Uttara Pradesh ಹೀನಾಯ ಸೋಲಿಗೆ ಕೊನೆಗೂ ಕಾರಣ ಹುಡುಕಿದ ಬಿಜೆಪಿ !! ಏನಿದೆ ಹೈಕಮಾಂಡ್ ಕೈ ಸೇರಿದ ಆ ರಹಸ್ಯ ವರದಿಯಲ್ಲಿ ?!
Uttara Pradesha: ಲೋಕಸಭಾ ಚುನಾವಣೆಯಲ್ಲಿ(Parliament Election) ಬಿಜೆಪಿ(BJP) ಒಂದು ಹಂತಕ್ಕೆ ಮಕಾಡೆ ಮಲಗಿದೆ. ಬಿಜೆಪಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಉತ್ತರ ಪ್ರದೇಶ(Uttar Pradesh) ಎಂದೇ ಹೇಳಬಹುದು. ಸುಮಾರು 80 ರಷ್ಟು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಈ ಹಿಂದೆ ಎರಡು ಬಾರಿ ಬಿಜೆಪಿ 70ಕ್ಕೂ ಅಧಿಕ ಸ್ಥಾನ ಗೆದ್ದು ಜಯಭೇರಿ ಬಾರಿಸಿತ್ತು. ಆದರೆ ಈ ಸಲ ಕೇವಲ 30ರ ಆಸುಪಾಸಿನಲ್ಲಿ ತೃಪ್ತಿ ಪಟ್ಟುಕೊಂಡಿದೆ. ಆದರೆ ಇಲ್ಲಿನ ಹೀನಾಯ ಸೋಲಿಗೆ ಕಾರಣಗಳೇನು ಎಂಬುದು ಪ್ರಶ್ನೆ ಯಾಗಿತ್ತು. ಆದರೀಗ ಬಿಜೆಪಿ ಕೊನೆಗೂ ತನ್ನ ಸೋಲಿನ ಕಾರಣ ಹುಡುಕಿದೆ.
ಹೌದು, ಉತ್ತರ ಪ್ರದೇಶದಲ್ಲಿನ ಬಿಜೆಪಿ(BJP) ಸೋಲು ದೇಶದ ಜನತೆಗೆ ಒಂದು ರೀತಿ ದೊಡ್ಡ ಆಶ್ಚರ್ಯ ಉಂಟುಮಾಡಿದೆ. ಆದರಲ್ಲೂ ರಾಮಮಂದಿರ ನಿರ್ಮಾಣ ಮಾಡಿದ ಸ್ಥಳ ಅಯೋಧ್ಯೆ(Ayodhya) ಇರುವ ಲೋಕಸಭಾ ಕ್ಷೇತ್ರ ಫೈಜಾಬಾದ್(Faizabad) ಸೋಲಂತೂ ಅರಗಿಸಿಕೊಳ್ಳದಾದು. ಇದುವರೆಗೂ ಬಿಜೆಪಿ ಇಲ್ಲಿನ ಸೋಲಿನ ಪರಾಮರ್ಶೆಯಲ್ಲಿ ತೊಡಗಿತ್ತು, ಆತ್ಮಾವಲೋಕನ ಮಾಡುತ್ತಾ ಸೋಲಿಗೆ ಕಾರಣ ಹುಡುಕುತಿತ್ತು. ಅಂತೇಯೆ ಇದೀಗ ಕೊನೆಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದಕ್ಕೆ ಕಾರಣ ಪತ್ತೆ ಮಾಡಲಾಗಿದ್ದು, ಹೈಕಮಾಂಡ್ಗೆ ರಹಸ್ಯ ವರದಿಯನ್ನು ಸಲ್ಲಿಕೆ ಮಾಡಿದೆ. ಹಾಗಿದ್ರೆ ಬಿಜೆಪಿ ಕಂಡುಕೊಂಡ ಕಾರಣವೇನು? ಹೈಕಮಾಂಡ್ ಕೈ ಸೇರಿದ ಆ ರಹಸ್ಯ ವರದಿಯಲ್ಲಿ ಇರೋದೇನು?
