BJP protest: ಸಿಎಂ ಯು ಶುಡ್ ರಿಸೈನ್, ಮನೆಗೆ ತೊಲಗಿ-ವಿಧಾನ ಸೌಧದಲ್ಲಿ ಬಿಜೆಪಿ ಉಗ್ರ ಪ್ರತಿಭಟನೆ
BJP protest: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಕೇಳಿ ಬಂದಿರುವ ಹಿನ್ನೆಲೆ ಈಗಾಗಲೆ ರಾಜ್ಯಪಾಲರು ತನಿಖೆಗೆ ಆದೇಶ ನೀಡಿದ್ದಾರೆ. ಆದರೆ ಸಿಎಂ ಆರೋಪ ಬಂದರು ಇನ್ನು ರಾಜಿನಾಮೆ ನೀಡಿಲ್ಲ ಎಂದು ಆರೋಪಿಸಿ ಬಿಜೆಪಿ ವಿಧಾನ ಸೌಧದ ಮುಂಭಾಗ ಉಗ್ರ ಪ್ರತಿಭಟನೆ (BJP protest) ಹಮ್ಮಿಕೊಂಡಿದೆ. ಬಿಜೆಪಿಯ ಹಲವು ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಿಜೆಪಿ ಹಾಗೂ ಜೆಡಿಎಸ್ ಎರಡು ಪಕ್ಷ ಒಂದಾಗಿ ಕಳೆದ ಎರಡು ತಿಂಗಳಿಂದ ನಿರಂತರ ಹೋರಾಟ ಮಾಡುತ್ತ ಬಂದಿದ್ದೇವೆ. ಇವತ್ತು ನಮ್ಮ ಹೊರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ ಎಂದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ. ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ ಹೀಗೆ ಹಗರಣಗಳ ತಾಣ ಆಗಿದೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ. ರಾಜ್ಯಪಾಲರು ಕಾನೂನಾತ್ಮಕವಾಗಿ ಪ್ರಾಸಿಕ್ಯೂಶನ್ ಕೊಟ್ಟಿದ್ದಾರೆ. ಇಷ್ಟು ಕೊಟ್ರು ಸಹ ಮುಖ್ಯಮಂತ್ರಿ ಅವರು ಬಂಡತನ ಮಾಡುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಹಾಗೂ ರಾಜ್ಯಪಾಲರ ಮೇಲೆ ಆರೋಪ ಮಾಡೋದನ್ನು ಬಿಡಬೇಕು. ಕಾಂಗ್ರೆಸ್ ಪಕ್ಷ ಅಂದ್ರೆ ಭ್ರಷ್ಟರಿಂದ ಭ್ರಷ್ಟಾರಿಗಾಗಿ ಆಗಿರುವ ಪಕ್ಷ ಆಗಿದೆ. ಇವತ್ತು ಸಿದ್ದರಾಮಯ್ಯ ಅವರು ತಿಳ್ಕೋತಾರೆ ಇಡೀ ಪಕ್ಷ ನನ್ನ ಪರವಾಗಿ ಇದೇ ಅಂತಾ ಕಾಂಗ್ರೆಸ್ ಪಕ್ಷ ಪುಂಡಾಟಿಕೆ ಮಾಡುತ್ತಿದೆ. ಆದ್ರೆ ನೀವು ರಾಜೀನಾಮೆ ಕೊಟ್ಟು ಕಾನೂನುತ್ಮಕ ಹೋರಾಟ ಮಾಡಿ. ರಾಜೀನಾಮೆ ಕೊಡಿ ಮನೆಗೆ ತೊಲಗಿ ಎಂದು ಹರಿಹಾಯ್ದರು.
ಇದೇ ವೇಳೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ ಮಾತನಾಡಿ ಬಿಳಿ ಬಟ್ಟೆಯಷ್ಟೇ ನನ್ನ ರಾಜಕೀಯ ಬದುಕು ಸ್ವಚ್ಛ ಅಂದ ಸಿದ್ದರಾಮಯ್ಯ, ಈಗ ವಾಲ್ಮೀಕಿ, ಮೂಡ, ಟೂರಿಸಮ್ ಹಗರಣ ಎಲ್ಲಾ ಹಗರಣದಲ್ಲೂ ಸಿಎಂ ಭಾಗಿಯಾಗಿ ತಮ್ಮಮ ಬಿಳಿ ಪಂಚೆಯನ್ನು ರಾಡಿ ಮಾಡಿಕೊಂಡಿದ್ದಾರೆ. ರಾಜ್ಯ ನೋಡ್ತಿದೆ, ಸಿಎಂ ಕುಟುಂಬ ನೇರವಾಗಿ ಭಾಗಿ ಆಗಿದ್ದಾರೆ. ಕಾಂಗ್ರೆಸ್ ನವ್ರು ಏನ್ ಸ್ಟ್ರೈಕ್ ಮಾಡ್ತಿದಾರೆ ಅಂತ ಜನ ಕೇಳ್ತಿದ್ದಾರೆ. ಯಡಿಯೂರಪ್ಪ ಅವ್ರ ಮೇಲೆ ಹೀಗೆ ಆರೋಪ ಬಂದಾಗ ನೀವು ಪ್ರಾಸಿಕ್ಯುಷನ್ ಗೆ ಅನುಮತಿ ಕೊಡ್ಡಿದ್ರಿ. ಸಿದ್ದರಾಮಯ್ಯನವರ 40 ವರ್ಷದ ರಾಜಕೀಯ ಜೀವನ ಹೀಗ್ಬಾರ್ದಿತ್ತು. ಜನ ನಿಮ್ಮಿಂದ ಇದನ್ನ ನಿರೀಕ್ಷೆ ಮಾಡಿರ್ಲಿಲ್ಲ ಸಿಎಂ ಅವ್ರೇ ಎಂದು ವ್ಯಂಗ್ಯವಾಡಿದರು.
