Prajwal Revanna Case: 4 ತಿಂಗಳಿಗೊಮ್ಮೆ ಎಚ್‌ಐವಿ ಟೆಸ್ಟ್‌ ಮಾಡಿಸುತ್ತಿದ್ದ ಪ್ರಜ್ವಲ್‌; ತನಿಖೆಯಲ್ಲಿ ವಿಚಾರ ಬಹಿರಂಗ

Share the Article

Prajwal Revanna Case: ಹಾಸನ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣದ ಕುರಿತು ದಿನಕ್ಕೊಂದು ಮಾಹಿತಿ ಹೊರ ಬರುತ್ತಿದೆ. ಈ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಪ್ರತೀ ನಾಲ್ಕು ತಿಂಗಳಿಗೊಮ್ಮೆ ಎಚ್‌ಐವಿ ಪರೀಕ್ಷೆ ಮಾಡುತ್ತಿದ್ದರು ಎಂಬ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ ಎಂದು ವರದಿಯಾಗಿದೆ.

Sandalwood: ನಾಳೆ ಇಬ್ಬರು ಸ್ಯಾಂಡಲ್‌ವುಡ್‌ ನಟರ ಭವಿಷ್ಯ ತೀರ್ಮಾನ

ಪ್ರಜ್ವಲ್‌ ಹಲವು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ಎಂಬ ಆರೋಪಕ್ಕೆ ಇದೊಂದು ಪುಷ್ಠಿ ನೀಡಿದಂತಾಗಿದೆ.

ಲೈಂಗಿಕ ದೌರ್ಜನ್ಯದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ಅವರ ಕುರಿತು ಕೆಲವೊಂದು ವಿಷಯಗಳನ್ನು ಕೆದಕಿದಾಗ ಈ ವಿಚಾರ ಮುನ್ನಲೆಗೆ ಬಂದಿದೆ.

ತಾಂತ್ರಿಕ ಸಾಕ್ಷ್ಯದ ಜಾಡು ಹಿಡಿದು ಹೋದ ಎಸ್‌ಐಟಿ ಅಧಿಕಾರಿಗಳಿಗೆ ಇದೀಗ ಪ್ರಜ್ವಲ್‌ ನಾಲ್ಕು ತಿಂಗಳಿಗೊಮ್ಮೆ ಎಚ್‌ಐವಿ ಪರೀಕ್ಷೆ ನಡೆಸುತ್ತಿದ್ದ ಎಂಬ ಸಂಗತಿ ಕಂಡು ಬಂದಿದೆ.

ಕೆಲವು ಮಹಿಳೆಯರು ತಮ್ಮ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು, ವಿವಿಧ ಆಮಿಷವೊಡ್ಡಿ ಪ್ರಜ್ವಲ್‌ ರೇವಣ್ಣ ಜೊತೆ ಆತ್ಮೀಯರಾಗಿದ್ದರು. ಕೆಲವು ಸವಲತ್ತುಗಳನ್ನು ಪ್ರಜ್ವಲ್‌ ತಾವು ನುಡಿದಂತೆ ಅವರಿಗೆ ಕಲ್ಪಿಸಿಕೊಟ್ಟಿರುವ ಆರೋಪ ಕೂಡಾ ಕೇಳಿ ಬಂದಿದೆ.

Husband – wife: ಪತ್ನಿ ಗರ್ಭಿಣಿಯಾದಳೆಂದು ತಲೆಗೆ ಶೂಟ್ ಮಾಡ್ಕೊಂಡ ಗಂಡ! ಅಷ್ಟಕ್ಕೂ ಕಾರಣ ಏನು ಗೊತ್ತಾ?

Leave A Reply