Belthangady: ರಸ್ತೆಯಲ್ಲಿ ಸಾಗುತ್ತಿದ್ದ ವಿದ್ಯಾರ್ಥಿನಿಗೆ ವಿದ್ಯುತ್‌ ಪ್ರವಹಿಸಿ ಸಾವು; ರಕ್ಷಣೆಗೆ ತೆರಳಿದ ತಂದೆಗೂ ವಿದ್ಯುತ್‌ ಆಘಾತ

Share the Article

Belthangady: ಸ್ಟೇ ವಯರ್‌ ಗೆ ವಿದ್ಯುತ್‌ ತಂತಿ ಸ್ಪರ್ಶಿಸಿದ ಕಾರಣ ಯುವತಿಯೊಬ್ಬಳಿಗೆ ವಿದ್ಯುತ್‌ ಶಾಕ್‌ ತಗುಲಿ ಸಾವು ಸಂಭವಿಸಿದ ದುರ್ಘಟನೆಯೊಂದು ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿಬಾಜೆ ಗ್ರಾಮದಲ್ಲಿ ಇಂದು (ಜೂ.27) ರ ಸಂಜೆ ನಡೆದಿದೆ.

ಪ್ರತೀಕ್ಷಾ ಶೆಟ್ಟಿ (21) ಎಂಬಾಕೆಯೇ ಮೃತ ಯುವತಿ. ಇವರು ಶಿಬಾಜೆ ಗ್ರಾಮದ ಬರ್ಗುಳ ನಿವಾಸಿ ಗಣೇಶ್‌ ಶೆಟ್ಟಿ ಮತ್ತು ರೋಹಿಣಿ ದಂಪತಿಗಳ ಪುತ್ರಿ.

ಮನೆಯ ಸಮೀಪದ ರಸ್ತೆ ಕಡೆ ಪಾರ್ಸೆಲ್‌ ತೆಗೆದುಕೊಳ್ಳಲು ಬಂದಿದ್ದ ಪ್ರತೀಕ್ಷಾ ಈ ವೇಳೆ ರಸ್ತೆಯಲ್ಲಿ ಹರಿದಾಡುತ್ತಿದ್ದ ವಯರ್‌ ನೋಡದೇ ನೀರಿನಲ್ಲಿ ವಿದ್ಯುತ್‌ ಪ್ರವಹಿಸಿದ ಪರಿಣಾಮ ಅದನ್ನು ಸ್ಪರ್ಶಿಸಿದ್ದಾರೆ. ಕೂಡಲೇ ಅವರಿಗೆ ವಿಯುತ್‌ ಆಘಾತವಾಗಿದ್ದು, ಸ್ಥಳದಲ್ಲಿದ್ದ ತಂದೆ ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಿದರೂ ತಂದೆಗೂ ವಿದ್ಯುತ್‌ ಆಘಾತವಾಗಿದೆ.

ಸ್ಟೇ ವಯರ್‌ ಗೆ ವಿದ್ಯುತ್‌ ತಂತಿ ಸ್ಪರ್ಶಿಸಿದ ಕಾರಣ ಅದು ನೀರಿಗೆ ಹರಿದಿದೆ. ಪರಿಣಾಮ ವಿದ್ಯುತ್‌ ಶಾಕ್‌ ಹೊಡೆದಿದ್ದು, ಕೂಡಲೇ ಯುವತಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದರೂ ಯುವತಿ ಅದಾಗಲೇ ಮೃತ ಹೊಂದಿದ್ದಾಗಿ ವೈದ್ಯರು ತಿಳಿಸಿದ್ದಾರೆ.

Dakshina Kananda: ಹೆಚ್ಚಿದ ವರುಣನ ಆರ್ಭಟ; ನಾಳೆ (ಜೂ.28) ರಂದು ದ.ಕ. ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ- ಡಿಸಿ ಆದೇಶ

Leave A Reply