Dengue fever: ರಾಜ್ಯದಲ್ಲಿ ಹೆಚ್ಚಿದ ಡೆಡ್ಲಿ ಡೆಂಘಿ ಜ್ವರ: ಶಾಲೆಗಳಿಗೆ ಬಿಡುಗಡೆಯಾಯ್ತು ಹೊಸ ಮಾರ್ಗಸೂಚಿ

Dengue fever: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಹಾವಳಿ (Dengue fever) ಹೆಚ್ಚಾಗುತ್ತಿದೆ. ಅದರಲ್ಲೂ ಶಾಲಾ ಮಕ್ಕಳ ಮೇಲೆ ಇದರ ಪ್ರತಾಪ ಜಾಸ್ತಿ ಎಂದೇ ಹೇಳಬಹುದು. ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಿರುವ ಶಿಕ್ಷಣ ಇಲಾಖೆ ಶಾಲೆಗಳಿಗೆ 10 ಅಂಶಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಾಜ್ಯದ ಎಲ್ಲಾ ಶಾಲೆಗಳಿಗೆ ಕಡ್ಡಾಯವಾಗಿ ಪಾಲನೆ ಮಾಡುವಂತೆ ಶಿಕ್ಷಣ ಆಯುಕ್ತರು ಆದೇಶ ಮಾಡಿದ್ದಾರೆ.

1.ವಿದ್ಯಾರ್ಥಿಗಳು (ಫುಲ್ ಸ್ಲೀವ್ಡ್ ಟಾಪ್ಸ್/ಶರ್ಟ್ಸ್ & ಪ್ಯಾಂಟ್/ಲೆಗ್ಗಿಂಗ್ಸ್) ಧರಿಸುವುದು ಕಡ್ಡಾಯ

2 ಶಾಲೆಗೆ ಬರುವ ಮುನ್ನ Mosquito repellent ಗಳನ್ನು ಕೈ-ಕಾಲುಗಳಿಗೆ ಹಚ್ಚಿಕೊಳ್ಳುವುದು.

3.ಡೆಂಗೂ ನಿಯಂತ್ರಣ ಕ್ರಮಗಳ ಕುರಿತ Do’s & Don’t’s ಶಾಲೆಯ / ಶಾಲಾ ಕೊಠಡಿಯ ನೋಟಿಸ್ ಬೋರ್ಡ್ ಗಳಲ್ಲಿ ಪ್ರದರ್ಶಿಸುವುದು

4 ಶುದ್ಧ ನೀರಿನ ಸಂಗ್ರಹಣಾ ಪರಿಕರಗಳನ್ನು ಭದ್ರವಾಗಿ ಮುಚ್ಚುವುದು ಹಾಗೂ ಕಡ್ಡಾಯವಾಗಿ ವಾರಕ್ಕೊಮ್ಮೆ ಉಜ್ಜಿ ತೊಳೆದು ಸ್ವಚ್ಛಗೊಳಿಸಿ. ನಂತರ ನೀರನ್ನು ತುಂಬಿಸುವುದು.

5 ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಕಡ್ಡಾಯವಾಗಿ ಶೀಘ್ರ ವಿಲೇವಾರಿ ಮಾಡುವುದು

6. ಶಾಲಾ ಆವರಣದ ಕಟ್ಟಡಗಳ ಟೆರಸ್ನ ಮೇಲೆ ಬೀಳುವ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸುವುದು

7 ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಮಾಹಿತಿಯನ್ನು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಪ್ರಚುರಪಡಿಸುವುದು

8. ಪೋಷಕರ ಸಭೆಗಳಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಅರಿವು ಮೂಡಿಸುವುದರೊಂದಿಗೆ ಪೋಷಕರ WhatsApp Group ಗಳಲ್ಲಿ ಮಾಹಿತಿ ಹಂಚಿಕೊಳ್ಳುವುದು

9. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಎಸ್.ಡಿ.ಎಂ.ಸಿ ಸಹಕಾರದೊಂದಿಗೆ ಸೊಳ್ಳೆ ನಿರೋಧಕ (mosquito repellent) ಗಳನ್ನು ವಿದ್ಯಾರ್ಥಿಗಳಿಗೆ ಆದ್ಯತೆಯ ಮೇಲೆ ಪೂರ ಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು

10. ಶಾಲೆಯ ಅಕ್ಕ-ಪಕ್ಕದಲ್ಲಿರುವ ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ವಸ್ತುಗಳು ಸಂಗ್ರಹವಾಗದಂತೆ ಕ್ರಮವಹಿಸುವುದು.

11. ಅಗತ್ಯವಿದ್ದಲ್ಲಿ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ಪಡೆಯುವುದು.

ಇಷ್ಟು ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

Leave A Reply

Your email address will not be published.