Snake Bite: ತನಗೆ ಕಚ್ಚಿದ ಹಾವನ್ನು ಹಿಡ್ಕೊಂಡೇ ಆಸ್ಪತ್ರೆಗೆ ಹೋದ ಯುವಕ, ಹೌಹಾರಿದ ವೈದ್ಯ ಸಿಬ್ಬಂದಿ
Snake Bite: ಹಾವುಗಳು ಅಂದ್ರೆ ಭಯ ಪಡದವರು ಯಾರಿದ್ದಾರೆ. ಈ ಭೂಮಿಯ ಮೇಲಿನ ಅತ್ಯಂತ ವಿಷಕಾರಿ ಜೀವಿಗಳಲ್ಲಿ ಹಾವುಗಳು ಪ್ರಮುಖವಾದವುಗಳು. ತನಗೆ ಕಚ್ಚಿದ (Snake Bite) ವಿಷಕಾರಿ ಹಾವನ್ನು ಹಿಡಿದು ಯುವಕನೊಬ್ಬ ಆಸ್ಪತ್ರೆಗೆ ತಂದಿದ್ದಾನೆ. ಯುವಕನ ಕೈಯಲ್ಲಿ ಹಾವು ಕಂಡು ಆಸ್ಪತ್ರೆಯ ಸಿಬ್ಬಂದಿ ಹೌಹಾರಿದ್ದಾರೆ.(Youth brought live snake to hospital)
ಉತ್ತರ ಪ್ರದೇಶದ ಚಂದೌಲಿಯಲ್ಲಿ ಯುವಕನೊಬ್ಬನಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ಸಂದರ್ಭ ಎಂಥವರು ಕೂಡಾ ತಕ್ಷಣ ಆಸ್ಪತ್ರೆಗೆ ಡೌಡಾಯಿಸುವುದು ಸಹಜ. ಆದರೆ ಯುವಕ ಮಾತ್ರ ತನ್ನನ್ನು ಹಾವು ಕಚ್ಚಿದ ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೊರಟಿಲ್ಲ. ತಲೆಗೆ ಕಚ್ಚಿದ ಹಾವನ್ನು ಹಿಡಿದು ಆಸ್ಪತ್ರೆಗೆ ಹೋಗುತ್ತೇನೆ ಎಂದು ಹಾವು ಹಿಡಿಯಲು ಹೋಗಿದ್ದಾನೆ. ಅದೇಗೋ ಹಾವು ಹಿಡಿದೆ ಬಿಟ್ಟು ತನಗೆ ಕಚ್ಚಿದ ಹಾವನ್ನು ತನ್ನೊಂದಿಗೆ ತಂದಿದ್ದಾನೆ.
ಆತ ತಂದ ಪ್ಲಾಸ್ಟಿಕ್ ಚೀಲದಲ್ಲಿ ಹಾವನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಗಾಬರಿಗೊಂಡಿದ್ದಾರೆ. ಈ ಘಟನೆಯ ವಿಡಿಯೋ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಏಕಾಏಕಿ ಹಾವು ಜತೆ ಬಂದ ಪೇಶೇಂಟ್ ನೋಡಿ ವೈದ್ಯರು, ನರ್ಸ್ಗಳು ಭಯದಿಂದಲೇ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
चंदौली में हैरान करने का मामला आया सामने
युवक को अचानक सांप ने काटा
युवक सांप को मारकर थैले में भरकर पहुंचा जिला अस्पताल
युवक को सांप सहित देख मचा हड़कंप
युवक का प्राथमिक इलाज कर चिकित्सकों ने भेजा घर@chandaulipolice @Uppolice #Chandauli pic.twitter.com/QAeaIkMwKa
— News1India (@News1IndiaTweet) August 12, 2024
ಅನಿರೀಕ್ಷಿತವಾಗಿ ಕಾಣಿಸಿಕೊಂಡ ಹಾವು ಆಸ್ಪತ್ರೆಯ ಸಾಮಾನ್ಯ ಕಾರ್ಯಚಟುವಟಿಕೆಗೆ ಕೆಲಕಾಲ ಅಡ್ಡಿಯಾಗಿತ್ತು. ಯುವಕನ ಮಾನಸಿಕ ಸ್ಥಿತಿಯ ಬಗ್ಗೆ ವೈದ್ಯ ಸಿಬ್ಬಂದಿಗಳಿಗೆ ಅನುಮಾನ ಉಂಟಾಗಿತ್ತು. ಹಾಗಾಗಿ ಚಿಕಿತ್ಸೆ ನೀಡಲು ಹಿಂದುಮುಂದು ನೋಡಿದ್ದರು. ತನಗೆ ಕಚ್ಚಿದ ಹಾವು ಯಾವುದೆಂದು ವೈದ್ಯರಿಗೆ ತಿಳಿದು ಸೂಕ್ತ ಚಿಕಿತ್ಸೆ ನೀಡಬಹುದು ಎಂಬುದೇ ಯುವಕ ಈ ರೀತಿ ಹಾವನ್ನು ತಂದಿರುವುದಕ್ಕೆ ಕಾರಣ ಎಂದು ಯುವಕ ಹೇಳಿದ್ದು ಗಮನ ಸೆಳೆದಿದೆ.