Karnataka Police Transfer: ಪೊಲೀಸ್‌ ವರ್ಗಾವಣೆಯಲ್ಲಿ ಮಹತ್ತರ ಬದಲಾವಣೆ-ಹಲವು ನಿಯಮ ಜಾರಿ

Share the Article

Karnataka Police Transfer: ಮಂಗಳವಾರ ರಾತ್ರಿಯಷ್ಟೇ 25 ಜನ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಇದೀಗ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಕುಮಾರ್‌ ಅವರು ಮುಂಬಡ್ತಿ ಪಡೆದು ವರ್ಗಾವಣೆಯಾದ ಅಧಿಕಾರಿಗಳಿಗೆ ಹಲವು ನಿಯಮಗಳನ್ನು ಅನುಸರಿಸುವಂತೆ ಆದೇಶಿಸಿದ್ದಾರೆ. ಇನ್ನು ಮುಂದೆ ಪ್ರಮೋಷನ್‌ ಪಡೆದ ಅಧಿಕಾರಿಗಳು ಪುನರ್‌ ಮನನ ತರಬೇತಿಗೆ ಹಾಜರಾಗುವುದು ಕಡ್ಡಾಯ. ಇದು ಕರ್ನಾಟಕ ಪೊಲೀಸ್‌ ವರ್ಗಾವಣೆಯಲ್ಲಿ ಮಹತ್ತರ ಬದಲಾವಣೆ.

ರಾಜ್ಯದ ಪೊಲೀಸ್‌ ತರಬೇತಿ ಘಟಕಗಳಲ್ಲಿ ಒಂದು ತಿಂಗಳ ಕಾಲ ತರಬೇತಿ ನೀಡಲಾಗುವುದ. ಬಡ್ತಿ ಪಡೆದ ಎರಡು ವರ್ಷದ ಅಂತರದಲ್ಲಿ ಈ ತರಬೇತಿ ಕಡ್ಡಾಯ. ಕಮಿಷನರೇಟ್‌ ವ್ಯಾಪ್ತಿಯಲ್ಲಿ ಇನ್ನು ಮುಂದೆ 10 ವರ್ಷಗಳ ಕೆಲಸ ಇರಲಿದೆ. ಇದು ಡಿವೈಎಸ್‌ಪಿ ಹಾಗೂ ಇನ್ಸ್‌ಪೆಕ್ಟರ್‌ ಹಂತದ ಅಧಿಕಾರಿಗಳಿಗೆ ಅನ್ವಯವಾಗುವ ರೀತಿಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಇಲಾಖಾ ತನಿಖೆ ಏನಾದರೂ ಅಧಿಕಾರಿಗಳ ಮೇಲೆ ಇದ್ದರೆ ಮುಂಬಡ್ತಿ ನೀಡಲಾಗುವುದಿಲ್ಲ. ಐದು ವರ್ಷ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೆಲಸ ಮಾಡಿದರೆ ಉಳಿದ ಐದು ವರ್ಷ ಕೂಲಿಂಗ್‌ ಅವಧಿ ಮಾಡಬೇಕಾಗುತ್ತದೆ ಎಂದು ಟಿವಿ9 ಮಾಧ್ಯಮ ವರದಿ ಮಾಡಿದೆ.

Karwar:‌ ಹೆಚ್ಚಿದ ವರುಣನ ಅಬ್ಬರ; ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್

 

Leave A Reply