ಎಡಿಟಿಂಗ್ ಮಾಡುವುದಕ್ಕೂ ಅದರಲ್ಲಿಯೇ ಹಣ ಖರ್ಚು ಮಾಡಿ, ಇನ್ನುಳಿದ ಹಣದಲ್ಲಿ ವಿಡಿಯೋ ಎಡಿಟಿಂಗ್ ಕಾಸ್ಟ್ ಕೊಡಬೇಕು. ಜೊತೆಗೆ ಖರೀದಿಸಿರೋ ಮೊಬೈಲ್, ಕ್ಯಾಮೆರಾ ಗ್ಯಾಜೆಟ್ಗಳ ಇಎಂಐ ಅನ್ನೂ ಕಟ್ಟಬೇಕು. ಇಷ್ಟೆಲ್ಲಾ ಹೋದ್ಮೇಲೆ ಗಗನ್ ಶ್ರೀನಿವಾಸ್ಗೆ ಉಳಿಯೋದು ಕೇವಲ 10ಸಾವಿರದಿಂದ 20ಸಾವಿರ ಅಷ್ಟೇ.. ಆದರೆ ಇದರ ನಡುವೆ ಜಾಹೀರಾತುಗಳಿಂದಾನೂ ಒಳ್ಳೆಯ ಹಣ ಅವರ ಕೈ ಸೇರುತ್ತಿದೆ. ಈ ಬಗ್ಗೆಯೂ ಹೇಳಿಕೊಂಡಿದ್ದಾರೆ.
I do trust all the ideas youve presented in your post They are really convincing and will definitely work Nonetheless the posts are too short for newbies May just you please lengthen them a bit from next time Thank you for the post