RBI New Rule: ಆರ್​​ಬಿಐ ನಿಯಮದಲ್ಲಿ ಬದಲಾವಣೆ! ಕ್ಯಾಷ್ ವಿತ್​ಡ್ರಾ ಮಾಡುವಲ್ಲಿ ಹೊಸ ರೂಲ್ಸ್ ಅಪ್ಲೈ

Share the Article

RBI New Rule: ಸೈಬರ್ ಕಳ್ಳರು ಬ್ಯಾಂಕುಗಳಲ್ಲಿ ನಗದು ವಹಿವಾಟುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಘಟನೆಗಳನ್ನು ತಡೆಯಲು ಆರ್​ಬಿಐ ಕೆಲವು ಹೊಸ ನಿಯಮ (RBI New Rule) ಜಾರಿಗೆ ತಂದಿದೆ. ಹೌದು, ಬ್ಯಾಂಕುಗಳಲ್ಲಿನ ಕ್ಯಾಷ್ ಪೇ ಇನ್ ಮತ್ತು ಕ್ಯಾಷ್ ಪೇ ಔಟ್ ನಿಯಮದಲ್ಲಿ ಬದಲಾವಣೆ ತರಲಾಗಿದೆ.

ಅಂದರೆ ಇನ್ಮುಂದೆ ಬ್ಯಾಂಕಿಗೆ ಹೋಗಿ ಕ್ಯಾಷ್ ಪೇ ಔಟ್ ಪಡೆಯಲು ಅಥವಾ ಬ್ಯಾಂಕ್ ಖಾತೆಯೊಂದಕ್ಕೆ ನಗದು ಹಣ ಜಮೆ ಮಾಡಲು ಬ್ಯಾಂಕ್​ಗಳು ನಗದು ಹಣ ಸ್ವೀಕರಿಸುವ ವ್ಯಕ್ತಿಯ ಕೆವೈಸಿ ದಾಖಲೆಗಳನ್ನು ಪಡೆಯಬೇಕಾಗುತ್ತದೆ. ಕ್ಯಾಷ್ ಡೆಪಾಸಿಟ್ ಮಾಡುವವರ ವಿವರವನ್ನೂ ಬ್ಯಾಂಕುಗಳು ಪಡೆಯುವುದು ಅವಶ್ಯಕವಾಗಿದೆ. ಇವರೆಲ್ಲರ ವಿವರಗಳನ್ನು ಬ್ಯಾಂಕುಗಳು ಪ್ರತ್ಯೇಕ ದಾಖಲೆಯಲ್ಲಿ ಇಟ್ಟುಕೊಂಡಿರಬೇಕು. ಹಾಗಂತ ಆರ್​ಬಿಐ ಜುಲೈ 24 ರಂದು ನಿಯಮ ಹೊರಡಿಸಿದೆ.

ಕ್ಯಾಷ್ ಪೇ ಔಟ್ ಕೊಡುವ ಬ್ಯಾಂಕುಗಳು ಹಣ ಸ್ವೀಕರಿಸುವ ವ್ಯಕ್ತಿಯ ವಿಳಾಸವನ್ನು ಪಡೆಯುವುದು ಕಡ್ಡಾಯ. ಹಾಗೆಯೇ, ಕ್ಯಾಷ್ ಪೇ ಇನ್ ಸಂದರ್ಭದಲ್ಲಿ ನಗದು ಹಣವನ್ನು ಡೆಪಾಸಿಟ್ ಮಾಡುವ ವ್ಯಕ್ತಿಯ ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ ನೊಂದಣಿ ಮಾಡಬೇಕಾಗುತ್ತದೆ. 2016ರಲ್ಲಿ ರೂಪಿಸಲಾದ ಕೆವೈಸಿ ಮಾರ್ಗಸೂಚಿ ಪ್ರಕಾರ ಸ್ವ ಘೋಷಿತ ಒವಿಡಿ ಅಥವಾ ಅಧಿಕೃತ ದಾಖಲೆಯನ್ನೂ ಈ ನೊಂದಣಿಯಲ್ಲಿ ಬಳಸಬೇಕಾಗುತ್ತದೆ.

ಇದರ ಜೊತೆಗೆ, ಬ್ಯಾಂಕ್ ಖಾತೆಯೊಂದಕ್ಕೆ ಕ್ಯಾಷ್ ಡೆಪಾಸಿಟ್ ಮಾಡುವ ವ್ಯಕ್ತಿಯಿಂದ ಹೆಚ್ಚುವರಿ ದೃಢೀಕರಣ ಪಡೆಯಬೇಕಾಗುತ್ತದೆ. ಇವೆಲ್ಲಾ ಪರಿಷ್ಕೃತ ನಿಯಮಗಳು ನವೆಂಬರ್​ ಒಂದರಿಂದಲೇ ಚಾಲನೆಗೆ ಬರಲಿವೆ ಎನ್ನಲಾಗಿದೆ. ಇದರಿಂದಾಗಿ ಕ್ಯಾಷ್ ಪಡೆಯುವ ವ್ಯಕ್ತಿಯ ವಿವರಗಳು, ಕ್ಯಾಷ್ ಡೆಪಾಸಿಟ್ ಮಾಡುವ ವ್ಯಕ್ತಿಯ ವಿವರಗಳನ್ನು ಬ್ಯಾಂಕ್​ಗಳು ಪಡೆದಿಟ್ಟುಕೊಳ್ಳುವುದರಿಂದ ಕ್ಯಾಷ್ ವಹಿವಾಟು ದುರ್ಬಳಕೆಯನ್ನು ತಡೆಯಬಹುದು.

Leave A Reply