Home Business Petrol-Diesel Price Hike: ರಾಜ್ಯ ಸರ್ಕಾರದಿಂದ ವಾಹನ ಸವಾರರಿಗೆ ಬಿಗ್ ಶಾಕ್- ಪೆಟ್ರೋಲ್, ಡೀಸೆಲ್...

Petrol-Diesel Price Hike: ರಾಜ್ಯ ಸರ್ಕಾರದಿಂದ ವಾಹನ ಸವಾರರಿಗೆ ಬಿಗ್ ಶಾಕ್- ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳ ಮಾಡಿ ಆದೇಶ !!

Petrol-Diesel Price Hike

Hindu neighbor gifts plot of land

Hindu neighbour gifts land to Muslim journalist

Petrol-Diesel Price Hike: ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್(Petrol – Diesel Price Hike) ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದ್ದು, ಸರ್ಕಾರದಿಂದ ಗೆಜೆಟ್ ಅಧಿಸೂಚನೆಯಲ್ಲಿ ಆದೇಶ ಹೊರಡಿಸಿಲಾಗಿದೆ.ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ(Karnataka) ಪೆಟ್ರೋಲ್, ಡೀಸೆಲ್ ದರ ತುಸು ಹೆಚ್ಚಾಗಲಿದೆ.

ತವರಿನ ಆಸ್ತಿ ಪಡೆಯಲು ಸರ್ಕಾರದಿಂದ ಮಹಿಳೆಯರಿಗೆ ಹೊಸ ರೂಲ್ಸ್!

ಹೌದು, ಗ್ಯಾರಂಟಿ ಯೋಜನೆಗಳನ್ನು(Congress Guarantees) ಜಾರಿಗೆ ತಂದು ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಪಿರುವ ರಾಜ್ಯ ಸರ್ಕಾರ ಇದೀಗ ಜನರಿಗೆ ಅನಿವಾರ್ಯ ಆಗಿರುವ, ಸಿಕ್ಕ ಸಿಕ್ಕ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದುವರೆಗೂ ಮದ್ಯದ ದರ ಏರಿಸಿ ಏರಿಸಿ ಮದ್ಯ ಪ್ರಿಯರ ಶಾಪಕ್ಕೆ ಗುರಿಯಾಗಿತ್ತು. ಆದರೀಗ ಸರ್ಕಾರದ ಕಣ್ಣು ಪೆಟ್ರೋಲ್, ಡೀಸೆಲ್ ಮೇಲೆ ಬಿದ್ದಿದೆ.

ರಾಜ್ಯ ಪತ್ರದಲ್ಲಿ ಏನಿದೆ?
ಚಿಲ್ಲರೆ ಮಾರಾಟ ತೆರಿಗೆ ಶೇ 25.92 ರಷ್ಟಿತ್ತು. ಈಗ ಶೇ 3.9ರಷ್ಟು ಹೆಚ್ಚಳ ಮಾಡಲಾಗಿದ್ದು, ಶೇ 29.84 ಕ್ಕೆ ಏರಿಕೆ ಮಾಡಲಾಗಿದೆ. ಡಿಸೇಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಈ‌ ಹಿಂದೆ ಶೇ 14.34 ರಷ್ಟಿತ್ತು. ಈಗ ಶೇ 4.1 ರಷ್ಟು ಹೆಚ್ಚಳ ಮಾಡಲಾಗಿದ್ದು, ಶೇ 18.44 ಕ್ಕೆ ಏರಿಕೆಯಾಗಲಿದೆ ಎಂಬುದಾಗಿ ತಿಳಿಸಿದೆ.

ಎಷ್ಟು ಹೆಚ್ಚಾಗಬಹುದು ರೇಟ್?
ವಾಹನ ಸವಾರರಿಗೆ ಬಿಗ್ ಶಾಕ್ ಅನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ನೀಡಿದೆ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ ಪರಿಣಾಮವಾಗಿ ಕರ್ನಾಟಕದಲ್ಲಿ ಪೆಟ್ರೋಲ್ ದರ ರೂ.3 ಹಾಗೂ ಡಿಸೇಲ್ ದರ ರೂ.3.50 ಪೈಸೆ ಹೆಚ್ಚಾಗುವ ಸಾಧ್ಯತೆ ಇದೆ.

ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಕೊನೆಯದಾಗಿ ಈ ಒಂದು ಪ್ರಯತ್ನ ಮಾಡಿ ನೋಡಿ!