Home Health Urinary tract infection: ಸಂಭೋಗದ ಬಳಿಕ ಶುಚಿತ್ವ ಕಾಪಾಡಿಕೊಳ್ಳದವರ ಗಮನಕ್ಕೆ! ತಪ್ಪದೇ ಈ ಮಾಹಿತಿ ತಿಳಿಯಿರಿ

Urinary tract infection: ಸಂಭೋಗದ ಬಳಿಕ ಶುಚಿತ್ವ ಕಾಪಾಡಿಕೊಳ್ಳದವರ ಗಮನಕ್ಕೆ! ತಪ್ಪದೇ ಈ ಮಾಹಿತಿ ತಿಳಿಯಿರಿ

Urinary tract infection

Hindu neighbor gifts plot of land

Hindu neighbour gifts land to Muslim journalist

Urinary Tract Infection: ಬಹುತೇಕರಿಗೆ ಪದೇ ಪದೇ ಮೂತ್ರನಾಳ ಸೋಂಕು ಕಂಡುಬರುತ್ತದೆ. ಸಾಮಾನ್ಯವಾಗಿ ಮೂತ್ರದ ಸೋಂಕು ಅಥವಾ ಯೂರಿನರಿ ಟ್ರ್ಯಾಕ್ ಇನ್ಫೆಕ್ಷನ್ ಎಂದು ಹಾಸ್ಪಿಟಲ್ ಸುತ್ತುವ ಬದಲು, ನಾನಾ ರೀತಿಯ ಮಾತ್ರೆ, ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ಈ ಮಾಹಿತಿ ಖಂಡಿತವಾಗಿ ತಿಳಿಯಿರಿ. ಹೌದು, ಮೂತ್ರನಾಳದ ಸೋಂಕು (Urinary Tract Infection) ಬರದಂತೆ ತಡೆಯಲು ಅನೇಕ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ಹಿಮ್ಮೆಟ್ಟಿಸಬಹುದು.

ಮೂತ್ರ ನಾಳ ಸೋಂಕು ಸಮಸ್ಯೆ ಬರದೇ ಇರಲು ಮೂತ್ರ ಮಾಡಿದ ಬಳಿಕ ಸರಿಯಾಗಿ ಸ್ವಚ್ಛ ಮಾಡಬೇ.ಕು ಇನ್ನು ಲೈಂಗಿಕ ಕ್ರಿಯೆ ಬಳಿಕ ಶುಚಿತ್ವ ಕಾಪಾಡಿಕೊಳ್ಳಬೇಕು ಜೊತೆಗೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯಬೇಕು. ಪದೇ ಪದೇ ಸಾರ್ವಜನಿಕ ಶೌಚಾಲಯ ಬಳಕೆ ಮಾಡಬಾರದು ಎಂದು ತಜ್ಞರು ಹೇಳುತ್ತಾರೆ.

ಸೋಂಕು  ನಿವಾರಣೆ ಮಾಡಲು ಎಳನೀರು ಸೇವಿಸಿ. ಇದು ಮೂತ್ರಕೋಶದಲ್ಲಿ ಸೋಂಕನ್ನು ನಿವಾರಿಸಿ ಮೂತ್ರ ಸರಿಯಾಗಿ ಹೋಗುವಂತೆ ಮಾಡುತ್ತದೆ. ಅಲ್ಲದೆ ದೇಹವನ್ನು ತಂಪಾಗಿಡಲು ಎಳನೀರು ಸಹಾಯ ಮಾಡುತ್ತದೆ. ಹಾಗಾಗಿ ಸೋಂಕು ಕಂಡುಬಂದಲ್ಲಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಎಳನೀರನ್ನು ಕುಡಿಯಿರಿ.

ಮೂತ್ರದ ಸೋಂಕು ಕಂಡು ಬಂದವರು ಹೆಚ್ಚು ಮಾಂಸ, ಮೊಟ್ಟೆ, ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಆದಷ್ಟು ಸೇವನೆ ಮಾಡಬೇಡಿ. ಇನ್ನು ಹೆಚ್ಚು ಉಪ್ಪು ಅಥವಾ ಖಾರ ಇರುವ ಮಸಾಲೆ ಪದಾರ್ಥಗಳು, ಉಪ್ಪಿನಕಾಯಿ ಸೇವನೆ ಮಾಡದಿರುವುದು ಒಳ್ಳೆಯದು.

ಕೊತ್ತಂಬರಿ ನೀರು, ಥೈರಾಯ್ಡ್ ಸಮಸ್ಯೆಯಿಂದ ಹಿಡಿದು ಮೂತ್ರದ ಸಮಸ್ಯೆವರೆಗೂ ಪರಿಹಾರ ನೀಡುವಲ್ಲಿ ಅತ್ಯುತ್ತಮ ಮದ್ದಾಗಿದೆ. ಜೊತೆಗೆ ಮುಟ್ಟಿನ ದಿನಗಳಲ್ಲಿ ಕಾಡುವ ನೋವಿಗೂ ಇದು ರಾಮಬಾಣವಾಗಿದೆ. ಎರಡು ಚಮಚ ಕೊತ್ತಂಬರಿ ಬೀಜವನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ದಿನಕ್ಕೆ ಮೂರು ನಾಲ್ಕು ಬಾರಿ ಸೇವಿಸಿ. ಇದರಿಂದಲೂ ಮೂತ್ರದ ಸೋಂಕು ನಿವಾರಣೆಯಾಗುತ್ತದೆ.

ಅಕ್ಕಿ ತೊಳೆದ ನೀರು ಕೂಡ ಮೂತ್ರ ನಾಳ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ನೀವು ಮನೆಯಲ್ಲಿ ಬಳಸುವ ಅಕ್ಕಿ ಅಥವಾ ಕೆಂಪು ಅಕ್ಕಿಯನ್ನು2-3 ಬಾರಿ ಚೆನ್ನಾಗಿ ತೊಳೆದು, ಸ್ವಲ್ಪ ನೀರನ್ನು ಹಾಕಿ ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ಅದನ್ನು ಕುಡಿಯಿರಿ. ಈ ನೀರನ್ನು ದಿನದಲ್ಲಿ ಯಾವಾಗ ಬೇಕಾದರೂ ಸೇವಿಸಬಹುದು.

ಇನ್ನು ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಒಮ್ಮೆಯಾದರೂ ಬಾಳೆದಿಂಡಿನ ಜ್ಯೂಸ್ ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದು. ಇದರಿಂದ ಯುರಿನ್ ಇನ್ಫೆಕ್ಷನ್ ಕಡಿಮೆಯಾಗುತ್ತದೆ. ಅಲ್ಲದೆ ಪಿರಿಯಡ್ಸ್ ಸಮಯದಲ್ಲಿ ಬರುವ ಹೊಟ್ಟೆ ನೋವು ಕೂಡ ಕಡಿಮೆಯಾಗುತ್ತದೆ.

Assault: ಬಸ್ಸಿನಲ್ಲಿ ಅನ್ಯಕೋಮಿನ ವ್ಯಕ್ತಿಯಿಂದ ಬಾಲಕಿಗೆ ಲೈಂಗಿಕ ಕಿರುಕುಳ; ಮಹಿಳೆಯರಿಂದ ಧರ್ಮದೇಟು ತಿಂದ ಪ್ರಯಾಣಿಕ