Sholay Cinema: ಬಾಲಿವುಡ್ ನ ಸೂಪರ್ ಹಿಟ್ ಶೋಲೆ ಚಿತ್ರದ ಗುಟ್ಟು ರಟ್ಟಾಗಿದೆ! ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!
Sholay Cinema: ಬಾಲಿವುಡ್ ನ (Bollywood) ಸೂಪರ್ ಹಿಟ್ ಚಿತ್ರಗಳ ಪಟ್ಟಿಯಲ್ಲಿ ಮೊದಲು ಕಾಣಿಸುವ ಶೋಲೆ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಹೌದು, ಆಗಸ್ಟ್ 15, 1975ರಲ್ಲಿ ತೆರೆಗೆ ಬಂದಿರುವ ಚಿತ್ರ ಬಿಡುಗಡೆಯಾಗಿ 48 ವರ್ಷ ಕಳೆದಿದ್ರೂ ಈಗ್ಲೂ ಚಿತ್ರದ ಡೈಲಾಗ್, ಹಾಡುಗಳು ಜನರನ್ನು ಸೆಳೆಯುತ್ತವೆ.
H D Kumarswamy: ಸೂರಜ್ ರೇವಣ್ಣನ ಅಸಹಜ ಲೈಂಗಿಕ ಪ್ರಕರಣ – ಕೇಂದ್ರ ಸಚಿವ ಕುಮಾರಸ್ವಾಮಿ ರಿಯಾಕ್ಷನ್ ಹೀಗಿತ್ತು!!
ಅವತ್ತು ಶೋಲೆ ಚಿತ್ರವನ್ನು ರಮೇಶ್ ಸಿಪ್ಪಿ ನಿರ್ದೇಶಿಸಿ, ಈ ಚಿತ್ರವನ್ನು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ವಿಚಿತ್ರ ಅಂದರೆ ಚಿತ್ರ 25 ವಾರಗಳಿಗೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಓಡಿ, ಹಣ ದೋಚುವಲ್ಲಿ ಯಶಸ್ವಿಯಾಗಿತ್ತು.
ಒಟ್ಟಿನಲ್ಲಿ ಶೋಲೆ ಎಂಬ 3 ಕೋಟಿ ಬಜೆಟ್ ಚಿತ್ರ 35 ಕೋಟಿ ರೂಪಾಯಿ ಗಳಿಸಿತ್ತು. ಒಂದು ವೇಳೆ ಈಗ ಈ ಚಿತ್ರ ನಿರ್ಮಾಣವಾಗಿದ್ರೆ ಸ್ಟಾರ್ ಗಳಿಗೆ ನೀಡುವ ಸಂಭಾವನೆಯೇ ಇದಕ್ಕಿಂತ ಹೆಚ್ಚಾಗ್ತಿತ್ತು ಎಂಬ ಒಂದು ಅನಿಸಿಕೆ. ಹಾಗಿರುವಾಗ ದೊಡ್ಡ ದೊಡ್ಡ ನಟರ ದಂಡೇ ಇದ್ದ ಈ ಚಿತ್ರ 100 ಕೋಟಿಗಿಂತ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಲು ಸಾಧ್ಯವೇ ಇರಲಿಲ್ಲ.
ಸದ್ಯ ಬಾಲಿವುಡ್ (Bollywood) ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಚಿತ್ರಗಳಲ್ಲಿ ನಟಿಸುವ ಕಲಾವಿದರ ಸಂಭಾವನೆ ಈಗ ಕೋಟಿ ಲೆಕ್ಕದಲ್ಲಿದೆ. ಆದ್ರೆ ಶೋಲೆ (Sholay) ಚಿತ್ರದ ಸಮಯದಲ್ಲಿ ಚಿತ್ರದ ಬಂಡವಾಳವೆ ಕಡಿಮೆ ಇರ್ತಿತ್ತು. ಇನ್ನು ಕಲಾವಿದರು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಿರಲಿಲ್ಲ. ನಾವಿಂದು ಶೋಲೆ ಚಿತ್ರದ ಕಲಾವಿದರಿಗೆ ಎಷ್ಟು ಸಂಬಳ ಸಿಕ್ಕಿತ್ತು, ಯಾರು ಹೆಚ್ಚು ಸಂಭಾವನೆ ಪಡೆದಿದ್ರು ಅಂತ ನೋಡೋಣ.
