Golden Eagle: ಆಟವಾಡುತ್ತಿದ್ದ 8ರ ಬಾಲಕಿಯನ್ನು ಹೊತ್ತೊಯ್ಯಲು ಬಂದ ದೈತ್ಯ ಗಿಡುಗ, ಬಿದ್ದರೂ ಬಿಡದ ಹಿಡಿತ – ಎದೆ ಝಲ್ ಅನಿಸೋ ವಿಡಿಯೋ ವೈರಲ್

Golden Eagle: ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗೋ ಕೆಲವು ವಿಶೇಷವಾದ ವಿಡಿಯೋಗಳು ನಿಜಕ್ಕೂ ಮೈ ರೋಮಾಂಚನಗೊಳಿಸುತ್ತಾ ಅಚ್ಚರಿ ಉಂಟುಮಾಡುತ್ತದೆ. ಕುಳಿತಲ್ಲೇ ನಮ್ಮನ್ನು ಬೆವರುವಂತೆ ಮಾಡುತ್ತವೆ. ಅಂತೆಯೇ ಇದೀಗ ನಾವು ಹೇಳ ಹೊರಟಿರುವ ವಿಚಾರದ ಬಗ್ಗೆ ಕೇಳಿದ್ರೆ ನೀವು ವಿಡಿಯೋ ನೋಡದೆಯೇ ಅದನ್ನು ಒಪ್ಪುವುದೇ ಇಲ್ಲ. ಅದಾಗ್ಯೂ ವಿಡಿಯೋ ನೋಡಿದ್ರೆ ಬೆಚ್ಚಿಬೀಳುತ್ತೀರಿ.

ಅದೇನೆಂದರೆ ದೈತ್ಯ ಗಾತ್ರದ ಗಿಡುಗ ಅಥವಾ ಗೋಲ್ಡನ್ ಈಗಲ್(Golden Eagle) ಜಿಂಕೆ, ಮೊಲ, ಕುರಿ, ನರಿ, ತೋಳ ಹೀಗೆ ಬೇರೆ ಬೇರೆ ರೀತಿಯ ಪ್ರಾಣಿಗಳನ್ನು ಹೊತ್ತೊಯ್ಯುವ ಬಗ್ಗೆ ನೀವು ಕೇಳಿದ್ದೀರಿ. ಆ ಕುರಿತ ವಿಡಿಯೋ ಕೂಡ ನೋಡಿದ್ದೀರಿ. ಆದರೀಗ ಈ ದೈತ್ಯ ಗಿಡುಗ 8 ವರ್ಷದ ಬಾಲಕಿಯನ್ನು ಹೊತ್ತೊಯ್ಯುವ ಪ್ರಯತ್ನ ಮಾಡಿದೆ. ಇದರ ಎದೆ ಝಲ್ ಎನಿಸುವ ಭಯಾನಕ ವಿಡಿಯೋ ವೈರಲ್ ಆಗಿದೆ.

ಏನಿದೆ ವಿಡಿಯೋದಲ್ಲಿ?
ಬೆಟ್ಟ ಗುಡ್ಡಗಳ ತಪ್ಪಲಿನ ಬಯಲು ಪ್ರದೇಶದಲ್ಲಿ ಮಕ್ಕಳು ಸೇರಿದಂತೆ ಹಲವರಿದ್ದಾರೆ. ಮಕ್ಕಳು ಆಟವಾಡುತ್ತಿದ್ದರೆ, ಮತ್ತೆ ಕೆಲವರು ಕುದುರೆ ಸವಾರಿ ಮಾಡುತ್ತಿದ್ದಾರೆ. 8 ವರ್ಷದ ಬಾಲಕಿಯೂ ಇದೇ ಸ್ಥಳದಲ್ಲಿ ಆಟವಾಡುತ್ತಿದ್ದಳು. ಇದೇ ವೇಳೆ ಆಗಸದಿದಂ ವೇಗವಾಗಿ ಗೋಲ್ಡನ್ ಈಗಲ್ ಹಾರಿ ಬಂದಿದೆ. ಬಾಲಕಿ ಆಟವಾಡುತ್ತಿದ್ದಲ್ಲಿಗೆ ಬರುತ್ತಿದ್ದಂತೆ ಓಡಲು ಆರಂಭಿಸಿದ್ದಳೆ. ಆದರೆ ಬಾಲಕಿಯ ಕುತ್ತಿಗೆಯನ್ನೇ ಗಿಡುಗ ಹಿಡಿದುಕೊಂಡಿದೆ.

