Home News Husband – wife: ಪತ್ನಿ ಗರ್ಭಿಣಿಯಾದಳೆಂದು ತಲೆಗೆ ಶೂಟ್ ಮಾಡ್ಕೊಂಡ ಗಂಡ! ಅಷ್ಟಕ್ಕೂ ಕಾರಣ ಏನು...

Husband – wife: ಪತ್ನಿ ಗರ್ಭಿಣಿಯಾದಳೆಂದು ತಲೆಗೆ ಶೂಟ್ ಮಾಡ್ಕೊಂಡ ಗಂಡ! ಅಷ್ಟಕ್ಕೂ ಕಾರಣ ಏನು ಗೊತ್ತಾ?

Husband - wife

Hindu neighbor gifts plot of land

Hindu neighbour gifts land to Muslim journalist

Husband – wife: ಪತ್ನಿ ಗರ್ಭಿಣಿಯಾದ್ರೆ ಗಂಡನಿಗೆ ಅದೊಂದು ಹಬ್ಬವೇ ಸರಿ. ಒಂದು ವೇಳೆ ಖುಷಿಯಲ್ಲಿ ಆತ ಕುಣಿದು ಕುಪ್ಪಳಿಸಿದರು ಅದರಲ್ಲಿ ಆಶ್ಚರ್ಯವಿಲ್ಲ. ಆದ್ರೆ ಇಲ್ಲೊಬ್ಬ ಭೂಪ ಪತ್ನಿ ಗರ್ಭಿಣಿಯಾದ ವಿಷಯ ಕೇಳಿದ ಕೂಡಲೇ ತನ್ನ ಹಣೆಗೆ ಶೂಟ್ ಮಾಡ್ಕೊಂಡ ವಿಚಿತ್ರ ಘಟನೆ ಭರತಪುರ ಜಿಲ್ಲೆಯ ಉಚ್ಚೈನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

Football: ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಅಂತ್ಯಕ್ರಿಯೆಯನ್ನು ನಿಲ್ಲಿಸಿದ ಕುಟುಂಬ; ವಿಡಿಯೋ ವೈರಲ್

ಹೌದು, ರಾಜಸ್ಥಾನದ ಭರತಪುರ (Bharathpur, Rajasthan) ಜಿಲ್ಲೆಯಲ್ಲಿ ಸೋನು ಹೆಸರಿನ ಯುವಕನೋರ್ವ ಹಣೆಗೆ ಶೂಟ್ ಮಾಡಿಕೊಂಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಈತ ಶೂಟ್ ಮಾಡಿಕೊಂಡ ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರಿಂದ ಯುವಕ (Youth) ಬದುಕುಳಿದಿದ್ದಾನೆ. ಸದ್ಯ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸದ್ಯ ಪೊಲೀಸ್ ವಿಚಾರಣೆಯಲ್ಲಿ ಪತ್ನಿ ಗರ್ಭಿಣಿಯಾಗಿದ್ದು, ಸೋನುಗೆ ಖುಷಿ ತಂದಿರಲಿಲ್ಲ. ಹಾಗಾಗಿ ಶೂಟ್ ಮಾಡಿಕೊಂಡೆ ಎಂದು ಸೋನು ತನ್ನ ಹೇಳಿಕೆಯನ್ನು ದಾಖಲಿಸಿದ್ದಾನೆ.

ಮಾಹಿತಿ ಪ್ರಕಾರ, ಒಂದು ವರ್ಷದ ಹಿಂದೆ ಸೋನು ಮದುವೆ ರೇಖಾ ಎಂಬಾಕೆ ಜೊತೆ ಆಗಿತ್ತು. ಆದ್ರೆ ಮದುವೆ ಬಳಿಕ ವೈವಾಹಿಕ ಜೀವನ (Husband – wife) ಖುಷಿಯಾಗಿ ಇರಲಿಲ್ಲ. ಜೊತೆಗೆ ಸೋನುಗೆ ಪತ್ನಿ ರೇಖಾ ಕಿರುಕುಳ ನೀಡುತ್ತಿದ್ದಳು ಎಂದು ತಿಳಿದು ಬಂದಿದೆ. ಗಂಡ ಹೆಂಡತಿ ಇಬ್ಬರ ನಡುವೆ ಪದೇ ಪದೇ ಮನಸ್ತಾಪ ಉಂಟಾಗುತ್ತಿತ್ತು. ಈ ಬಗ್ಗೆ ಸೋನು ಕುಟುಂಬಸ್ಥರ ಬಳಿಯೂ ಹೇಳಿಕೊಂಡಿದ್ದನು. ಮದುವೆಯಾದ ಮೇಲೆ ಇದೆಲ್ಲಾ ಮಾಮೂಲು ಎಂದು  ಕುಟುಂಬಸ್ಥರು ವಿಷಯವನ್ನು ತಲ್ಲಿ ಹಾಕಿದ್ದಾರೆ.

ಆದರೆ ದಿನೇ ದಿನೇ ಮಾನಸಿಕವಾಗಿ ಕುಗ್ಗಿದ ಸೋನು ಕೌಟುಂಬಿಕ ಕಲಹದಿಂದ  ಪ್ರಾಣವನ್ನೇ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದನು. ಅಷ್ಟರಲ್ಲಿ ಪತ್ನಿ ಗರ್ಭಿಣಿ ಎಂಬ ವಿಷಯ ತಿಳಿದು, ಕೋಪದಿಂದ ಕೋಣೆಯೊಳಗೆ ಹೋಗಿದ್ದ. ವಿಪರ್ಯಾಸ ಅಂದರೆ ಸುಮಾರು ಆರು ತಿಂಗಳ ಹಿಂದೆ ಸೋನುಗೆ ಗ್ರಾಮದ ಹೊರವಲಯದಲ್ಲಿ ಎರಡು ಗನ್‌ಗಳು ಸಿಕ್ಕಿದ್ದವು. ಆದ್ರೆ ಈ ವಿಷಯವನ್ನು ಪೊಲೀಸರಿಗೆ ಹೇಳದೇ ಎರಡೂ ಗನ್‌ಗಳನ್ನು ತನ್ನ ಬಳಿಯಲ್ಲಿಯೇ ಇರಿಸಿಕೊಂಡಿದ್ದನು. ಇದೇ ಒಂದು ಗನ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೋಣೆಯಲ್ಲಿ ದೊಡ್ಡ ಸೌಂಡ್ ಕೇಳುತ್ತಿದ್ದಂತೆ ಕುಟುಂಬಸ್ಥರು ಒಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಸೋನು ಬಿದ್ದಿದ್ದನು. ಕೂಡಲೇ ಪೋಷಕರು ಸೋನುನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಎರಡು ಗನ್ ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.

Actor Darshan Case: ಪುಟ್ಟ ಕಂದಮ್ಮನಿಗೆ ಕೈದಿ ನಂಬರ್‌ 6106 ಫೋಟೋ ಶೂಟ್‌; ನೋಟಿಸ್‌ ಜಾರಿ