Ujire: ಬೆಳಾಲು ಕ್ರಾಸ್‌ ಹತ್ತಿರ ಡಿವೈಡರಿಗೆ ಡಿಕ್ಕಿ ಹೊಡೆದ ಬೆಂಝ್‌ ಕಾರು- ವ್ಯಕ್ತಿ ಸಾವು

Share the Article

Ujire: ಕಾಲೇಜು ರಸ್ತೆಯ ಬೆಳಾಲು ಕ್ರಾಸ್‌ ಹತ್ತಿರ ಬೆಂಝ್‌ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು, ಕಾರು ನಜ್ಜುಗುಜ್ಜಾಗಿದ್ದು, ವಾಹನ ಚಾಲಕ ಮೃತ ಹೊಂದಿರುವುದಾಗಿ  ವರದಿಯಾಗಿದೆ. ಈ ಘಟನೆ ಇಂದು (ಜೂ.29) ರ ಮುಂಜಾನೆ ನಡೆದಿದೆ.

ಗಾಯಗೊಂಡ ಚಾಲಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಕೊಂಡೊಯ್ಯುವ ಸಮಯದಲ್ಲಿ ದಾರಿ ಮಧ್ಯದಲ್ಲಿಯೇ ಮೃತ ಹೊಂದಿರುವುದಾಗಿ ತಿಳಿದು ಬಂದಿದೆ.

ಮೃತರನ್ನು  ಬೆಳ್ತಂಗಡಿಯ ಪ್ರಜ್ವಲ್‌ ಕಾಂಪ್ಲೆಕ್ಸ್‌ ಮಾಲೀಕ ಪ್ರಮೋದ್‌ ಆರ್‌ ನಾಯಕ್‌  ಅವರ ಪುತ್ರ ಪ್ರಜ್ವಲ್‌ ಎಂದು ಗುರುತಿಸಲಾಗಿದೆ.

ಚಾಲಕ ಪ್ರಜ್ವಲ್ ಅನಿಯಂತ್ರಿತ ವೇಗದಲ್ಲಿ ಬಂದು ಕಾರನ್ನು ನಿಯಂತ್ರಿಸಲಾಗದೆ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ವೇಗಕ್ಕೆ ಲೈಟು ಕಂಬಗಳು ಮುರಿದುಬಿದ್ದಿವೆ. ಬೆಂಕಿ ನಂತಹ ಅತ್ಯಂತ ಸುರಕ್ಷಿತ ವಾಹನ ಕೂಡ ಅರೆ ಬರೆ ಮುದ್ದೆಯಾಗಿದೆ.

ಪ್ರಜ್ವಲ್‌ ಅವರು ಉಜಿರೆಯ ಡಿ.ಎಂ ಗೌಡ ಕಾಂಪ್ಲೆಕ್ಸ್‌ನಲ್ಲಿ ಗೇಮಿಂಗ್‌ ಶಾಪ್‌ ಮಾಲೀಕರಾಗಿದ್ದು, ಇಂದು ಬೆಳಿಗ್ಗೆ ಅವರು ಅಲ್ಲಿಗೆ ಹೋಗುವ ಸಂದರ್ಭದಲ್ಲಿ ಈ ಭೀಕರ ಅಪಘಾತ ನಡೆದಿದೆ.

ಉಜಿರೆ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ದಾಟಿ ಧರ್ಮಸ್ಥಳ ಕಡೆ ಹೋಗುವ ಸಂದರ್ಭ ನೇರವಾದ ರಸ್ತೆಯಲ್ಲಿಯೇ ಈ ಅವಘಡ ಸoಭವಿಸದೆ. ಬಹುಶಃ ಮುಂದಕ್ಕೆ 50 ಮೀಟರ್ ಗಳ ದೂರದಲ್ಲಿ ಬೆಳಾಲ್ ಕ್ರಾಸ್ ರೋಡ್ ಇದ್ದು, ಅದಕ್ಕೆ ಮುಂಚೆಯೇ ಈ ಆಕ್ಸಿಡೆಂಟ್ ಆಗಿದೆ.

ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಅಪ್ಡೇಟ್‌ ಆಗುತ್ತಿದೆ.

 

Leave A Reply