Misbehaving: ಕಾಮುಕನ ಹಿಂಸೆಗೆ ರೋಸಿ ಹೋಗಿದ್ದ ಮಹಿಳೆಯರು! ಕೊನೆಗೂ ಬಲೆಗೆ ಸಿಕ್ಕಿಕೊಂಡ ಭೂಪ!

Share the Article

Misbehaving: ಇಲ್ಲೊಬ್ಬ ಕಾಮುಕ ಭೂಪ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಅವರನ್ನು ಫಾಲೋ ಮಾಡೋದು, ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸೋದು ಮಾಡುತ್ತಿದ್ದ. ಆದ್ರೆ ಮಹಿಳೆಯರು ಜೋರಾಗಿ ಕಿರುಚಿತ್ರ ಗಲಾಟೆ ಮಾಡಿದ್ರೆ ಕೂಡಲೇ ಓಡಿ ಹೋಗಿ ಮಾಯವಾಗುತ್ತಿದ್ದ. ಈ ಯುವಕನಿಗೆ ಇದೇ ಚಾಲಿಯಾಗಿತ್ತು. ಒಟ್ಟಿನಲ್ಲಿ ಊರಿನ ಮಹಿಳೆಯರಿಗೆ ನೆಮ್ಮದಿಯೇ ಇರಲಿಲ್ಲವಂತೆ.

Karwar:‌ ಹೆಚ್ಚಿದ ವರುಣನ ಅಬ್ಬರ; ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್

ಹೌದು, ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದಲ್ಲಿ ಮಾವಿನಹಳ್ಳಿ ಮಂಜು ಎಂಬ ಕಾಮುಕನ ಹಿಂಸೆ ಯಿಂದ ಸದ್ಯ ಮುಕ್ತಿ ಸಿಕ್ಕಿದೆ. ಇದೀಗ ಮಹಿಳೆಯರ ಜೊತೆ ಅಸಭ್ಯವಾಗಿ (Misbehaving) ವರ್ತಿಸುತ್ತಿದ್ದ ಯುವಕನಿಗೆ ಊರಿನ ಜನ ಹಿಡಿದು ಧರ್ಮದೇಟು ನೀಡಿರುವ ಘಟನೆ ನಡೆದಿದೆ.

ಮಂಜು ಎಂಬಾತ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವ ಮಹಿಳೆಯರನ್ನು ದಾರಿ ಮಧ್ಯೆ ಅಡ್ಡ ಹಾಕಿ ಹಿಂಸೆ ಮಾಡುತ್ತಿದ್ದ. ಒಂದು ವೇಳೆ ಮಹಿಳೆಯರು ಗಲಾಟೆ ಮಾಡಿ ಜನ ಸೇರಿಸಿದಾಗ ನಾಪತ್ತೆಯಾಗುತ್ತಿದ್ದ.  ಈತನಿಗಾಗಿ ಊರಿನ ಯುವಕರು ಎಲ್ಲೆಡೆ ಹುಡುಕಾಡುತ್ತಿದ್ದರು. ಅಲ್ಲದೆ ಬಹುತೇಕ ಮಹಿಳೆಯರಿಗೆ ಮುಖ ತೋರಿಸದೆ ಹಿಂದಿನಿಂದ ಹೋಗಿ ಅಸಭ್ಯವಾಗಿ ವರ್ತಿಸಿ ಕಾಫಿತೋಟದ ಒಳಗೆ ಓಡಿಹೋಗುತ್ತಿದ್ದ. ಕೊನೆಗೂ ಈ ಭೂಪನನ್ನು ಉಪಾಯದಿಂದ ಹಿಡಿದು ಊರಿನ ಜನ ಧರ್ಮದೇಟು ನೀಡಿದ್ದಾರೆ.

ಸದ್ಯ ಕಾಫಿತೋಟದಲ್ಲಿ ಅವಿತು ಕುಳಿತಿದ್ದ ಈ ಕಾಮುಕನನ್ನು ಕರೆತಂದು ರಸ್ತೆ ಮಧ್ಯೆಯೇ ಹಿಗ್ಗಾಮುಗ್ಗಾ ಥಳಿಸಿ ಆಲ್ದೂರು ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದಾರೆ.

Karnataka Police Transfer: ಪೊಲೀಸ್‌ ವರ್ಗಾವಣೆಯಲ್ಲಿ ಮಹತ್ತರ ಬದಲಾವಣೆ-ಹಲವು ನಿಯಮ ಜಾರಿ

Leave A Reply