Bangalore: ಸುಲಿಗೆ, ಬೆದರಿಕೆ ಪ್ರಕರಣ; ನಿರೂಪಕಿ ದಿವ್ಯಾ ವಸಂತ ಕೇರಳದಲ್ಲಿ ಬಂಧನ
Bangalore: ಇಡೀ ರಾಜ್ಯವೇ ಖುಷಿ ಪಡೋ ಸುದ್ದಿಯಿದು ಎಂದು ಹೇಳಿ ಕಹಿ ಸುದ್ದಿಯಲ್ಲಿ ಫೇಮಸ್ ಆದ, ಬ್ಲ್ಯಾಕ್‌ಮೇಲ್ ಮಾಡಿ ಹಲವು ಕಡೆ ಸುಲಿಗೆ ಮಾಡಿರುವ ಆರೋಪ ಹೊತ್ತಿರುವ ನಿರೂಪಕಿ ದಿವ್ಯವಸಂತ ಬಂಧನವಾಗಿದೆ. ಈಕೆಯನ್ನು ಬೆಂಗಳೂರಿನ ಜೀವನ್ ಭೀಮಾನ ಪೊಲೀಸರು ಬಂಧನ ಮಾಡಿದ್ದಾರೆ.
ಇಂದಿರಾನಗರದಲ್ಲಿರುವ ಸ್ಪಾ ಮಾಲೀಕನಿಗೆ ಬೆದರಿಕೆ ಕರೆ ಮಾಡಿ, ಹಣ ಸುಲಿಗೆ ಮಾಡಿದ ಪ್ರಕರಣ ಇತ್ತೀಚೆಗೆ ನಡೆದಿದ್ದು, ಇದರಲ್ಲಿ ದಿವ್ಯ ವಸಂತನ ತಮ್ಮ ಬಂಧನವಾಗಿದ್ದು, ವೆಂಕಟೇಶ್ ಬಂಧನವಾಗಿದ್ದು, ದಿವ್ಯಾ ವಸಂತ ಪರಾರಿಯಾಗಿ ತಲೆಮರೆಸಿಕೊಂಡಿದ್ದಳು.
ದಿವ್ಯ ವಸಂತ ಕೇರಳದಲ್ಲಿ ಇರುವ ಕುರಿತು ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಒಂದು ವಾರದಿಂದ ನಾಪತ್ತೆಯಾಗಿದ್ದ ದಿವ್ಯ ವಸಂತ ತಮಿಳುನಾಡಿನಿಂದ ಕೇರಳದಲ್ಲಿ ಹೋಗಿ ಸೇರಿಕೊಂಡಿದ್ದು, ಸದ್ಯ ಪೊಲೀಸರು ಇದೀಗ ಕೇರಳದಿಂದ ಬಂಧಿಸಿ ಕರೆತಂದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.