Free Vehicle: ರಾತ್ರಿ ಓಡಾಡಲು ಒಂಟಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ: ಇದರ ಪ್ರಯೋಜನ ಪಡೆಯೋದು ಹೇಗೆ?
Free Vehicle: ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದಂತಹ ಪ್ರಕರಣಗಳು(Rape case) ಹೆಚ್ಚಾಗಿ ದಾಖಲಾಗುತ್ತಿದೆ. ಒಂಟಿ ಮಹಿಳೆ(Single lady), ವೃದ್ಧೆ ಹಾಗೂ ಮಕ್ಕಳು ಈಗ ಸೇಫ್ ಅಲ್ಲ. ಒಂಟಿ ಮಹಿಳೆಯರನ್ನು ಕಾಡುವ ಕಾಮ ಪಿಶಾಚಿಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಬೆಂಗಳೂರಿನಂತಹ(Bengaluru) ಮಹಾನಗರಗಳಲ್ಲಿ ಗಂಡಸರ ಹಾಗೆ ಮಹಿಳೆಯರು ರಾತ್ರಿ, ಹಗಲು ದುಡಿಯಲು ಹೊರ ಹೋಗುತ್ತಾರೆ. ಹಾಗಾಗಿ ತಡ ರಾತ್ರಿ ಕ್ಯಾಬ್, ರಿಕ್ಷಾಗಳಲ್ಲಿ ಒಂಟಿ ಮಹಿಳೆ ಓಡಾಡುವುದು ಇತ್ತೀಚಿನ ದಿನಗಳಲ್ಲಿ ಸೇಫ್ ಅಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ(Police department) ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.
ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯೊಳಗೆ ಮನೆಗೆ ತೆರಳಲು ವಾಹನ ಸಿಗದೇ ಪರದಾಡುವ ಒಂಟಿ ಮಹಿಳೆ ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು (1091 ಮತ್ತು 7837018555) ಸಂಪರ್ಕಿಸಬಹುದು. ಮಹಿಳೆಯರಿಗಾಗಿ ಉಚಿತ ಪ್ರಯಾಣ(Free vehicle Scheme) ಯೋಜನೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ. ವಾಹನಕ್ಕಾಗಿ ವಿನಂತಿಸಬಹುದು. ಈ ಯೋಜನೆ 24×7 ಗಂಟೆಗಳ ಕಾಲ ಕೆಲಸ ಮಾಡುತ್ತದೆ.
ನಿಯಂತ್ರಣ ಕೊಠಡಿಯ ವಾಹನ ಅಥವಾ ಹತ್ತಿರದ ಪಿಸಿಆರ್ ವಾಹನ/ಎಸ್‌ಎಚ್‌ಒ ವಾಹನವು ಒಂಟಿ ಮಹಿಳೆಯನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ಕೊಂಡೊಯ್ಯುತ್ತದೆ. ಇದನ್ನು ಉಚಿತವಾಗಿ ಮಾಡಲಾಗುವುದು. ಈ ಸಂದೇಶವನ್ನು ಆದಷ್ಟು ಮಹಿಳೆಯರಿಗೆ ಹರಡಿ. ನಿಮ್ಮ ಹೆಂಡತಿ, ಹೆಣ್ಣುಮಕ್ಕಳು, ಸಹೋದರಿಯರು, ತಾಯಂದಿರು, ಸ್ನೇಹಿತರು ಮತ್ತು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರಿಗೆ ಸಂಖ್ಯೆಯನ್ನು ಕಳುಹಿಸಿ. ಈ ನಂಬರನ್ನು ಆದಷ್ಟು ಮಹಿಳೆಯರು, ಅದರಲ್ಲೂ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರು ಸೇವ್ ಮಾಡಿ ಇಟ್ಟುಕೊಳ್ಳಿ. ಹಾಗೆ ಪುರುಷರು ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.
ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಖಾಲಿ ಸಂದೇಶ ಅಥವಾ ಮಿಸ್ಡ್ ಕಾಲ್ ನೀಡಬಹುದು.. ಇದರಿಂದ ಪೊಲೀಸರು ನಿಮ್ಮ ಸ್ಥಳವನ್ನು ಪತ್ತೆ ಹಚ್ಚಬಹುದು ಮತ್ತು ನಿಮಗೆ ಸಹಾಯ ಮಾಡಬಹುದು. ಇದು ಭಾರತದಾದ್ಯಂತ ಅನ್ವಯಿಸುತ್ತದೆ