ಹೌದು, ಶೋಲೆ ಚಿತ್ರದಲ್ಲಿ ಧರ್ಮೇಂದ್ರ, ಮ್ಯಾಕ್ ಮೋಹನ್, ಹೇಮಾ ಮಾಲಿನಿ, ಜಯಾ ಭಾದುರಿ, ಅಮಿತಾಬ್ ಬಚ್ಚನ್, ಸಂಜೀವ್ ಕುಮಾರ್ ಅಮ್ಜದ್ ಖಾನ್, ಅಸ್ರಾನಿ ಸೇರಿದಂತೆ ಅನೇಕ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಒಂದು ಲಕ್ಷ ಸಂಬಳ ನೀಡೋದೇ ದೊಡ್ಡ ವಿಷ್ಯವಾಗಿತ್ತು. ಅದರಲ್ಲೂ ಶೋಲೆ ಚಿತ್ರದಲ್ಲಿ ಅತಿ ಹೆಚ್ಚು ಸಂಬಳ ಸಿಕ್ಕಿದ್ದು ಧರ್ಮೇಂದ್ರ ಅವರಿಗೆ. ಅವರು ಈ ಚಿತ್ರಕ್ಕಾಗಿ 1 ಲಕ್ಷ 50 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ.
ಪ್ರಸ್ತುತ ನಟನೆ ಮೂಲಕ ಇಡೀ ಚಿತ್ರರಂಗವನ್ನೇ ಆಳ್ತಿರುವ ಸೂಪರ್ ಹಿಟ್ ಹೀರೋ ಅಮಿತಾಬ್ ಬಚ್ಚನ್ ಈಗ ಒಂದು ಚಿತ್ರಕ್ಕೆ 6 ಕೋಟಿ ಸಂಭಾವನೆ ಪಡೆಯುತ್ತಾರೆ. ಆಗ ಅವರಿಗೆ ಸಿಕ್ಕಿದ್ದು ಒಂದು ಲಕ್ಷ ರೂಪಾಯಿ ಸಂಬಳ. ಇನ್ನು ಸಂಜೀವ್ ಕುಮಾರ್ ಅವರು ಶೋಲೆ ಚಿತ್ರಕ್ಕೆ 1 ಲಕ್ಷ 25 ಸಾವಿರ ರೂಪಾಯಿ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಇನ್ನು ಡ್ರೀಮ್ ಗರ್ಲ್ ಎಂದೇ ಪ್ರಸಿದ್ಧಿ ಪಡೆದಿರುವ, ಬಸಂತಿ ಪಾತ್ರದಲ್ಲಿ ಮಿಂಚಿದ್ದ ಹೇಮಾ ಮಾಲಿನಿ 75 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದರು. ಜಯ ಭಾದುರಿ 35 ಸಾವಿರ ತೆಗೆದುಕೊಂಡ್ರೆ, ಅಮ್ಜದ್ ಖಾನ್ 50 ಲಕ್ಷ ರೂಪಾಯಿ ಹಾಗೂ ಆಸ್ರಾಣಿ 15 ಸಾವಿರ ರೂಪಾಯಿ ತೆಗೆದುಕೊಂಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
Jamun Fruit: ಎಚ್ಚರ! ನೇರಳೆ ಹಣ್ಣಿನ ಜೊತೆ ಈ ಪದಾರ್ಥಗಳನ್ನು ತಿನ್ನದಿರಿ!