Bank Holidays July 2024: ಜುಲೈ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ: ಇಲ್ಲಿದೆ ಡಿಟೇಲ್ಸ್ !

Bank Holidays July 2024: ಅಧುನಿಕ ತಂತ್ರಜ್ಞಾನದ ಯುಗದಲ್ಲಿ ಎಲ್ಲಾ ಬ್ಯಾಂಕಿಂಗ್ ಸೇವೆಗಳನ್ನು ಆನ್‌ಲೈನ್‌ನಲ್ಲಿ ಸಿಗುತ್ತಿದ್ದರೂ ಸಹ ಕೆಲವು ಕೆಲಸಗಳಿಗೆ ಬ್ಯಾಂಕ್‌ಗಳಿಗೆ ಹೋಗುವುದು ಕಡ್ಡಾಯವಾಗಿದೆ. ಇದೀಗ ಬ್ಯಾಂಕ್ ಗ್ರಾಹಕರು ಅಲರ್ಟ್ ಆಗುವ ಸಲುವಾಗಿ ಈ ಒಂದು ಮಹತ್ವದ ಮಾಹಿತಿ ಇಲ್ಲಿ ತಿಳಿಸಲಾಗಿದೆ.

ಇನ್ನೇನು ಕೆಲವು ದಿನಗಳಲ್ಲಿ ಜೂನ್ ತಿಂಗಳು ಮುಗಿದು ಜುಲೈ ತಿಂಗಳು ಆರಂಭವಾಗಲಿದೆ. ಸದ್ಯ ಪ್ರತಿ ತಿಂಗಳಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ತಿಂಗಳು ಜುಲೈ ನಲ್ಲಿ (Bank Holidays July 2024) ಬ್ಯಾಂಕ್ ರಜೆ ಘೋಷಿಸಿದೆ.

ಹೌದು, ಮುಂದಿನ ತಿಂಗಳು, ಅಂದರೆ 2024ರ ಜುಲೈನಲ್ಲಿ 12 ದಿನಗಳು ಬ್ಯಾಂಕ್‌ಗಳು ಬಂದ್ ಆಗಲಿವೆ. ಒಟ್ಟು ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜಾದಿನಗಳ ಕಾರಣ ಜುಲೈ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಇರಲಿದೆ.

NEET Paper Leak: ನೀಟ್ ಪೇಪರ್ ಸೋರಿಕೆ ಪ್ರಕರಣ; 3 ಶಿಕ್ಷಕರು ಸೇರಿದಂತೆ 4 ಜನರ ವಿರುದ್ಧ ಎಫ್‌ಐಆರ್ ದಾಖಲು

ಇವುಗಳಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಇತರ ಕೆಲವು ದಿನಗಳನ್ನು ಆರ್‌ಬಿಐ ಬ್ಯಾಂಕ್ ರಜೆ ಎಂದು ಘೋಷಿಸುತ್ತದೆ. ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಕೆಲವು ರಾಷ್ಟ್ರೀಯ ರಜಾದಿನಗಳಲ್ಲಿ ಎಲ್ಲಾ ಬ್ಯಾಂಕುಗಳು ಕ್ಲೋಸ್ ಆಗಿರುತ್ತೆ. ಕೆಲವು ರಾಜ್ಯಗಳಲ್ಲಿ ಸ್ಥಳೀಯ ಹಬ್ಬಗಳ ಆಧಾರದ ಮೇಲೆ ಬ್ಯಾಂಕ್ ರಜಾದಿನಗಳನ್ನು ಹೊಂದಿವೆ.

ಜುಲೈ ತಿಂಗಳ ಬ್ಯಾಂಕ್ ರಜಾ ಪಟ್ಟಿ ಇಂತಿವೆ :

ಜುಲೈ 3: ಬೆಹ್ ದೈನ್‌ಖ್ಲಾಮ್ ಸಂದರ್ಭದಲ್ಲಿ ಶಿಲ್ಲಾಂಗ್‌ನಲ್ಲಿ ರಜೆ ಜುಲೈ 6: MHIP ದಿನದ ಸಂದರ್ಭದಲ್ಲಿ ಐಜ್ವಾಲ್‌ನಲ್ಲಿ ರಜೆ ಜುಲೈ 7: ಭಾನುವಾರ.

ಜುಲೈ 8: ಕಾಂಗ್ (ರಥಜಾತ್ರಾ) ಸಂದರ್ಭದಲ್ಲಿ ಇಂಫಾಲ್‌ನಲ್ಲಿ ರಜೆ. ಜುಲೈ 9: ದ್ರುಪ್ಕಾ ಶಿಜಿಯ ಸಂದರ್ಭದಲ್ಲಿ ಗ್ಯಾಂಗ್‌ಟಾಕ್‌ನಲ್ಲಿ ರಜೆ

ಜುಲೈ 13: ಎರಡನೇ ಶನಿವಾರ ರಾಷ್ಟ್ರೀಯ ರಜಾದಿನವಾಗಿದೆ

ಜುಲೈ 14: ಭಾನುವಾರ

ಜುಲೈ 16: ಹರೇಲಾ ಸಂದರ್ಭದಲ್ಲಿ ಡೆಹ್ರಾಡೂನ್‌ನಲ್ಲಿ ರಜೆ

ಜುಲೈ 17: ಅಗರ್ತಲಾ, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚೆನ್ನೈ, ಹೈದರಾಬಾದ್ – ಆಂಧ್ರ ಪ್ರದೇಶ, ತೆಲಂಗಾಣ, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಮೊಹರಂ/ಅಶುರಾ/ಯು ತಿರೋತ್ ಸಿಂಗ್ ದಿನದಂದು. ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ರಾಯ್ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರದಲ್ಲಿ ರಜೆ.

ಜುಲೈ 21: ಭಾನುವಾರ.

ಜುಲೈ 27: ನಾಲ್ಕನೇ ಶನಿವಾರ ರಾಷ್ಟ್ರವ್ಯಾಪಿ ರಜೆ

ಜುಲೈ 28: ಭಾನುವಾರ.

Haj Pilgrimage Death: ಪವಿತ್ರ ಹಜ್ ಯಾತ್ರೆ, ಸಾವಿನ ಸಂಖ್ಯೆ 1300ಕ್ಕೆ ಏರಿಕೆ; 98 ಭಾರತೀಯ ನಾಗರಿಕರ ಸಾವು

Leave A Reply

Your email address will not be published.