Relationship: ಗಂಡ ದಪ್ಪಗಿದ್ದಾನೆಂದು, ದೈಹಿಕ ಸಂಪರ್ಕಕಕ್ಕೆ ಗಂಡನಿಂದ ಶುಲ್ಕ ಕೇಳಿದ ಪತ್ನಿ! ಆಮೇಲೆ ಆಗಿದ್ದೆ ಬೇರೆ?
Relationship: ಪತಿ ಪತ್ನಿ ಅಂದಮೇಲೆ ಸಾವಿರಾರು ವಿಷಯಗಳಲ್ಲಿ ಕಾಂಪ್ರೊಮೈಸ್ ಆಗೋದು ಇದ್ದೇ ಇದೆ. ಒಂದು ವೇಳೆ ಕಾಂಪ್ರೊಮೈಸ್ ಕಂಡೀಷನ್ ಆಗಿ ಬದಲಾದ್ರೆ ಹೇಗಿರುತ್ತೆ ಅನ್ನೋದು ಇಲ್ನೋಡಿ. ಹೌದು, ಇಲ್ಲಿ ಒಂದು ಜೋಡಿ ಮದುವೆಯಾಗಿ ಇಬ್ಬರು ಮಕ್ಕಳಾಗಿದೆ. ಆದರೆ ಗಂಡ ತುಂಬಾ ದಪ್ಪಗಿದ್ದಾನೆ ಎಂದು ಪತ್ನಿ ರಾತ್ರಿ ವೇಳೆ ಸೆಕ್ಸ್‌ಗೆ ಫೀಸ್ ಕೇಳಿದ ಘಟನೆ ನಡೆದಿದೆ. ಆಮೇಲೆ ಏನಾಯ್ತು ಅನ್ನೋದು ನೀವೇ ನೋಡಿ.
ಈ ಜೋಡಿಗಳು ಮದುವೆಯಾದ ಮೂರು ವರ್ಷದಲ್ಲಿ 2 ಮಕ್ಕಳೂ ಆಗಿದೆ. ಆದರೆ ಮೂರನೇ ವರ್ಷದಿಂದ ಪತ್ನಿ ಒಂದೊಂದೆ ಕಂಡೀಷನ್ ಹಾಕಿದ್ದಾಳೆ. ಮೂರನೇ ವರ್ಷದಲ್ಲಿ ತಿಂಗಳಿಗೆ ಒಂದು ಬಾರಿ ಮಾತ್ರ ದೈಹಿಕ ಸಂಪರ್ಕ ಎಂದು ಕಂಡೀಷನ್ ಹಾಕಿದ್ದಾಳೆ. ಗಂಡ ಒಪ್ಪಿಕೊಂಡಿದ್ದಾನೆ. ಆದರೆ ಕೆಲ ದಿನಗಳಲ್ಲೇ ಕಂಡೀಷನ್ ಬದಲಾಗಿದೆ, ತಿಂಗಳಿಗೊಮ್ಮೆ ದೈಹಿಕ ಸಂಪರ್ಕ (Relationship) ಹೊಂದಲು ಶುಲ್ಕ ನೀಡಬೇಡು ಎಂದು ಷರತ್ತು ಹಾಕಿದ್ದಾಳೆ. ಅಂದರೆ ಒಂದು ರಾತ್ರಿ ಜೊತೆ ಸೇರಲು 15 ಅಮೆರಿಕನ್ ಡಾಲರ್ ಹಣ ಕೇಳಿದ್ದಾಳೆ. ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 1259 ರೂಪಾಯಿ. ಯಾಕಂದ್ರೆ ಪತಿ ದಢೂತಿ ಅನ್ನೋ ಕಾರಣಕ್ಕೆ ರಾತ್ರಿ ಜೊತೆ ಸೇರಲು ಶುಲ್ಕ ಕೇಳಿದ್ದಾಳೆ. ಕೊನೆಗೆ ದಿನೇ ದಿನೇ ಪತ್ನಿಯ ಹೊಸ ಹೊಸ ಕಂಡೀಷನ್‌ಗೆ ಬೇಸತ್ತ ಪತಿ, ಕಾಂಪ್ರೊಮೈಸ್ ಬಿಟ್ಟು ಡಿವೋರ್ಸ್ ಪಡೆದುಕೊಂಡ ಘಟನೆ ತೈವಾನ್‌ನಲ್ಲಿ ನಡೆದಿದೆ.