ಉತ್ತರ ಪ್ರದೇಶದಲ್ಲಿನ ಸೋಲಿಗೆ BJP ಕೊಟ್ಟ ಕಾರಣಗಳು:
1: ಈ ಬಾರಿ ಕುರ್ಮಿ, ಮೌರ್ಯ ಸಮುದಾಯ ಬಿಜೆಪಿಗೆ ಬೆಂಬಲಿಸಿಲ್ಲ.
2: ಕಳೆದ ಚುನಾವಣೆಗೆ ಹೋಲಿಸಿದ್ರೆ ಶೇ.8ರಷ್ಟು ಮತ ಕುಸಿತವಾಗಿದೆ.
3: ಬಿಎಸ್ಪಿ ಮತ ಪ್ರಮಾಣದಲ್ಲಿಯೂ ಶೇ.10ರಷ್ಟು ಕುಸಿತವಾಗಿದೆ.
4 : ದಲಿತರ 3ನೇ ಒಂದರಷ್ಟು ಮತಗಳನ್ನ ಮಾತ್ರ ಬಿಜೆಪಿ ಪಡೆದುಕೊಂಡಿದೆ.
5 : ಅಧಿಕಾರಿಗಳ ವರ್ತನೆ ಸರ್ಕಾರ, ಪಕ್ಷದ ಮೇಲೆ ಪರಿಣಾಮ ಬೀರಿದೆ.
6: ಎಲ್ಲರಿಗಿಂತ ಮೊದಲೇ ಟಿಕೆಟ್ ಘೋಷಣೆ ಮಾಡಿದ್ದು ತಪ್ಪಾಗಿದೆ..!
7: ಟಿಕೆಟ್ ಸಿಗದವರು ಪ್ರಚಾರದಿಂದ ಸಂಪೂರ್ಣವಾಗಿ ದೂರವಾದ್ದರು.
8: ಅಗತ್ಯಕ್ಕಿಂತ ಮೊದಲೇ ಬಿಜೆಪಿ ಪ್ರಚಾರಗಳು ಮುಗಿದು ಹೋಗಿದ್ದವು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲೆ ಜನ ಕೋಪಗೊಳ್ಳಲು ಕಾರಣಗಳು:
1: ಸರ್ಕಾರಿ ಹುದ್ದೆಗಳ ಪರೀಕ್ಷೆ ಪೇಪರ್ ಪದೇ ಪದೇ ಲೀಕ್ ಆಗಿರುವುದು.
2: ಅಗ್ನಿಪಥ್ ಯೋಜನೆ ವಿರುದ್ಧ ಯುಪಿಯಲ್ಲಿ ಅಸಮಾಧಾನ..!
3 : ಬಿಜೆಪಿ ನಾಯಕರ ಸಂವಿಧಾನ ಬದಲಾವಣೆ ಹೇಳಿಕೆಗಳಿಂದ ಜನರಿಗೆ ಬೇಸರ.
4 : ಹಳೇ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರ ಬೆಂಬಲ ನೀಡಲಿಲ್ಲ.
5 : ಸರ್ಕಾರದ ಕಾರ್ಯವೈಖರಿ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಬೇಸರವಾಗಿದೆ.
ಅಂದಹಾಗೆ ಇತ್ತೀಚೆಗೆ ಉತ್ತರ ಪ್ರದೇಶದ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ(Bhoopendra Choudhary )ಅವರು ಜೆ ಪಿ ನಡ್ಡಾ(J P Nadda) ಅವರನ್ನ ಪ್ರತ್ಯೇಕವಾಗಿ ಭೇಟಿ ಮಾಡಿ ಲೋಕಸಭಾ ಚುನಾವಣಾ ಸೋಲಿನ ಬಗ್ಗೆ ಚರ್ಚೆ ಮಾಡಿದ್ದಾರೆ. ಇದಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ, ಉತ್ತರ ಪ್ರದೇಶ ಸೋಲಿನ ಬಗ್ಗೆ ಸೀಕ್ರೆಟ್ ವರದಿಯೊಂದನ್ನ ಹೈಕಮಾಂಡ್ಗೆ ನೀಡಿದ್ದಾರೆ. 15 ಪುಟಗಳ ವರದಿಯಲ್ಲಿ ಉತ್ತರ ಪ್ರದೇಶದ ಹಿನ್ನಡೆಗೆ ಕಾರಣವನ್ನ ಪಟ್ಟಿ ಮಾಡಿದ್ದಾರೆ ಎನ್ನಲಾಗಿದೆ.