Bantwala: ಗ್ಯಾಸ್‌ ಸಾಗಾಟದ ಲಾರಿಯಲ್ಲಿದ್ದ ಸಿ.ಎನ್.ಜಿ ಗ್ಯಾಸ್‌ ಸೋರಿಕೆ

Share the Article

Bantwala: ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಸಿ.ಎನ್‌.ಜಿ ಗ್ಯಾಸ್‌ ಸೋರಿಕೆ ಉಂಟಾದ ಘಟನೆಯೊಂದು ಬಂಟ್ವಾಳದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಕೊಪ್ಪ ಎಂಬಲ್ಲಿ ಈ ಘಟನೆ ನಡೆದಿದ್ದು, ಮಂಗಳೂರಿನಿಂದ ಬೆಳ್ತಂಗಡಿಗೆ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಢ ಸಂಭವಿಸಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಲಿದೆ ಎಂದು ವರದಿಯಾಗಿದೆ.

ಇಂದು (ಜೂನ್‌ 21) ಬೆಳಗ್ಗೆ ಮಂಗಳೂರಿನಿಂದ ಬೆಳ್ತಂಗಡಿ ಪೆಟ್ರೋಲ್‌ ಪಂಪ್‌ಗೆ ಲಾರಿಯಲ್ಲಿ ಸಾಗಾಟ ಮಾಡುತ್ತಿದ್‌ ಸಿ.ಎನ್‌.ಜಿ ಗ್ಯಾಸ್‌ ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಕೊಪ್ಪ ಎಂಬಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಲಾರಿ ಚಾಲಕ ಲಾರಿಯನ್ನು ಪಕ್ಕಕ್ಕೆ ಹಾಕಿ ಬಟ್ಟೆಯ ಮೂಲಕ ಗ್ಯಾಸ್‌ ಸೋರಿಕೆ ತಡೆಯಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ.

ಅನಂತರ ರಸ್ತೆಯಲ್ಲಿ ಬರುತ್ತಿದ್ದ ಕಾರಿನವರು ಕೂಡಾ ಪ್ರಯತ್ನಪಟ್ಟರೂ ಗ್ಯಾಸ್‌ ಸೋರಿಕೆಯಿಂದ ಉಸಿರಾಟ ಸಮಸ್ಯೆ ಆಗಿದ್ದು, ಅಲ್ಲಿಂದ ಹೋಗಿದ್ದಾರೆ.

ಹೆಚ್ಚಿನ ಮಾಹಿತಿ ಅಪ್ಡೇಟ್‌ ಆಗಲಿದೆ

Asia Cup 2024: ಟೀಂ ಇಂಡಿಯಾದಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಹೊರಕ್ಕೆ

Leave A Reply