Home Entertainment Actor Darshan : ‘ಪ್ಲೀಸ್ ಒಂದು ಸಿಗರೇಟ್ ಕೊಡಿಸಿ’ ಎಂದು ಮನವಿ ಮಾಡಿದ ದರ್ಶನ್- ಚಾಕ್ಲೇಟ್...

Actor Darshan : ‘ಪ್ಲೀಸ್ ಒಂದು ಸಿಗರೇಟ್ ಕೊಡಿಸಿ’ ಎಂದು ಮನವಿ ಮಾಡಿದ ದರ್ಶನ್- ಚಾಕ್ಲೇಟ್ ಕೊಡಿಸಿ ಸುಮ್ಮನಾಗಿಸಿದ ಪೊಲೀಸ್ !!

Actor Darshan

Hindu neighbor gifts plot of land

Hindu neighbour gifts land to Muslim journalist

Actor Darshan : ಚಿತ್ರದುರ್ಗ(Chitradurga) ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ(Renukaswamy Murder Case) ಸಂಬಂಧ ದರ್ಶನ್ ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳು ಪೋಲೀಸರ ಅತಿಥಿಯಾಗಿದ್ದಾರೆ. ಸದ್ಯ ಪೊಲೀಸರ ಬಂಧನದಲ್ಲಿರುವ ದರ್ಶನ್(Actor Darshan) ಟೆನ್ಷನ್ ತಾಳಲಾರದೇ ಸಿಗರೇಟ್(Cigarette )ಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಆದರೆ ಪೋಲೀಸರು ಚಾಕೊಲೇಟ್ ಕೊಡಿಸಿದ್ದಾರೆ ಎನ್ನಲಾಗಿದೆ.

ಮಂಗಳೂರು: ಬಿಎಂಡಬ್ಲ್ಯೂ ಕಾರಿನಲ್ಲಿ ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿ ; ಸ್ಥಳೀಯರಿಗೆ ಸಿಕ್ಕಿಬಿದ್ದ ವಿದ್ಯಾರ್ಥಿಗಳು

ಹೌದು, ಕೊಲೆ ಪ್ರಕರಣದಲ್ಲಿ ಸದ್ಯ 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ದರ್ಶನ್‌ ವಿಚಾರಣೆ ವೇಳೆ ‘ದಯಮಾಡಿ ಒಂದೇ ಒಂದು ಸಿಗರೇಟ್‌ (Cigarette) ಕೊಡಿಸಿ, ಕೈಗಳು ನಡುಗುತ್ತಿವೆ’ ಅಂತ ದರ್ಶನ್ ಅವರು ಪೊಲೀಸರಿಗೆ ಬೇಡಿಕೊಂಡಿದ್ದಾರೆ. ಇದಕ್ಕೆ ಗರಂ ಆದ ಪೊಲೀಸರು, ಸಿಗರೇಟ್‌ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಪೊಲೀಸ್‌ ಠಾಣೆಯಲ್ಲಿ ನಿನ್ನೆಯಿಂದಲೂ ಊಟ ಮಾಡದ ದರ್ಶನ್​ ಕೇವಲ ಜ್ಯೂಸ್ ಮತ್ತು ಮಜ್ಜಿಗೆ ಮಾತ್ರ ಕುಡಿಯುತ್ತಿದ್ದಾರೆ. ನಿನ್ನೆ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ ಇಡ್ಲಿ ತಿಂದಿದ್ದ ದರ್ಶನ್, ಮಧ್ಯಾಹ್ನನೂ ಏನು ಊಟ ಮಾಡಿರಲಿಲ್ಲ. ಸಂಜೆ ಕೂಡ ಊಟ ಬೇಡವೆಂದು ಮಜ್ಜಿಗೆ ಕುಡಿದು ಮಲಗಿದ್ದರು. ಇಂದು ಕೂಡ ತಿಂಡಿಗೆ ನಿರಾಕರಿಸಿರುವ ದರ್ಶನ್‌ ಟೆನ್ಷನ್​​ನಲ್ಲಿ ಸಿಗರೇಟ್​ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಶುಗರ್‌ ಕಡಿಮೆಯಾಗುವ ಆತಂಕ
ಬುಧವಾರ ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟ ಸೇವನೆಗೆ ನಟ ಮತ್ತೆ ನಿರಾಕರಿಸಿದ್ದಾರೆ. ರಾತ್ರಿ ಪೂರ್ತಿ ನಿದ್ದೆ ಮಾಡದೇ ಸೆಲ್‌ನಲ್ಲಿ ಹಾಗೆಯೇ ಕುಳಿತಿದ್ದರು ಎನ್ನಲಾಗಿದೆ. ಹೀಗಾಗಿ, ರಕ್ತದ ಸಕ್ಕರೆ ಪ್ರಮಾಣ ಇಳಿಕೆಯಾಗಬಹುದು. ಅನಾರೋಗ್ಯಕ್ಕೀಡಾಗಬಹುದು ಎಂದು ಪೊಲೀಸರು ಆತಂಕಕ್ಕೆ ಒಳಗಾಗಿದ್ದಾರೆ. ಚಾಕೋಲೆಟ್‌ ತಂದು ಕೊಟ್ಟು ತಿನ್ನುವಂತೆ ಪೊಲೀಸರು ನಟನಿಗೆ ಒತ್ತಾಯ ಮಾಡಿದ್ದಾರೆ.

ಇನ್ನು ವಿಚಾರಣೆಯಲ್ಲಿ ನಾನು ಏನು ತಪ್ಪು ಮಾಡಿಲ್ಲ, ನನಗೆ ಗೊತ್ತಿಲ್ಲ. ನಾನು ಕೊಲೆ ಮಾಡಲು ಹೇಳಿಲ್ಲ, ಮಾಡಿಸಿಯೂ ಇಲ್ಲ ಎಂದು ಅಲವತ್ತುಕೊಂಡಿದ್ದಾರೆ. ಆದರೆ ತನಿಖೆಯಲ್ಲಿ ದರ್ಶನ್‌ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ. ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನೆ ಕೇಳಿದರೆ ಆಗ ಸೈಲೆಂಟ್‌ ಆಗುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Udupi: ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣ; ಅತುಲ್‌ ರಾವ್‌ ಖುಲಾಸೆ