Sunitha Wiliams : ಖಾಲಿ 8 ದಿನಕ್ಕೆಂದು ಬಾಹ್ಯಾಕಾಶಕ್ಕೆ ಹಾರಿದ್ದ ಸುನೀತಾ ವಿಲಿಯಮ್ಸ್ ಇನ್ನು ಮರಳಿ ಬರೋದು 2025ಕ್ಕೆ !! ಬಾಹ್ಯಾಕಾಶದಲ್ಲಿ ಆಗಿದ್ದೇನು?
Sunitha Wiliams : ಕೇವಲ 8 ದಿನಕ್ಕೆಂದು ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದ ನಾಸಾ ಗಗನಯಾತ್ರಿಗಳಾದ ಬ್ಯಾರಿ ವಿಲ್ಮೋರ್(Barry Wilmore) ಹಾಗೂ ಸುನೀತಾ ವಿಲಿಯಮ್ಸ್(Sunitha Williams) ಇನ್ನು ಮರಳಿ ಭೂಮಿಗೆ ಬರುವುದು 2025ರ ಫೆಬ್ರವರಿಯಲ್ಲಿ ಎಂದು ನಾಸಾ ತಿಳಿಸಿದೆ.
ಹೌದು, ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ 52 ದಿನವಾದರೂ ಭೂಮಿಗೆ ಮರಳಿಲ್ಲ. ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಸಹೋದ್ಯೋಗಿ ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ, ಸುನಿತಾ ವಿಲಿಯನ್ಸ್ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ಬಾಹ್ಯಾಕಾಶ ನೌಕೆಯಲ್ಲಿ ಬಹುತಾಂತ್ರಿಕ ಸಮಸ್ಯೆ ಉಂಟಾಗಿದೆ. ಹೀಗಾಗಿ ಈ ಸಮಸ್ಯೆಗಳೆಲ್ಲವನ್ನು ಸರಿಪಡಿಸಿದ ಬಳಿಕವಷ್ಟೇ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ವಾಪಸ್ ಭೂಮಿಗೆ ಬರಲು ಸಾಧ್ಯ. ಸಧ್ಯಕ್ಕೆ ಈ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಬಾಹ್ಯಾಕಾಶ ನೌಕೆ ಬೋಯಿಂಗ್ ಸ್ಟಾರ್ ಲೈನರ್ ನಲ್ಲಿನ ತಾಂತ್ರಿಕ ಸಮಸ್ಯೆ ಬಗೆಹರಿದ ಬಳಿಕ 2025ರ ಫೆಬ್ರವರಿಯಲ್ಲಿ ಈ ಇಬ್ಬರೂ ಗಗನಯಾತ್ರಿಗಳು ಭೂಮಿಗೆ ಮರಳಬಹುದು ಎಂದು ತಿಳಿಸಿದೆ.
ಏನಿದು ಎದುರಾದ ಸಮಸ್ಯೆ?
ಬೋಯಿಂಗ್ ಸ್ಟಾರ್‌ಲೈನರ್‌ನ ಗಗನಯಾತ್ರಿಗಳ ಪರೀಕ್ಷಾ ಮಿಷನ್ ಬಾಹ್ಯಾಕಾಶದಲ್ಲಿ ಕೇವಲ 8 ದಿನಗಳ ಯೋಜನೆ ಆಗಿತ್ತು. ಆದರೀಗ ಸ್ಟಾರ್‌ಲೈನರ್‌ನ ಪ್ರೊಪಲ್ಶನ್ ಸಿಸ್ಟಮನ್‌ನಲ್ಲಿ ಆದ ಸಮಸ್ಯೆಯಿಂದಾಗಿ ಇದು ಭೂಮಿಗೆ ಯಶಸ್ವಿಯಾಗಿ ಮರಳುವುದು ಅನುಮಾನ ಎನ್ನಲಾಗಿದೆ. ಹಾಗೇನಾದರೂ ವಾಪಾಸ್ ಆದಲ್ಲಿ ಆಗಸದ ಮಧ್ಯೆಯೇ ಸುಟ್ಟು ಭಸ್ಮವಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್‌ಲೈನರ್‌ನ ಕಾರ್ಯಾಚರಣೆಯನ್ನು ಬದಲಾಯಿಸಲು ನಾಸಾ ನಿರ್ಧರಿಸಿದರೆ, ಕಂಪನಿಯು “ಸ್ಟಾರ್‌ಲೈನರ್ ಅನ್ನು ಸಿಬ್ಬಂದಿಯಿಲ್ಲದ ಹಿಂತಿರುಗಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ಬೋಯಿಂಗ್ ವಕ್ತಾರ ಹೇಳಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಕಳೆದ ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಜೂನ್ 6 ರಂದು ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. 5 ಥ್ರಸ್ಟರ್‌ಗಳಲ್ಲಿ ದೋಷ ಕಂಡುಬಂದಿದೆ. ಬಟ್ ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದಿದ್ದು ಅವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಗಗನನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ.
