Krithi Shetty: ‘ನಾನು ಸಿಂಗಲ್ ಅಲ್ಲ, ರಿಲೇಷನ್‌ಶಿಪ್‌ನಲ್ಲಿದ್ದೇನೆ’ ಎಂದು ಅಭಿಮಾನಿಗಳಿಗೆ ಶಾಕ್ ಕೊಟ್ಟ ಕೃತಿ ಶೆಟ್ಟಿ – ಯಾರು ಆ ಹುಡುಗ !!
Krithi Shetty: ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾದ ಕೃತಿ ಶೆಟ್ಟಿ(Krithi Shetty) ಅವರು ‘ಸಂದರ್ಶನವೊಂದರಲ್ಲಿ ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ’ ಎಂದು ಹೇಳಿ ಪಡ್ಡೆಹುಡುಗರಿಗೆ ಹಾಗೂ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಇದನ್ನೂ ಓದಿ: NOTA: ಧರ್ಮಸ್ಥಳದ ದಿ. ಸೌಜನ್ಯಾಳಿಗೆ 20 ಸಾವಿರಕ್ಕೂ ಅಧಿಕ ಮತ !! ನ್ಯಾಯದ ಹೋರಾಟಕ್ಕೆ ದ.ಕ ದಲ್ಲಿ ಅಭೂತಪೂರ್ವ ಬೆಂಬಲ
ದಕ್ಷಿಣ ಭಾರತ ಸಿನಿಮಾಗಳಲ್ಲಿ ಆರಂಭದ ದಿನಗಳಲ್ಲಿ ಹೊಸ ಭರವಸೆ ಮೂಡಿಸಿದ್ದ ಮಂಗಳೂರು ಮೂಲದ ಚೆಲುವೆ ಕೃತಿ ಶೆಟ್ಟಿ(Krithi Shetty) ತನ್ನ ಸಿನಿಮಾಗಳು ಫ್ಲಾಪ್ ಆದ ಕಾರಣ ಹಾಗೂ ಅವಕಾಶ ವಂಚಿತಳಾದ ಕಾರಣ ಎಲ್ಲಾ ನಿರ್ಮಾಪಕರಿಗೆ ಬಿಗ್ ಆಫರ್ ನೀಡಿ ತಾನು ಬೋಲ್ಡ್ ಸೀನ್ ಗಳಲ್ಲಿ ನಟಿಸಲು ರೆಡಿ ಎಂದು ಭಾರೀ ಸುದ್ದಿಯಾಗಿದ್ರು. ಆದರೀಗ ನಟಿ ಮತ್ತೊಂದು ವಿಚಾರಕ್ಕಾಗಿ ಸುದ್ದಿಯಾಗುತ್ತಿದ್ದಾರೆ.
ಇದನ್ನೂ ಓದಿ: Karnataka : ರಾಜ್ಯದ ಈ 4 ಕ್ಷೇತ್ರಗಳಿಗೆ ಉಪ ಚುನಾವಣೆ !!
ಹೌದು, ಶರ್ವಾನಂದ್‌ಗೆ ಜೋಡಿಯಾಗಿ ನಟಿಸಿರುವ ಕೃತಿ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ಕೊಡ್ತಿದ್ದು ಸಿನಿಮಾ ಮಾತ್ರವಲ್ಲ ವೈಯಕ್ತಿಕ ಬದುಕಿನ ಬಗ್ಗೆ ನಟಿ ಓಪನ್ ಆಗಿ ಮಾತನಾಡಿದ್ದಾರೆ. ಈ ವೇಳೆ ನಿರೂಪಕಿ, ನೀವು ಸಿಂಗಲ್ ಆಗಿದ್ದೀರಾ? ಅಥವಾ ರಿಲೇಷನ್‌ಶಿಪ್‌ನಲ್ಲಿದ್ದೀರಾ? ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಟಿ ಸಿಂಗಲ್ ಅಲ್ಲ, ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ನಟಿ ಉತ್ತರಿಸಿದ್ದಾರೆ. ಒಂದು ಕ್ಷಣ ಕೃತಿ ಉತ್ತರ ಕೇಳಿ ಅಭಿಮಾನಿಗಳು ದಂಗಾದರು.
ಬಳಿಕ ಯಾರೊಂದಿಗೆ ಎಂಗೇಜ್ ಆಗಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ನಗುತ್ತಾ ನಾನು ನನ್ನ ಕೆಲಸದ ಜೊತೆ ಎಂಗೇಜ್ ಆಗಿದ್ದೇನೆ ಎಂದು ಕೃತಿ ಶೆಟ್ಟಿ ಜಾಣ್ಮೆಯ ಉತ್ತರ ನೀಡಿದ್ದರು. ಆ ನಂತರ ಕೆಲಸದ ಜೊತೆ ಬ್ಯುಸಿ ಇದ್ದೇನೆ ಎಂಬ ಉತ್ತರ ಬಂದ್ಮೇಲೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.