ಮಾಹಿತಿ ಪ್ರಕಾರ, 2014ರಲ್ಲಿ ಇವರ ಮದುವೆಯಾಗಿದೆ. ಬಳಿಕ ಇಬ್ಬರು ಮಕ್ಕಳು ಆಗಿದೆ. 2017ರಲ್ಲಿ ತಿಂಗಳಿಗೊಮ್ಮೆ ಸೇರಬೇಕು ಅನ್ನೋ ಷರತ್ತು ವಿಧಿಸಿದ್ದಾಳೆ. 2019ರ ವೇಳೆ ಸಂಭೋಗ ಸಂಪೂರ್ಣ ನಿರಾಕರಿಸಿದ್ದಾಳೆ. 2021ರಲ್ಲಿ ಪತಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಈ ವೇಳೆ ಇನ್ನುಮುಂದೆ ಹೀಗೆ ಮಾಡುವುದಿಲ್ಲ ಎಂದು ಗಂಡನಲ್ಲಿ ಕ್ಷಮೆ ಕೇಳಿ ಅತ್ತಿದ್ದಾಳೆ. ಹೆಂಡತಿಯ ಡ್ರಾಮಾ ನೋಡಿ ಅರ್ಜಿ ವಾಪಸ್ ಪಡೆದ ಪತಿಗೆ ಮತ್ತೇ ಶಾಕ್ ಕಾದಿತ್ತು.
ಹೌದು, ಅರ್ಜಿ ವಾಪಸ್ ಪಡೆದ ಬೆನ್ನಲ್ಲೇ ಪತ್ನಿಯ ವರಸೆ ಬದಲಾಗಿದೆ. ರಾತ್ರಿ ಜೊತೆ ಸೇರಲು ಮತ್ತೇ ಶುಲ್ಕ ಕೇಳಲು ಆರಂಭಿಸಿದ್ದಾಳೆ. ತಮಾಷೆಯಾಗಿ ಕೇಳಿದ್ದಾಳೆ ಎಂದು ಮುಂದುವರಿದರೆ ಪತ್ನಿ ಕೆಂಡಾಮಂಡಲವಾಗಿದ್ದಾಳೆ. 15 ಅಮೆರಿಕನ್ ಡಾಲರ್ ನೀಡಿದರೆ ಮಾತ್ರ ಜೊತೆ ಸೇರಲು ಅವಕಾಶ ಎಂದಿದ್ದಾಳೆ. ಹಾಗಂತ ಪ್ರತಿ ದಿನ ಫೀಸ್ ನೀಡಿ ಜೊತೆ ಸೇರುವ ಅವಕಾಶವಿಲ್ಲ ಎಂದು ಮತ್ತೊಂದು ಷರತ್ತು ವಿಧಿಸಿದ್ದಾಳೆ.
ಹೀಗಾಗಿ ಎರಡನೇ ಬಾರಿ ಪತಿ ಡಿವೋರ್ಸ್ ಅರ್ಜಿ ಹಾಕಿದ್ದಾನೆ. ಈ ವೇಳೆ ಪತ್ನಿ ವಿಚ್ಚೇಧನ ನೀಡಲು ನಿರಾಕರಿಸಿದ್ದಾಳೆ. ಹೀಗಾಗಿ ವಿಚಾರಣೆ ಆರಂಭಗೊಂಡಿದೆ. ಈ ವೇಳೆ ಪತಿ ಆರೋಪಿಸಿದ ವಿಚಾರಗಳಿಗೆ ಹಲವು ದಾಖಲೆಗಳನ್ನು ಒದಗಿಸಿದ್ದಾನೆ. ಕೊನೆಗೆ ವಿಚಾರಣೆ ನಡೆಸಿದ ಕೋರ್ಟ್ ಪತಿಗೆ ಡಿವೋರ್ಸ್ ಮಂಜೂರು ಮಾಡಿದೆ. ಕೊನೆಗೂ ಆತನಿಗೆ ಪತ್ನಿಯಿಂದ ಮುಕ್ತಿ ದೊರಕಿದೆ.