Light: ಭ್ರಮೆಯ ಬದುಕಲ್ಲೊಂದು ಬೆಳಕು ಭ್ರಮೆಗಳ ಮುಸುಕನ್ನು ಹೋಗಲಾಡಿಸಿ, ನಿಜವಾದ ಬೆಳಕಿನತ್ತ ಸಾಗಿ

ಮುಂದುವರೆದಭಾಗ

Light: ಈ ಪ್ರಪಂಚದಲ್ಲಿ ಬ್ರಹ್ಮತತ್ವ 5 ಮುಖ್ಯವಾದ ಶಕ್ತಿಗಳಾಗಿ ವಿಂಗಡಣಗೊಂಡಿದೆ, ಅದುವೇ ಪಂಚಭೂತಗಳಾದ ಅಗ್ನಿ, ವಾಯು, ಆಕಾಶ, ಭೂಮಿ ಹಾಗು ಜಲ. ನಮ್ಮ ದೇಹದಲ್ಲಿ ಈ ಪಂಚಭೂತಗಳು ಪಂಚೇಂದ್ರಿಯಗಳಾಗಿವೆ. ಈ ಪಂಚೇಂದ್ರಿಯಗಳು, ಐದು ಜ್ಞಾನೇಂದ್ರಿಯ (-ಕಣ್ಣು, ಕಿವಿ, ಮೂಗು, ನಾಲಿಗೆ ಹಾಗು ಚರ್ಮ) ಹಾಗೂ ಐದು ಕರ್ಮೇಂದ್ರಿಯಗಳಾಗಿ (-ವಾಕ್, ಪಾಣಿ, ಪಾದ, ಪಾಯು ಮತ್ತು ಉಪಸ್ಥ)ವಿಂಗಡಣಗೊಂಡಿದೆ. ಜ್ಞಾನೇಂದ್ರಿಯ ವಿಷಯವನ್ನು ಗ್ರಹಿಸುತ್ತದೆ ಮತ್ತು ಕರ್ಮೇಂದ್ರಿಯಗಳು ಕೆಲಸಗಳನ್ನು ಮಾಡುತ್ತದೆ. ಒಬ್ಬ ಯೋಗಿಯು ತನ್ನ ಕರ್ಮೇಂದ್ರಿಯಗಳನ್ನು ನಿಯಂತ್ರಿಸುವಮುನ್ನ ಜ್ಞಾನೇಂದ್ರಿಯಗಳನ್ನು ನಿಯಂತ್ರಿಸುತ್ತಾನೆ. ಮಾಹಿತಿಯು ಕಣ್ಣುಗಳಿಗೆ ತಲುಪಿದರೆ ಸಾಕು, ಅಲ್ಲಿಂದಲೇ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.

ಧ್ವನಿಗಳು ಕಿವಿಗೆ ತಲುಪಿದರೆ ಸಾಕು, ಆಹಾರವನ್ನು ನಿಮ್ಮ ನಾಲಿಗೆಯಲ್ಲಿಟ್ಟರೆ ಸಾಕು, ಏನನ್ನಾದರೂ ಮುಟ್ಟಿದರೆ ಸಾಕು, ವಾಸನೆ ಮೂಗಿಗೆ ತಲುಪಿದರೆ ಸಾಕು, ಪ್ರಕ್ರಿಯೆಗಳು ಪ್ರಾರಂಭವಾಗುತ್ತದೆ. ಆದರಿಂದ ನಾವು ಧ್ಯಾನಕ್ಕಾಗಿ ಮೌನವಾಗಿರುವ ಮತ್ತು ಅಡೆತಡೆಯಿಲ್ಲದ ಸ್ಥಳವನ್ನು ಆರಿಸಿಕೊಳ್ಳಬೇಕು. ಅದಕ್ಕಾಗಿಯೇ ಯೋಗಿಗಳು ಮೌನವಾದ ಸ್ಥಳದಲ್ಲಿ ಧ್ಯಾನಿಸುತ್ತಾರೆ. ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಎಲ್ಲರೂ ಸ್ವಲ್ಪ ಸಮಯವಾದರೂ ಧ್ಯಾನಕ್ಕೆ ಕುಳಿತು ಮೌನದತ್ತ ಗಮನ ಹರಿಸಬೇಕು. ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳನ್ನು ಸ್ವಂತ ಸಾಮರ್ಥ್ಯ, ಸ್ವಅರಿವಿನ ಮೂಲಕ ಮುಚ್ಚಬೇಕು.

ಹೀಗೆ ಒಬ್ಬ ಮನುಷ್ಯನು ಅರಿಷಡ್ವರ್ಗಗಳಾದ ಕಾಮ, ಕ್ರೋದ, ಲೋಭ, ಮೋಹ, ಮದ, ಮತ್ಸರಗಳ ಸೆಳೆತದಿಂದ ಪಾರಾಗಿ ಗುರುತ್ವಾಕರ್ಷಣೆಯಿಂದ ಹೊರಬರುತ್ತಾನೆ. ಇದನ್ನೇ ‘ಶೂನ್ಯತೆ’ ಎಂದು ಕರೆಯಲಾಗುತ್ತದೆ. ಹಾಗೂ ಇದನ್ನು ಯೋಗಿಗಳು ‘ಸ್ಥೂಲದಿಂದ ಸೂಕ್ಷ್ಮ ಕ್ಕೆ ಹೋಗುವ ಪ್ರಕ್ರಿಯೆ’ ಎಂದು ಕರೆಯುತ್ತಾರೆ. ಸ್ಥೂಲದಿಂದ (ಭೌತಿಕ ರೂಪ, ಮನಸ್ಸು ಅಥವ ಜಡ) ಸೂಕ್ಷ್ಮಕ್ಕೆ (ನಿರಾಕಾರ) ಹಿಂತಿರುಗಿ ಬರುವ ವಿಧಾನವನ್ನು ಧ್ಯಾನವೆಂದು ಕರೆಯಲಾಗುತ್ತದೆ. ಇದನ್ನು ಸಾಧಿಸುವುದರಿಂದ, ಪ್ರಾಪಂಚಿಕ ಜಗತ್ತಿನಲ್ಲಿ ಬಾಳುತ್ತಿದ್ದರೂ, ಆತ್ಮ ತತ್ವದ ಉತ್ತುಂಗವನ್ನು ತಲುಪಬಹುದು. ಇದುವೇ ಯೋಗಿಗಳ ಸ್ಥಿತಿಯಾಗಿದೆ”

ಮಾಯೆ ಎಂಬುದು ಹೊರಜಗತ್ತಿನಲ್ಲಿಲ್ಲದೆ, ಮನಸ್ಸೆಂಬ ಒಳ ಜಗತ್ತಿನಲ್ಲಿ ಅಡಗಿದೆ. ಶ್ರೀ ಗುರುಗಳು ತಮ್ಮ ಪ್ರವಚನದಲ್ಲಿ, ಹೇಗೆ ನಮ್ಮ ಜೀವನವನ್ನು ಗೆಲ್ಲಬಹುದು ಎಂಬುದನ್ನು ಸರಳವಾಗಿ ಉದ್ಗರಿಸಿದ್ದಾರೆ. ಪ್ರಶ್ನೆಗಳ ನಿಶೆಯಲ್ಲಿ ಉತ್ತರದತ್ತ ಸೆಳೆದು, ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುವ ‘ಧ್ರುವತಾರೆಗೆ’ ಕೋಟಿ ಕೋಟಿ ನಮನ.

ಬರಹ: ಸೌದಾಮಿನಿ ಎಂ ವಿ

Leave A Reply

Your email address will not be published.