ಇನ್ನು ಪ್ರತಿಭಟನೆನೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಮುಖಂಡ ಸಿ ಟಿ ರವಿ, ರಾಜ್ಯಪಾಲರು ಕೊಟ್ಟಿರುವ ಪ್ರಾಸಿಕ್ಯೂಶನ್ ಅನುಮತಿ ಕೊಟ್ಟಿದ್ದು ಅಪರಾಧ ಆಗಿದೆ ಅಂತಾ ಪ್ರತಿಭಟನೆ ಮಾಡ್ತಿದ್ದೀರಾ? ರಾಜ್ಯಪಾಲರ ಪ್ರತಿಕೃತಿಗೆ ದಹನ ಮಾಡ್ತೀರಿ ನೀವೆಲ್ಲ. 2011 ರಲ್ಲಿ ಯಡಿಯೂರಪ್ಪ ಅವರ ಮೇಲೆ ಅಂದಿನ ರಾಜ್ಯಪಾಲ ಹಂಸ ರಾಜ್ ಭಾರದ್ವಜ್ ಪ್ರಾಸಿಕ್ಯೋಷನ್ ಕೊಟ್ರು. ಆಗ ರಾಜ್ಯಪಾಲರು ಕಾನೂನು ಬದ್ದವಾಗಿ ನಡೆದುಕೊಂಡಿದ್ದಾರೆ. ಯಡಿಯೂರಪ್ಪ ಅವರು ರಾಜೀನಾಮೆ ಕೊಡಲೇಬೇಕು ಅಂತ ಸಿದ್ದರಾಮಯ್ಯ ಹೇಳಿದ್ರು. ಸಿದ್ದರಾಮಯ್ಯ ಅವರು ಅವಾಗ ರಾಜೀನಾಮೆ ಕೊಡಿ ಅಂತಾ ಉಪದೇಶ ಮಾಡಿದ್ರಿ. ನಿಮಗೆ ಸ್ವಲ್ಪ್ ಮರುವಿನ ಕಾಯಿಲೆ ಇದೇ ಹಾಗಾಗಿ ಅವಾಗ ಏನು ಮಾತಾಡಿದ್ರೆ ನೆನಪು ಮಾಡ್ಕೊಳ್ಳಿ. ಅವಾಗ ಏನು ರಾಜಭವನ ಇತ್ತು, ಅವಾಗ ಏನು ಕಾನೂನು ಇತ್ತು ಇವಾಗ್ಲೂ ಅದೇ ಇದೇ. ನೀವು ಅವಾಗೇನು ಹೇಳಿದ್ರೀ ಅದೇ ರೀತಿ ನಾವು ಹೇಳ್ತಿವಿ ಎಂದು ಸಿದ್ದರಾಮಯ್ಯನವರಿಗೆ ಚಾಟಿ ಬೀಸಿದರು.
ಸಿದ್ದರಾಮಯ್ಯ YOU SHOULD ರಿಸೈನ್ , ನೀವೂ ಹೇಳಿರುವ ರೀತಿಯಲ್ಲೇ ಇವಾಗಲು ಹೇಳಿದ್ದೇವೆ. 2011 ರಲ್ಲಿ ಏನು ಮಾತು ಹೇಳಿದ್ರೀ ಹಾಗೇ ನಡೆದುಕೊಳ್ಳಿ. ಎರಡು ನಾಲಿಗೆ ಆಗಬಾರದು ನಿಮ್ಮದು ಅದಕ್ಕೇ ರಿಸೈನ್ ಮಾಡಿ. ನೀವು ರಾಜಾ ಮಾರ್ಗ ಬಿಟ್ಟು ಅಡ್ಡದಾರಿ ಹಿಡಿದ್ದೀರಿ. ನೀವು ಗ್ಯಾರಂಟಿ ಕೊಟ್ಟಿದ್ದೇವೆ ಅಂತಾ ಹೇಳ್ತಿರಿ. ಆದ್ರೆ ಹಳ್ಳಿಗಳಲ್ಲಿ ಹೋಗಿ ಕೇಳಿ ನಿಮ್ಮ ಗ್ಯಾರಂಟಿ ಬಗ್ಗೆ ಹೇಳ್ತಾರೆ. ದಲಿತರ ಹಣ ಲೂಟಿ ಹೊಡೆಯುತ್ತಿದ್ದೀರಿ ನೀವು. ಗ್ಯಾರಂಟಿ ಕೊಟ್ಟಿದ್ದಕ್ಕೆ ರಾಜ್ಯದ ಹಣ ಲೂಟಿ ಹೊಡೆಯುತ್ತಿದ್ದಾರಾ…? ಉಪ್ಪು ತಿಂದೋನು ನೀರು ಕುಡಿಲೇಬೇಕು. ನಿಮ್ಮ ಹೈ ಕಮಂಡ್ ಹೇಳಿದ್ಯಾ ರಾಜ್ಯವನ್ನು ಲೂಟಿ ಮಾಡೋಕೆ. ನೀವು ತಪ್ಪು ಮಾಡಿಲ್ಲ ಅಂದ್ರೆ ತನಿಖೆ ಮಾಡ್ಸಿ. ಆಮೇಲೆ ಮತ್ತೆ ಮುಖ್ಯಮಂತ್ರಿ ಆಗಿ ಎಂದು ಸಿ ಟಿ ರವಿ, ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.