Gauri Lankesh: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ; ಆರೋಪಿಗಳಿಗೆ ಜಾಮೀನು ಮಂಜೂರು
Gauri Lankesh: ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಘಟನೆಗೆ ಸಂಬಂಧಪಟ್ಟಂತೆ ಗೌರಿ ಲಂಕೇಶ್ ಅವರನ್ನು ಹತ್ಯೆಗೈದು ಜೈಲು ಸೇರಿದ್ದ ಮೂವರು ಆರೋಪಿಗಳಿಗೆ ಆರು ವರ್ಷದ ನಂತರ ಜಾಮೀನು ಮಂಜೂರು ಮಾಡಲಾಗಿದೆ.
ಗೌರಿ ಲಂಕಶ್ ಕೊಲೆ ಪ್ರಕರಣದಲ್ಲಿ ಎ5 ಅಮಿತ್ ದಿಗ್ವೇಕರ್, ಎ17 ಕೆ.ಟಿ.ನವೀನ್ ಕುಮಾರ್, ಎ7 ಹೆಚ್.ಎಲ್. ಸುರೇಶ್ ಗೆ ಜಾಮೀನು ನೀಡಿ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಈ ಹಿಂದೆ ಎ 11 ಮೋಹನ್ ನಾಯಕ್‌ಗೆ ಜಾಮೀನು ಮಂಜೂರಾಗಿತ್ತು.
ಆರೋಪಿಗಳ ಜಾಮೀನು ಅರ್ಜಿಯನ್ನು ಸೋಮವಾರ ವಿಚಾರಣೆ ಮಾಡಿದ ಏಕಸದಸ್ಯ ಪೀಠ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಆರು ವರ್ಷದ ಬಳಿಕ ಜೈಲಿನಿಂದ ಹೊರಬರಲಿದ್ದು, ಇನ್ನು ಜಾಮೀನು ಮಂಜೂರು ಮಾಡಿದ ನಂತರ ನ್ಯಾಯಾಲಾಯ ಕೆಲವು ಷರತ್ತುಗಳನ್ನು ವಿಧಿಸಿದೆ.
ಇಂದು ಜಾಮೀನು ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಆರೋಪಿಗಳು ಸಂಜೆ ವೇಳೆ ಜೈಲಿನಿಂದ ಹೊರಬರುವ ಸಾಧ್ಯತೆಯಿದೆ.