ನಾಸಾ ಹೇಳಿದ್ದೇನು?
ಇವರಿಬ್ಬರು ಒಂದೇ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಬರೋದಿಲ್ಲ. ಬೇರೆ ಬೇರೆ ಬಾಹ್ಯಾಕಾಶ ನೌಕೆಯಲ್ಲಿ ಅವರು ಮರಳಬಹುದು ಎಂದುಸ ನಾಸಾ ತಿಳಿಸಿದ್ದು, ಈ ನೌಕೆ ಸ್ಟಾರ್‌ಲೈನರ್ ಆಗಿರುವುದು ಕೂಡ ಅನುಮಾನ ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಅಲ್ಲಿಯವರೆಗೂ ಸ್ಟಾರ್‌ಲೈನರ್ ನೌಕೆಯನ್ನು ಬಳಸಿಕೊಂಡು ಭೂಮಿಗೆ ವಾಪಾಸ್ ಆಗೋದು ಅಸುರಕ್ಷಿತ ಎಂದು ಪರಿಗಣಿಸಿದರೆ, ಈ ಇಬ್ಬರು ಗಗನಯಾತ್ರಿಗಳು 2025ರ ಫೆಬ್ರವರಿಯಲ್ಲಿ ಸ್ಪೇಸ್ ಎಕ್ಸ್‌ನ ಕ್ರ್ಯೂ ಡ್ರ್ಯಾಗನ್ ಮೂಲಕ ಭೂಮಿಗೆ ಮರಳಬಹುದು ಎಂದು ತಿಳಿಸಿದೆ.
ಅಲ್ಲದೆ ಕಮರ್ಷಿಯಲ್ ಕ್ರ್ಯೂ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ನೀಡಿರುವ ಮಾಹಿತಿ ಪ್ರಕಾರ, ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಬುಚ್ ಮತ್ತು ಸುನಿತಾ ಅವರನ್ನು ಮರಳಿ ತರುವುದು NASAದ ಪ್ರಮುಖ ಆಯ್ಕೆ ಆಗಿದೆ. ಆದರೆ ನಾಸಾ ಸ್ಪೇಸ್‌ಎಕ್ಸ್ ಕ್ರ್ಯೂ-9 ಮಿಷನ್ ಉಡಾವಣೆ ವಿಳಂಬ ಆಗಲಿದೆ. ಸೆಪ್ಟೆಂಬರ್ 25ಕ್ಕೆ ಉಡವಾಣೆ ಆಗಲಿದ್ದು, ಆ ಮೂಲಕ ಇಬ್ಬರನ್ನೂ ವಾಪಸ್ ಕರೆತರಲು ಯೋಜಿಸಲಾಗಿದೆ ಎಂದಿದ್ದಾರೆ. 2025ರ ವೇಳೆಗೆ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ತರುವುದು ನಮ್ಮ ಗುರಿ. ನೂತನವಾಗಿ ಉಡಾವಣೆ ಮಾಡುತ್ತಿರುವ ನೌಕೆಯಲ್ಲಿ ಇಬ್ಬರು ಗಗನಯಾನಿಗಳು ಹೋಗಲಿದ್ದಾರೆ. 2025 ಫೆಬ್ರವರಿಯಲ್ಲಿ ನಾಲ್ಕು ಸಿಬ್ಬಂದಿ ವಾಪಸ್ ಆಗಲಿದ್ದಾರೆ ಎಂದಿದ್ದಾರೆ.
cheap ventolin uk: Ventolin inhaler best price – cheap ventolin inhaler
how much is a ventolin
buy 10 mg prednisone: fast shipping prednisone – prednisone 10 mg online
Rybelsus 7mg: Buy semaglutide pills – rybelsus
best online pharmacies in mexico: mexican pharmacy – mexican online pharmacies prescription drugs
medication from mexico pharmacy: medication from mexico pharmacy – mexican border pharmacies shipping to usa