Zameer Ahmad: ಅಬ್ಬಬ್ಬಬ್ಬಾ ಲಾಟ್ರೀ… TB ಡ್ಯಾಂ ಗೇಟ್ ಕೂರಿಸುವ ಪ್ರತೀ ಕಾರ್ಮಿಕರಿಗೆ ನನ್ನ ಕಡೆಯಿಂದ 50 ಸಾವಿರ – ಜಮೀರ್ ಘೋಷಣೆ

Zameer Ahmad: ತುಂಗಭದ್ರಾ ಜಲಾಶಯ (Tungabhadra Dam) ಸ್ಟಾಪ್‌ಲಾಗ್‌ ಗೇಟ್‌ ಅಳವಡಿಸುವ ಜಾಗಕ್ಕೆ ನಿನ್ನೆ(ಆ 15) ಭೇಟಿನಿಠಿದ್ದ ವಿಜಯನಗರ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ (Zameer Ahmad) ಕೆಲಸಗಾರರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ. ಅಲ್ಲದೆ ಡ್ಯಾಮ್ ಗೇಟ್ ಕೂರಿಸುವ ಕಾರ್ಯದಲ್ಲಿ ತೊಡಗಿದ ಪ್ರತೀ ಕಾರ್ಮಿಕನಿಗೆ ನನ್ನ ಕಡೆಯಿಂದ 50 ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಹೌದು, ಗೇಟ್ ಕೂರಿಸುವ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಜಮೀರ್ ನಾಳೆ ಗೇಟ್ ಕೂಡಿಸಿ ಕಾರ್ಯ ಯಶಸ್ವಿ ಮಾಡಿ. ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ ರೂ. ಕೊಡುತ್ತೇನೆ. ಧೈರ್ಯವಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ. ಸಚಿವ ಜಮೀರ್ ಅಹ್ಮದ್ 50 ಸಾವಿರ ರೂ. ಕೊಡುತ್ತೇನೆ ಎಂದಿದ್ದಕ್ಕೆ ಕಾರ್ಮಿಕರು ಸಂತಸಪಟ್ಟಿದ್ದಾರೆ.

ಕೆಲಸ ಸ್ಥಗಿತ:
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್ ಕೊಚ್ಚಿ ಹೋಗಿ ಐದು ದಿನಗಳಾಗಿದೆ. ಅದರ ಜಾಗದಲ್ಲಿ ನಿನ್ನೆ ತಾತ್ಕಾಲಿಕ ಗೇಟ್ ಕೂರಿಸುವ ಪ್ರಯತ್ನ ಫಲ ಕೊಡಲಿಲ್ಲ. ಗೇಟ್ ಎಲಿಮೆಂಟ್‌ನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಎರಡು ಮೂರು ಬಾರಿ ಪ್ರಯತ್ನಿಸಿ ತಜ್ಞರು ವಿಫಲರಾಗಿದ್ದಾರೆ. ಹೀಗಾಗಿ ರಿಪೇರಿ ಕಾರ್ಯವನ್ನು ನಿಲ್ಲಿಸಲಾಗಿದೆ. ಸ್ಟಾಪ್ ಲಾಗ್ ಗೇಟ್ ಕೂರಿಸುವಾಗ ಸಣ್ಣ ಮಟ್ಟದ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇದನ್ನು ಸರಿಪಡಿಸೋದಕ್ಕೆ ನೀರಿಗಿಳಿದು ತಾಂತ್ರಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಈ ವೇಳೆಯಲ್ಲೇ ಎರಡು ಬೃಹತ್ ಗಾತ್ರದ ಕ್ರೇನ್ ಗಳ ಮೂಲಕ ಸ್ಟಾಪ್ ಲಾಗ್ ಗೇಟ್ ಇಳಿಸಿ, ಇದೇ ಮಾದರಿಯಲ್ಲಿ 5 ಎಲಿಮೆಂಟ್ ಗಳನ್ನು ಇರಿಸಿ, ಕೂರಿಸುವ ಯೋಜನೆ ಹಾಕಲಾಗಿತ್ತು. ಅಂದಹಾಗೆ ಈ ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave A Reply

Your email address will not be published.