Home Health Ginger Tea: ಶುಂಠಿ ಚಹಾ ಕುಡಿಯೋ ಮೊದಲು ಈ ವಿಷ್ಯ ತಿಳಿಯಿರಿ!

Ginger Tea: ಶುಂಠಿ ಚಹಾ ಕುಡಿಯೋ ಮೊದಲು ಈ ವಿಷ್ಯ ತಿಳಿಯಿರಿ!

Ginger Tea

Hindu neighbor gifts plot of land

Hindu neighbour gifts land to Muslim journalist

Ginger Tea: ಶುಂಠಿಯು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಒಂದು ಆಯುರ್ವೇದಿಕ್ ಗಿಡಮೂಲಿಕೆಯಾಗಿದೆ. ಆದರೆ ಅತಿಯಾದ ಶುಂಠಿಯ ಬಳಕೆಯು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಅದು ಹೇಗೆಂದು ನಿಮಗೆ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಸಾಕಷ್ಟು ಜನ ​ಚಳಿಗಾಲ ಹಾಗು ಮಳೆಗಾಲದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಅಥವಾ ಸಂಜೆ ಯಾವುದೇ ಸಮಯದಲ್ಲಿ ಬೇಕಾದರೂ ಶುಂಠಿ ಚಹಾ ಇಷ್ಟ ಪಟ್ಟು ಕುಡಿಯುತ್ತಾರೆ. ಶುಂಠಿ ಚಹಾ (Ginger Tea) ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಿಜ. ಆದರೆ ಕೆಲವರು ಶುಂಠಿ ಚಹಾವನ್ನು ಕುಡಿಯಲೇಬಾರದು ಒಂದು ವೇಳೆ ನೀವು ಅದನ್ನು ಕುಡಿದರೂ ಕಡಿಮೆ ಪ್ರಮಾಣದಲ್ಲಿ ಕುಡಿಯಿರಿ.

ಬೇಸಿಗೆಯಲ್ಲಿ ಶುಂಠಿಯನ್ನು ತಿನ್ನುವುದನ್ನು ತಪ್ಪಿಸಬೇಕು​. ಯಾಕೆಂದರೆ ​ಬೇಸಿಗೆ ವಾತಾವರಣದಲ್ಲಿ ಬಿಸಿ ಪದಾರ್ಥಗಳನ್ನು ಕುಡಿಯುವುದರಿಂದ ದೇಹಕ್ಕೆ ಶಾಖ ಹೆಚ್ಚುತ್ತದೆ. ಶುಂಠಿಯು ಸ್ವಭಾವತಃ ಬಿಸಿಯಾಗಿರುತ್ತದೆ, ಆದರೆ ಬೇಸಿಗೆಯಲ್ಲಿ ಇದನ್ನು ತಿನ್ನುವುದರಿಂದ ಅನೇಕ ದೈಹಿಕ ಸಮಸ್ಯೆಗಳು ಉಂಟಾಗುತ್ತವೆಯೇ? ಶುಂಠಿಯ ಅತಿಯಾದ ಸೇವನೆಯಿಂದ ದೇಹದಲ್ಲಿ ಉಂಟಾಗುವ ಕೆಲವು ಸಮಸ್ಯೆಗಳ ಬಗ್ಗೆ ಇಲ್ಲಿದೆ.

ಶುಂಠಿ ಅತಿಯಾಗಿ ಸೇವಿಸುವುದರಿಂದ ಹೊಟ್ಟೆಯ ಕಿರಿಕಿರಿ, ಆಮ್ಲ ರಚನೆ, ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗಬಹುದು. ಆದರೆ ಶುಂಠಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆಯುಬ್ಬರ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಶುಂಠಿಯು ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿದೆ. ಆದರೆ ಅದರ ಅತಿಯಾದ ಸೇವನೆಯು ರಕ್ತ ಹೆಪ್ಪುಗಟ್ಟುವಿಕೆಯ ಮೇಲೆ ಪರಿಣಾಮ ಬೀರುತ್ತದೆ.

ನೀವು ಹೆಚ್ಚು ಶುಂಠಿಯನ್ನು ಸೇವಿಸಿದರೆ ಬಾಯಿ ಹುಣ್ಣಿನ ಸಮಸ್ಯೆಯು ನಿಮ್ಮನ್ನು ಕಾಡಬಹುದು. ಆದ್ದರಿಂದ, ಶುಂಠಿಯನ್ನು ಸಾಧ್ಯವಾದಷ್ಟು ಸೀಮಿತ ಪ್ರಮಾಣದಲ್ಲಿ ಸೇವಿಸಿ.

ಆಹಾರದಲ್ಲಿ ಅತಿಯಾದ ಶುಂಠಿಯನ್ನು ಸೇರಿಸುವುದು ಇನ್ಸುಲಿನ್ ಮಟ್ಟವನ್ನು ಅಡ್ಡಿಪಡಿಸಬಹುದು. ಈ ಕಾರಣದಿಂದಾಗಿ, ಅತಿಯಾದ ಸೇವನೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಇದ್ದಕ್ಕಿದ್ದಂತೆ ಕಡಿಮೆಯಾಗಬಹುದು.