ಬಲಿಷ್ಠ ಉಗುರಿನ ಗಿಡುಗನ ದಾಳಿಯಿಂದ ಬಾಲಕಿ ನೆಲಕ್ಕುರುಳಿದ್ದಾಳೆ. ಆದರೆ ಹಿಡಿದ ಪಟ್ಟನ್ನು ಗಿಡುಗ ಸಡಿಲಿಸಿಲ್ಲ. ಬಿದ್ದ ಬಾಲಕಿಯನ್ನು ಎತ್ತಿಕೊಂಡು ಹಾರಲು ಮುಂದಾಗುತ್ತಿದ್ದಂತೆ ಕುದುರೆ ಸವಾರಿ ಮಾಡುತ್ತಿದ ವ್ಯಕ್ತಿಯೊಬ್ಬ ಓಡೋಡಿ ಬಂದು ಗಿಡುಗದ ಕಾಲು ಹಿಡಿದು ಬಿಡಿಸಲು ಯತ್ನಿಸಿದ್ದಾನೆ. ಹಲವು ಪ್ರಯತ್ನದ ಬಳಿಕ ಗಿಡುಗವನ್ನು ಸೆರೆ ಹಿಡಿದು ಬಾಲಕಿಯನ್ನು ಬಿಡಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಗಿಡುಗವನ್ನು ಸೆರೆ ಹಿಡಿದ್ದಾರೆ. ಬಾಲಕಿ ಬೀಳದೇ ಇದ್ದರೆ ಗಿಡುಗ ಎತ್ತಿಕೊಂಡು ಹಾರಿ ಹೋಗುತ್ತಿತ್ತು. ಆದರೆ ಬಾಲಕಿ ಸಮಯ ಪ್ರಜ್ಞೆ ಹಾಗೂ ಪಕ್ಕದಲ್ಲಿದ್ದವರ ನೆರವಿನಿಂಂದ ಬಾಲಕಿ ಬದು ಉಳಿದಿದ್ದಾಳೆ.

ಈ ವಿಡಿಯೋ ನೋಡಿದರೆ ಇನ್ನು ಈ ಗೋಲ್ಡನ್ ಗಿಡುಗಳಿರುವ ಪ್ರದೇಶದಲ್ಲಿ ಮಕ್ಕಳು ಮಾತ್ರವಲ್ಲ ವಯಸ್ಕರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಘಟನೆ ಎಲ್ಲಿ ನಡೆದಿದೆ ಅನ್ನೋದರ ಕುರಿತು ಸ್ಪಷ್ಟತೆ ಇಲ್ಲ. ಆದರೆ ಮೈಜುಮ್ಮೆನಿಸುವ ವಿಡಿಯೋ ಆತಂಕ ಹೆಚ್ಚಿಸಿರುವುದು ಸುಳ್ಳಲ್ಲ.

ದೈತ್ಯ ಗಿಡುಗಗಳ ವಾಸ ಎಲ್ಲಿ?
ಗೋಲ್ಡನ್ ಈಗಲ್ ಹೆಚ್ಚಾಗಿ ಭೂಮಿ ಮಧ್ಯಭಾಗ ಈಕ್ವೇಟರ್‌ನ ಉತ್ತರ ಹೆಮ್ಸಿಪೇರ್ ಬಳಿ ಕಾಣಸಿಗುತ್ತದೆ. ಇನ್ನು ಏಷ್ಯಾದಲ್ಲೂ ಗೋಲ್ಡನ್ ಈಗಲ್ ವಾಸವಿದೆ. ಪ್ರಮುಖವಾಗಿ ಭಾರತದ ಹಿಮಾಲಯ, ಕಾಶ್ಮೀರ, ಭೂತಾನ್, ಬಲೂಚಿಸ್ತಾನ್‌ಗಳಲ್ಲೂ ಈ ಹಕ್ಕಿ ಕಾಣಸಿಗುತ್ತದೆ. ಜನವಸತಿ ಪ್ರದೇಶಗಳಿಂದ ಈ ಗೋಲ್ಡನ್ ಈಗಲ್ ದೂರವಿರುತ್ತದೆ. ಪರ್ವತ ಪ್ರದೇಶಗಳ ಕಡೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.

 

View this post on Instagram

 

A post shared by Animal (@pagepostinganimalattacks)

Leave A Reply

Your email address will not be published.