Home Health Salt Water: ನೀರಿಗೆ ಉಪ್ಪು ಸೇರಿಸಿ ಸ್ನಾನ ಮಾಡಿದ್ರೆ ಈ ಏಳು ಪ್ರಯೋಜನ ಸಿಗುತ್ತೆ!

Salt Water: ನೀರಿಗೆ ಉಪ್ಪು ಸೇರಿಸಿ ಸ್ನಾನ ಮಾಡಿದ್ರೆ ಈ ಏಳು ಪ್ರಯೋಜನ ಸಿಗುತ್ತೆ!

Salt Water

Hindu neighbor gifts plot of land

Hindu neighbour gifts land to Muslim journalist

Salt Water: ಸ್ನಾನದ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕುವುದರಿಂದ ಉಪ್ಪಿನಲ್ಲಿರುವ ಲವಣ ಅಂಶವು ಆರೋಗ್ಯ್ ಪ್ರಯೋಜನ ನೀಡುತ್ತದೆ.  ಅದರಲ್ಲೂ ಅಂಗಡಿಯಿಂದ ತರುವ ಪುಡಿ ಉಪ್ಪಿಗಿಂತ ಎಪ್ಪಮ್ ಉಪ್ಪು ಅಥವಾ ಹಿಮಾಯಲನ್ ಉಪ್ಪು ಉತ್ತಮವಾಗಿದ್ದು, ಇದನ್ನು ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಹಲವು ಪ್ರಯೋಜನಗಳು ಇದೆ.

ಅದಕ್ಕಾಗಿ ಸ್ನಾನ ಮಾಡುವ ನೀರಿನ ಮಟ್ಟ ನೋಡಿ ಒಂದು ಕೈ ಹಿಡಿ ಉಪ್ಪು ಹಾಕಿ ಕರಗಿದ ನಂತರ ಸ್ನಾನ ಮಾಡಿ. ನಂತರ ಕೊನೆಯಲ್ಲಿ ಉಪ್ಪಿನ ಅಂಶವನ್ನು ತೆಗೆದು ಹಾಕಲು ಬೆಚ್ಚಗಿನ ನೀರಿನಿಂದ ತೊಳೆದು, ಒರೆಸಿ, ಮಾಯಿಶ್ಚರೈಸರ್ ಅನ್ನು ಅನ್ವಯಿಸಿ.

ಉಪ್ಪು ನೀರಿನಿಂದ (Salt Water) ಆಗುವ ಪ್ರಯೋಜನ:

ಸ್ನಾಯು ನೋವು ನಿವಾರಣೆ:

ಉಪ್ಪಿನಲ್ಲಿರುವ ಲವಣ ಅಂಶ ಉದ್ವಿಗ್ನ ಸ್ನಾಯುಗಳ ನೋವುಗಳನ್ನು ಕಡಿಮೆ ಮಾಡಲು  ಸಹಾಯ ಮಾಡುತ್ತದೆ.

ರಕ್ತ ಸಂಚಾರ ಸುಗಮ:

ರಕ್ತದೊತ್ತಡವನ್ನು ಕಡಿಮೆ ಮಾಡುವುದು, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವುದಕ್ಕೂ ಸಹಾಯ ಮಾಡುತ್ತದೆ.

ಒತ್ತಡ ನಿವಾರಣೆ:

ಉಪ್ಪಿನಲ್ಲಿರುವ ಮೆಲ್ಮೀಸಿಯಮ್ ನಿಮ್ಮ ದೇಹದ ಒತ್ತಡದ ಪ್ರತಿಕ್ರಿಯೆಗಳನ್ನು ನಿಯಂತ್ರಿಸಿ , ದೇಹವನ್ನು ಶಾಂತತೆಗೆ ಅನುವು ಮಾಡಿಕೊಡುತ್ತದೆ.

ರಕ್ತಪರಿಚಲನೆ:

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹೃದಯರಕ್ತನಾಳದ ಆರೋಗ್ಯ, ರಕ್ತಪರಿಚಲನೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ಮಾಯಿಶ್ಚರೈಸಿಂಗ್:

ಲವಣಗಳಿಂದ ತುಂಬಿದ ಸ್ನಾನವು ಚರ್ಮದ ತಡೆಗೋಡೆ ಕಾರ್ಯವನ್ನು ಸುಧಾರಿಸುತ್ತದೆ, ಇದರಿಂದ ತ್ವಚೆಯು ಹೆಚ್ಚು ಕಾಲ ತೇವಾಂಶದಿಂದ ಕೂಡಿರುತ್ತದೆ.

ಉತ್ತಮ ನಿದ್ರೆ:

ಮೆನ್ನೀಸಿಯಮ್ ಕಾರಣದಿಂದಾಗಿ, ನೋವುಗಳನ್ನು ಕಡಿಮೆ ಮಾಡುವ ಕಾರಣದಿಂದಾಗಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಚರ್ಮವನ್ನು ಸ್ವಚ್ಛಗೊಳಿಸುವಿಕೆ:

ಸೋಡಿಯಂ ಮತ್ತು ಪೊಟ್ಯಾಸಿಯಮ್ – ನಿಮ್ಮ ಚರ್ಮದ ಮೇಲೆ ಆಳವಾದ ಶುದ್ದೀಕರಣ ನೀಡುತ್ತವೆ, ಚರ್ಮದ ರಂಧ್ರಗಳಿಂದ ವಿಷ ಮತ್ತು ಸತ್ತ ಚರ್ಮದ ಕೋಶಗಳನ್ನು ಶುದ್ದೀಕರಿಸುತ್ತವೆ.