Puttur: ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ; ವಿಶೇಷ ಸರಕಾರಿ ಅಭಿಯೋಜಕರಾಗಿ ನ್ಯಾಯವಾದಿ ಮಹೇಶ್ ಕಜೆ ನೇಮಕ
Puttur: ಕಲ್ಲೇಗ ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದೀಗ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದ್ದು, ಪುತ್ತೂರಿನ ಖ್ಯಾತ ವಕೀಲರಾದ ಮಹೇಶ್ ಕಜೆಯವರನ್ನು ಈ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕರಾಗಿ ಕರ್ನಾಟಕ ಸರಕಾರ ಆದೇಶ ಮಾಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Exit Poll Results: ಎಕ್ಸಿಟ್ ಪೋಲ್- 2019, 2014 ರಲ್ಲಿ ಏನಾಗಿತ್ತು, ಸಮೀಕ್ಷೆಗಳು ಹೇಳಿದ್ದು ಎಷ್ಟರಮಟ್ಟಿಗೆ ಸತ್ಯವಾಗಿತ್ತು ?
ಅಕ್ಷಯ್ ಕಲ್ಲೇಗ ಅವರ ತಂದೆ ಚಂದ್ರಶೇಖರ ಗೌಡರು ಹತ್ಯೆ ಪ್ರಕರಣಕ್ಕೆ ಕುರಿತಂತೆ ನ್ಯಾಯಾಲಯದಲ್ಲಿ ಪೊಲೀಸ್ ಇಲಾಖೆ ಪರ ಸಮರ್ಪಕವಾಗಿ ವಾದ ಮಾಡಲು ಸರಕಾರಿ ಅಭಿಯೋಜಕರ ಜೊತೆ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಕ ಮಾಡಲು ಒತ್ತಾಯ ಮಾಡಿದ್ದರು.
ಇದನ್ನೂ ಓದಿ: Dakshina Kannada: ದ.ಕ; ಜೂ.4 ಪಕ್ಷಗಳ ವಿಜಯೋತ್ಸವಕ್ಕೆ ನಿಷೇಧ-ದ.ಕ.ಜಿಲ್ಲಾಧಿಕಾರಿ ಆದೇಶ
ಹಾಗಾಗಿ ಮೂರು ನ್ಯಾಯವಾದಿಗಳ ಹೆಸರನ್ನು ಮೃತ ಅಕ್ಷಯ್ ಕಲ್ಲೇಗ ಅವರ ತಂದೆ ಕೋರಿಕೆ ಸಲ್ಲಿಸಿದ್ದರು. ಈ ಪೈಕಿ ಮಹೇಶ್ ಕಜೆ ಅವರನ್ನು ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಈ ಪ್ರಕರಣದ ಅಭಿಯೋಜಕರಾಗಿ ಕುಂದಾಪುರದ ಜಯಂತಿ ಕೆ. ಅವರು ವಾದ ಮಾಡುತ್ತಿದ್ದು, ಅವರಿಗೆ ಮಹೇಶ್ ಕಜೆ ಅವರ ಸಾಥ್ ದೊರೆಯಲಿದೆ.