Pest Control: ಕೀಟ ಹತೋಟಿಯಲ್ಲಿ ಜೈವಿಕ ಶಿಲೀಂಧ್ರನಾಶಕಗಳ ಪಾತ್ರ: ಇದರ ಬಳಕೆ ಹೇಗೆ?

Pest Control: ಸಾವಯವ ಬೇಸಾಯ(Organic farming) ಮಾಡುವ ರೈತರು ವಿವಿಧ ಪದ್ಧತಿಗಳನ್ನು ಅನುಸರಿಸಿ ಕೀಟಗಳ ಹತೋಟಿ(Pest control) ಮಾಡಬಹುದು. ಅದರಲ್ಲಿ ಜೈವಿಕ ಕೀಟನಾಶಕ ಶಿಲೀಂಧ್ರಗಳು (Biopesticide fungi), ನಂಜಾಣು ಹಾಗೂ ದುಂಡಾಣುಗಳ ಬಳಕೆಗೆ ನಿಸರ್ಗದಲ್ಲಿ ಇವುಗಳ ಸಂಖ್ಯೆ ಅಥವಾ ಪ್ರಮಾಣ ಕಡಿಮೆ ಇರುವುದರಿಂದ, ಇವುಗಳನ್ನು ಪ್ರಯೋಗಾಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇವುಗಳನ್ನು ರೈತರು(Farmer) ಕೀಟನಾಶಕಗಳಾಗಿ ಬಳಕೆ ಮಾಡಬಹುದು. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.

ಮೆಟಾರೈಜಿಯಂ ಅನಿಸೊಹ್ಲಿಯೇ, ಮೆಟರೈಜಿಯಂ ರಿಲೈ, ಬೆವೇರಿಯಾ ಬೆಸ್ಸಿಯಾನಾ ಹಾಗೂ ಲೆಕಾನಿಸಿಲಿಯಂ ಲೆಕಾನಿ ಎಂಬ ಕೀಟನಾಶಕ ಶಿಲೀಂಧ್ರ ರೋಗಾಣುಗಳನ್ನು ಪ್ರಯೋಗಾಲಯದಲ್ಲಿ(Lab) ಯಥೇಚ್ಛವಾಗಿ ಬೆಳೆದು ವಿವಿಧ ತರಹದ ಕೀಟಗಳ ಹತೋಟಿಯಲ್ಲಿ ಉಪಯೋಗಿಸಬಹುದು. ಈ ಶಿಲೀಂಧ್ರ ಜೀವಿಗಳು ಕೀಟದ ಚರ್ಮದ ಮೂಲಕ ಕೀಡೆಯ ದೇಹದೊಳಗೆ ತೂರಿ, ಕೀಟಗಳಿಗೆ ರೋಗವನ್ನು ಹರಡುತ್ತದೆ. ಈ ರೋಗ ತಗುಲಿದ ಹುಳುಗಳು ಸತ್ತ ಮೇಲೆ ಬಿಳಿ ಬಣ್ಣದ ಮೈಸಿಲಿಯಾ ಕೀಟದ ದೇಹದ ಮೇಲೆ ಬೆಳೆದು, ನಂತರ ಶಿಲೀಂಧ್ರದ ಬೀಜಾಣುಗಳನ್ನು ಉತ್ಪಾದಿಸುತ್ತವೆ.

ಈ ಶಿಲೀಂಧ್ರದ ಬೀಜಾಣುಗಳು ಗಾಳಿ, ನೀರಿನ ಮುಖಾಂತರ ಪಸರಿಸಿ ಹಾಗೂ ನೇರ ಸಂಪರ್ಕದಿಂದ ಇನ್ನೊಂದು ಆರೋಗ್ಯ ಭರಿತ ಕೀಡೆಗೆ ರೋಗವನ್ನುಂಟು ಮಾಡುವದು. ಶಿಲೀಂಧ್ರಕ್ಕೆ ತುತ್ತಾದ ಕೀಡೆಯು ಮೊದಲು ಸುಸ್ತಾಗಿ ಚಲನವಲನ ಕಡಿಮೆಯಾಗಿ ಆಹಾರವನ್ನು ತಿನ್ನುವುದು ನಿಲ್ಲಿಸುತ್ತದೆ. ಹವಾಮಾನದ ಆರ್ಧತೆಯು ಹಾಗೂ ಉಷ್ಣಾತಾಮಾನ ರೋಗವನ್ನು ಹೆಚ್ಚಿನ ಪ್ರಮಾಣದಲ್ಲಿ ಹರಡಲು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.

1 Comment
  1. qTcJGhoCKNf says

    TwZEcDvoCre

Leave A Reply

Your email address will not be published.