Bharath Shetty: ʼರಾಹುಲ್ ಗಾಂಧಿ ಕೆನ್ನೆಗೆ ಬಾರಿಸಬೇಕಿತ್ತು ಅನ್ನಿಸುತಿದೆʼ- ಶಾಸಕ ಡಾ. ವೈ ಭರತ್ ಶೆಟ್ಟಿ ಆಕ್ರೋಶ
Bharath Shetty: ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಮಾತನಾಡಿದ ಶಾಸಕ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ” ಅವನು ಹಿಂದೂ ವಿರೋಧಿ ನೀತಿ ಅನುಸರಿಸುತ್ತಾನೆ. ಅವನ ಹೇಳಿಕೆ ಗಮನಿಸಿದರೆ ಅವನೊಬ್ಬ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ. ಪಾರ್ಲಿಮೆಂಟ್ ಒಳಗೆ ಹೋಗಿ ರಾಹುಲ್ ಗಾಂಧಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
BPL Card: ನೀವೇನಾದರೂ ಈ ಸೌಲಭ್ಯ ಹೊಂದಿದ್ದರೆ ಬಿಪಿಎಲ್ ಕಾರ್ಡ್ ರದ್ದು; ಸರಕಾರದಿಂದ ಖಡಕ್ ಆದೇಶ
ಹಿಂದೂಗಳು ಹಿಂಸಾವಾದಿಗಳೆನ್ನುತ್ತಾನೆ. ಶಿವನ ಫೋಟೋ ಬೇರೆ ಹಿಡಿದು ನಿಂತಿದ್ದ. ಆದರೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗುತಾನೆ ಎಂಬುವುದು ಆ ಹುಚ್ಚನಿಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಹಿಂದೂ ಹಿಂದುತ್ವ ಇದು ಬೇರೆ ಬೇರೆ ಥಿಯರಿ ಎಂದು ಹೇಳಲು ಹೊರಟಿದ್ದಾರೆ. 99 ಸೀಟು ಗೆದ್ದು ಸಾಧನೆ ಮಾಡಿದವರ ರೀತಿ ಮಾತನಾಡುತ್ತಾನೆ. ಶಿವಾಜಿ, ರಾಣಾ ಪ್ರತಾಪ್ ಇಲ್ಲೇ ಹುಟ್ಟಿದವರು. ನಮಗೆ ಎಲ್ಲಿ ಶಸ್ತ್ರ ತೆಗಿಬೇಕೋ ಅಲ್ಲಿ ತೆಗಿತೇವೆ. ಶಸ್ತ್ರ ಪೂಜೆ ಮಾಡಿ ಉತ್ತರ ನೀಡಲು ನಮಗೆ ಗೊತ್ತಿದೆ.
ಈತ ತಮಿಳುನಾಡಿಗೆ ಹೋದಾಗ ನಾಸ್ತಿಕ ಆಗುವುದು, ಕೇರಳಕ್ಕೆ ಹೋದಾಗ ಸೆಕ್ಯುಲರ್ ಆಗುವುದು, ಗುಜರಾತ್ ಗೆ ಹೋದಾಗ ಶಿವಭಕ್ತನಾಗುವುದು. ಇವನೊಬ್ಬ ಹುಚ್ಚ ಎಂದು ರಾಹುಲ್ ಗಾಂಧಿ ಯನ್ನು ಲೇವಡಿ ಮಾಡಿದರು.
Save on stylish Marc Jacobs pieces at the marc jacobs factory outlet online.