Home Crime Renuka Swamy: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್: ತನಿಖಾಧಿಕಾರಿಯೇ ಎತ್ತಂಗಡಿ !

Renuka Swamy: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್: ತನಿಖಾಧಿಕಾರಿಯೇ ಎತ್ತಂಗಡಿ !

Actor Darshan arrested in Murder

Hindu neighbor gifts plot of land

Hindu neighbour gifts land to Muslim journalist

Renuka Swami: ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್‌ (Darshan )ಭಾಗಿಯಾಗಿದ್ದಾರೆ ಎನ್ನಲಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಪ್ರಮುಖ ಹಂತಕ್ಕೆ ತಲುಪುವ ಹೊತ್ತಲ್ಲೇ ತನಿಖಾಧಿಕಾರಿಯನ್ನು ಎತ್ತಂಗಡಿ ಮಾಡಲಾಗಿದೆ.

ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎ 1 ಆರೋಪಿಯಾಗಿ ಪವಿತ್ರಾ ಗೌಡರನ್ನ ಕೂಡಾ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಯಾವುದೇ ಒತ್ತಡಕ್ಕೂ ಮಣಿಯದೆ ಖಡಕ್ಕಾಗಿ ನಡೆಯುತ್ತಿದೆ ಎಂದು ಅನ್ನಿಸುವ ಬೆನ್ನಲ್ಲೇ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ. ಕೇಸ್ ನ ಪ್ರಾರಂಭದ ಹಂತದಿಂದಲೇ ಕಾಮಾಕ್ಷಿಪಾಳ್ಯದ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರು ತನಿಖಾಧಿಕಾರಿ ಆಗಿದ್ದರು. ಆದರೆ ಇದೀಗ ತನಿಖೆ ಬೇರೆಯವರ ಕೈಗೆ ಬಂದಿದೆ.

ದರ್ಶನ್ ಬಚಾವ್ ಮಾಡಲು ಸಚಿವರ ಭಾರೀ ಪ್ರಯತ್ನ ; ಪೋಲೀಸರಿಗೆ 128 ಸಲ ಕರೆ !! ಯಾರು ಗೊತ್ತಾ ಆ ಮಹಾ ಮಂತ್ರಿ ?

ಇಂದು ರೇಣುಕಾಸ್ವಾಮಿ ಕೊಲೆ‌ ಪ್ರಕರಣದ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದ್ದು, ಅಲ್ಲಿಗೆ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಎಂಬವರು ನೂತನ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಎಸಿಪಿ ಚಂದನ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಇಂದಿನಿಂದ ಮುಂದುವರಿಯಲಿದೆ.

ಸಿ.ಕೆ ಅಚ್ಚುಕಟ್ಟು‌ ಠಾಣೆಯಲ್ಲಿ ಗಿರೀಶ್ ನಾಯ್ಕ್ ಇದ್ದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರನ್ನು ಕಾಮಾಕ್ಷಿಪಾಳ್ಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಈಗ ಎರಡು ದಿನಗಳ‌ ಹಿಂದೆ ಪುನಃ ವಾಪಸ್ ತಮ್ಮ ಠಾಣೆಗಳಿಗೆ ಹೋಗಲು ಆದೇಶ ಬಂದಿದ್ದು, ಈ ಮಧ್ಯೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆ ಅವರ ಪಾಲಾಗಿತ್ತು.

ಗಿರೀಶ್ ನಾಯ್ಕ್ ಈ ಇಡೀ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ನಟ ದರ್ಶನ್‌, ಪವಿತ್ರ ಗೌಡ ಸೇರಿದಂತೆ ಒಟ್ಟು 14 ಜನರನ್ನು ಬಂಧಿಸಿ ಕೇಸ್‌ನ್ನು ಸಮರ್ಥವಾಗಿ ನಡೆಸುವಂತಹ ಹೆಜ್ಜೆ ಹಾಕಿದ್ದರು. ಆದ್ರೆ ಈಗ ಗಿರೀಶ್ ನಾಯ್ಕ್ ಸಿ.ಕೆ ಅಚ್ಚುಕಟ್ಟು ಠಾಣೆಗೆ ವಾಪಸ್ ಹಿನ್ನಲೆಯಲ್ಲಿ ವಿಜಯನಗರ ಉಪವಿಭಾಗ ಎಸಿಪಿ ಚಂದನ್ ನೂತನ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ತನಿಖೆಯ ವೇಗ ಸಹಜವಾಗಿ ಕುಂಠಿತವಾಗಲಿದೆ. ಇದು ಸಹಜ ಟ್ರಾನ್ಸ್ಫರ್ ನಾ ಅಥವಾ ರಾಜಕೀಯ ಒತ್ತಡಕ್ಕೆ ಮಣಿದು ಗಿರೀಶ್ ನಾಯಕ್ ಅವರನ್ನು ಟ್ರಾನ್ಸ್ಫರ್ ಮಾಡಲಾಗಿದೆಯಾ ಎಂಬ ಬಗ್ಗೆ ಮಾಹಿತಿ ಇಲ್ಲ.

ಮಾಜಿ ಸಿಎಂ ಯಡಿಯೂರಪ್ಪರಿಗೆ ಜಾಮೀನು ರಹಿತ ವಾರಂಟ್, ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ !